For Quick Alerts
  ALLOW NOTIFICATIONS  
  For Daily Alerts

  ತಾವರೆಕೆರೆ ಭೂತಬಂಗಲೆಯಲ್ಲಿ ಶಕೀಲಾ ಶಕಲಕ ಡಾನ್ಸ್

  By ರವಿಕಿರಣ್
  |

  ಒಂದು ಕಾಲದಲ್ಲಷ್ಟೇ ಅಲ್ಲ ಈಗಲೂ ಅಷ್ಟೆ ನಟಿ ಶಕೀಲಾ ಹೆಸರು ಕೇಳಿದರೇನೇ ಏನೋ ಒಂಥರಾ ಕಳೆದುಹೋಗುವ ಬಹಳಷ್ಟು ಅಭಿಮಾನಿಗಳಿದ್ದಾರೆ. ಈಗವರ ದೇಹದ ಗಾತ್ರ ಮುಂಚಿನಂತಿಲ್ಲ ಎಂಬುದನ್ನು ಬಿಟ್ರೆ ಶಕೀಲಾ ಚಿತ್ರಗಳೆಂದರೆ ಒಂದು ಕುತೂಹಲವಂತೂ ಇದ್ದೇ ಇದೆ.

  ತುಂಬಿದ ಕೊಡದಂತಿರುವ ಈ ತುಂಬುಗೆನ್ನೆ ನಟಿ ಈ ಹಿಂದೆ 'ಸಂಸಾರದಲ್ಲಿ ಗೋಲ್ ಮಾಲ್ 2' ಎಂಬ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಚಾನ್ಸ್, ನೈಂಟಿ ಹಾಗೂ ಸಾಗರ ಎಂಬ ಚಿತ್ರಗಳಲ್ಲೂ ಶಕೀಲಾ ಅಭಿನಯಿಸಿದ್ದಾರೆ. ಎಲ್ಲ ಚಿತ್ರಗಳಲ್ಲೂ ಶಕೀಲಾ ಅವರ ಪಾತ್ರಗಳು ಹೆಚ್ಚು ಕಡಿಮೆ ಒಂದೇ ತೆರೆನಾಗಿರುತ್ತವೆ.

  ಆದರೆ ಈಗ ಮತ್ತೆ ಶಕೀಲಾ ಕನ್ನಡಕ್ಕೆ ಅಡಿಯಿಟ್ಟಿದ್ದಾರೆ. ಈ ಬಾರಿ 'ಪಾತರಗಿತ್ತಿ' ಚಿತ್ರದಲ್ಲಿ ಅವರದು ಪ್ರಮುಖ ಪಾತ್ರ. ಈ ಮೂಲಕ 'ಪಾತರಗಿತ್ತಿ' ಸಿನೆಮಾಕ್ಕೊಂದು ಗಟ್ಟಿಗಿತ್ತಿ ಆಗಮನ ಆಗಿದೆ. ತಾವರೆಕೆರೆಯ ಭೂತ ಬಂಗಲೆಯಲ್ಲಿ ಶಕೀಲಾ ಕುಣಿದು ಕುಪ್ಪಳಿಸಿದ್ದಾರೆ.

  ಪಡ್ಡೆಗಳ ಹೃದಯಬಡಿತ ಹೆಚ್ಚಿಸುವ ಹಾಡು

  ಪಡ್ಡೆಗಳ ಹೃದಯಬಡಿತ ಹೆಚ್ಚಿಸುವ ಹಾಡು

  ಮೂರು ದಿವಸಗಳಲ್ಲಿ ಈ ಹಾಡನ್ನು ಚಿತ್ರಿಕರಿಸಿಕೊಳ್ಳಲಾಗಿದೆ. ಇದೊಂದು ಹೃದಯ ಬಡಿತ ಹೆಚ್ಚಿಸು ಹಾಡಂತೂ ಗ್ಯಾರಂಟಿ ಎನ್ನಬಹುದು. 'ಪಾತರಗಿತ್ತಿ' ಸಿನೆಮಾ 37 ದಿವಸಗಳಲ್ಲಿ ಮಾತಿನ ಭಾಗದ ಚಿತ್ರೀಕರಣ ಮುಗಿಸಿ ಕೇವಲ ಎರಡು ದಿವಸದ ಪ್ಯಾಚ್ ವರ್ಕ್ ಹಾಗೂ ಮೂರು ಹಾಡುಗಳನ್ನು ಮಾತ್ರ ಸೆರೆ ಹಿಡಿಯಬೇಕಿದೆ.

  ಕೆ ಈಶ್ವರ್ ಸ್ವತಂತ್ರ ನಿರ್ದೇಶನದ ಚಿತ್ರ

  ಕೆ ಈಶ್ವರ್ ಸ್ವತಂತ್ರ ನಿರ್ದೇಶನದ ಚಿತ್ರ

  ಸಿನಿ ಸ್ಟಾಲ್ ಅವರ ಪ್ರಥಮ ಕಾಣಿಕೆ ಕೆ ಈಶ್ವರಪ್ಪ ಅವರು (ನಿರ್ದೇಶಕ ಕೆ ಈಶ್ವರ್) ನಿರ್ಮಾಪಕರು. ಮಂಜುನಾಥ್ ಈ ಚಿತ್ರದ ಸಹ ನಿರ್ಮಾಪಕರು. ಪಾತರಗಿತ್ತಿ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ನಿರ್ದೇಶನ ಕೆ ಈಶ್ವರ್ ಅವರದು. ಕಳೆದ ಹತ್ತು ವರ್ಷಗಳಿಂದ ಸಹ ನಿರ್ದೇಶಕರಾಗಿ ಕೆಲಸ ಮಾಡಿ ಈಗ ಸ್ವತಂತ್ರ ನಿರ್ದೇಶಕರಾಗಿ ಈ ಚಿತ್ರದ ಮೂಲಕ ಪರಿಚಯವಾಗುತ್ತಿದ್ದಾರೆ.

  ಹೆಣ್ಣಿನ ಚಂಚಲ ಮನಸ್ಸಿನ ಕಥೆ

  ಹೆಣ್ಣಿನ ಚಂಚಲ ಮನಸ್ಸಿನ ಕಥೆ

  ಬದಲಾವಣೆ ಜಗತ್ತಿನ ನಿಯಮ. ಇದನ್ನೇ ಹೆಣ್ಣಿನ ದೃಷ್ಟಿಯಲ್ಲಿ ಇಟ್ಟುಕೊಂಡಿ ಹಲವಾರು ರೀತಿಯ ಬದಲಾವಣೆಯನ್ನು ತೆರೆಯಮೇಲೆ ಹೇಳಲಿದ್ದಾರೆ. ಹೆಣ್ಣಿನ ಮನಸ್ಸು ಚಂಚಲ. ಚಿಟ್ಟೆಯಂತೆ ಹಾರಾಡುತ್ತಲೆ ಇರುತ್ತದೆ ಎಂದು ಸೂಚ್ಯವಾಗಿ ನಿರ್ದೇಶಕರು ಹೇಳಲಿದ್ದಾರೆ.

  ರಾಕೇಶ್ ಸಿ ತಿಲಕ್ ಈ ಚಿತ್ರದ ಛಾಯಾಗ್ರಹಣ

  ರಾಕೇಶ್ ಸಿ ತಿಲಕ್ ಈ ಚಿತ್ರದ ಛಾಯಾಗ್ರಹಣ

  'ಪಾತರಗಿತ್ತಿ' ಚಿತ್ರಕ್ಕೆ ಸಂಗೀತವನ್ನು ವೆಂಕಟಸ್ವಾಮಿ ಅವರು ಬಹುತೇಕ ಪೂರೈಸಿ ಅಸುನೀಗಿದರು. ಅವರ ಕೆಲಸವನ್ನು ಸಮೀರ ಕುಲಕರ್ಣಿ ಅವರು ಮಾಡಲಿದ್ದಾರೆ. ರಾಕೇಶ್ ಸಿ ತಿಲಕ್ ಈ ಚಿತ್ರದ ಛಾಯಾಗ್ರಾಹಕರು.

  ಶ್ರೀಕಿಗೆ ಜೊತೆಯಾಗಿ ಪ್ರಜ್ಜು ಪೂವಯ್ಯ

  ಶ್ರೀಕಿಗೆ ಜೊತೆಯಾಗಿ ಪ್ರಜ್ಜು ಪೂವಯ್ಯ

  ನಾಯಕನಾಗಿ ಶ್ರೀಕಿ, ನಾಯಕಿ ಆಗಿ ಪ್ರಜ್ಜು ಪೂವಯ್ಯ ಇದ್ದಾರೆ. ತಬಲಾ ನಾಣಿ, ಲಕ್ಕಿ ಶಂಕರ್, ರಾಜು ತಾಳಿಕೋಟೆ, ಲಯೇಂದ್ರ, ಮಿತ್ರ, ಬುಲ್ಲೆಟ್ ಪ್ರಕಾಷ್, ನಾಗರಾಜ್, ಬ್ರಹ್ಮವರ್, ಶಾಂತಮ್ಮ, ಚಿಕ್ಕಣ್ಣ, ಕುರಿ ಪ್ರತಾಪ್, ರಾಮನಯಕ್, ನೀಲಕಂತಸ್ವಾಮಿ ಪೋಷಕ ಪಾತ್ರಗಳಲ್ಲಿ ಇದ್ದಾರೆ.

  ಮಾಲೂರು ಶ್ರೀನಿವಾಸ್ ನೃತ್ಯ ನಿರ್ದೇಶನ

  ಮಾಲೂರು ಶ್ರೀನಿವಾಸ್ ನೃತ್ಯ ನಿರ್ದೇಶನ

  ಗಣೇಶ್ ಎಂ ಅವರ ಸಂಕಲನ, ಮದನ್ ಹರಿಣಿ, ಸದಾ ರಾಘವ್, ಮಾಲೂರು ಶ್ರೀನಿವಾಸ್ ಅವರ ನೃತ್ಯ ನಿರ್ದೇಶನ, ಮಾಸ್ ಮಾಧ ಅವರ ಸಾಹಸ, ಕೆ ವಿ ರಾವ್ ಅವರ ಕಲೆ ಈ ಚಿತ್ರಕ್ಕಿದೆ.

  English summary
  After a long break South Indian actress Shakeela, who is popular for softcore and B movies, is back to Kannada films. She is doing a item number in Pataragitti film which leads Sreeki (Srikanth) and Praju Poovaiah.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X