»   » ವೀಕೆಂಡ್ ನಲ್ಲಿ ಅಮೋಘ ಕ್ಷಣಗಳ ಮೆಲುಕು ಹಾಕಲಿದ್ದಾರೆ ಲೀಲಾವತಿ

ವೀಕೆಂಡ್ ನಲ್ಲಿ ಅಮೋಘ ಕ್ಷಣಗಳ ಮೆಲುಕು ಹಾಕಲಿದ್ದಾರೆ ಲೀಲಾವತಿ

Posted By:
Subscribe to Filmibeat Kannada

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ವೀಕೆಂಡ್ ವಿತ್ ರಮೇಶ್' ಎಲ್ಲರ ಅಚ್ಚುಮೆಚ್ಚಿನ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಅನೇಕ ಸಾಧಕರು ತಮ್ಮ ನೆನಪಿನಾಳದ ಬುತ್ತಿ ಬಿಚ್ಚಿಡುತ್ತಾರೆ.

ಕಳೆದ ವಾರ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಅವರು ವೀಕೆಂಡ್ ಕಾರ್ಯಕ್ರಮಕ್ಕೆ ಆಗಮಿಸಿ ತಮ್ಮ ಜೀವನದ ಸಿಹಿ-ಕಹಿ ಅನುಭವಗಳನ್ನು ಹಂಚಿಕೊಂಡರು. ಇದೀಗ ಈ ಬಾರಿ ಒಬ್ಬರು ಸ್ಪೆಷಲ್ ಗೆಸ್ಟ್ ಆಗಮಿಸಲಿದ್ದಾರೆ.[ಲೀಲಾವತಿ ಚಿತ್ರರಂಗದಿಂದ ದೂರವಾದದ್ದು ಯಾಕೆ?]

Senior Actress Leelavathi in Weekend with Ramesh

ಹೌದು ಕನ್ನಡ ಚಿತ್ರರಂಗದ ಮೇರು ನಟಿ ಕಮ್ ಹಿರಿಯ ನಟಿ ಲೀಲಾವತಿ ಅವರು ಈ ವಾರದ ವೀಕೆಂಡ್ ಸಾಧಕರ ಸೀಟ್ ನಲ್ಲಿ ವಿರಾಜಮಾನರಾಗಲಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸುಮಾರು 400 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಚಂದನವನಕ್ಕೆ ತಮ್ಮದೇ ಆದ ಕೊಡುಗೆ ನೀಡಿದ ಹೆಗ್ಗಳಿಕೆ ಹಿರಿಯ ನಟಿ ಲೀಲಾವತಿ ಅವರದು.[ಹಿರಿಯ ನಟಿ ಲೀಲಾವತಿ ಅಸ್ವಸ್ಥ: ಆಸ್ಪತ್ರೆಗೆ ದಾಖಲು]

ಬರೋಬ್ಬರಿ 50 ವರ್ಷದ ಸಿನಿ ಜರ್ನಿಯನ್ನು ಪೂರೈಸಿರುವ ಹಿರಿಯ ನಟಿ ಲೀಲಾವತಿ ಅವರು ತಮ್ಮ ಕಳೆದು ಹೋದ ದಿನಗಳನ್ನು ಮತ್ತು ಸಿನಿಮಾ ರಂಗದ ಬಗ್ಗೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಮೆಲುಕು ಹಾಕಲಿದ್ದಾರೆ.

Senior Actress Leelavathi in Weekend with Ramesh

ಇವರು ವರನಟ ಡಾ.ರಾಜ್ ಕುಮಾರ್, ಡಾ.ವಿಷ್ಣುವರ್ಧನ್, ಎಂ.ಜಿ ರಾಮಚಂದ್ರ, ಎನ್.ಟಿ.ರಾಮ ರಾವ್, ಶಿವಾಜಿ ಗಣೇಶನ್, ಜೆಮಿನಿ ಗಣೇಶನ್, ಶಂಕರ್ ನಾಗ್, ಕಮಲ್ ಹಾಸನ್, ರಜಿನಿಕಾಂತ್, ಮತ್ತು ಚಿರಂಜೀವಿ ಮುಂತಾದವರ ಜೊತೆ ನಟಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ.[ಹಿರಿಯ ನಟಿ ಲೀಲಾವತಿ ಕಣ್ಣೀರೊರೆಸುವವರು ಯಾರೂ ಇಲ್ವೇ?]

ಹಿರಿಯ ನಟಿ ಲೀಲಾವತಿ ಅವರು ತಮ್ಮ ಬದುಕಿನ ಅಮೋಘ ಕ್ಷಣಗಳನ್ನು ಈ ವಾರದ ವೀಕೆಂಡ್ ನಲ್ಲಿ ಮೆಲುಕು ಹಾಕಿದ್ದಾರೆ. ಎಲ್ಲರೂ ತಪ್ಪದೇ ಈ ವೀಕೆಂಡ್ ರಾತ್ರಿ 9 ಘಂಟೆಗೆ ಜೀ ಕನ್ನಡ ವಾಹಿನಿ ವೀಕ್ಷಿಸಿ.

English summary
Senior Actress Leelavathi recently attended the 'Weekend with Ramesh - 2' and shared her experiences.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada