»   » ಮೈಕ್ ಹಿಡಿದ 'ರಾಜ ರಾಜೇಂದ್ರ'ನ ಕಾಲುಗಳು ಗಡಗಡ

ಮೈಕ್ ಹಿಡಿದ 'ರಾಜ ರಾಜೇಂದ್ರ'ನ ಕಾಲುಗಳು ಗಡಗಡ

Posted By:
Subscribe to Filmibeat Kannada

'ಹೀರೋ'ಗಳು ಏನ್ ಬೇಕಾದರೂ ಮಾಡ್ತಾರೆ. ವಿಲನ್ ಗಳನ್ನ ಅಟ್ಟಾಡಿಸಿ ಹೊಡೆಯೋದ್ರಿಂದ ಹಿಡಿದು 'ಹೀರೋಯಿನ್'ಗಳನ್ನ ಮೆಚ್ಚಿಸುವವರೆಗೂ ಹೀರೋಗಳು ಎಲ್ಲಾದರಲ್ಲೂ ರೆಡಿ.

ತೆರೆ ಮೇಲೆ ಹೀರೋಗಳು ಇಷ್ಟೆಲ್ಲಾ ಸಾಹಸ ಮಾಡಿ ಶಿಳ್ಳೆ ಗಿಟ್ಟಿಸುವ ಜೊತೆಗೆ ತೆರೆ ಹಿಂದೆ ಕೂಡ ಹಾಡು ಹಾಡುವ ಸಾಹಸಕ್ಕೆ ಕೈ ಹಾಕಿ ಜನಪ್ರಿಯರಾಗುತ್ತಿದ್ದಾರೆ. ಅದ್ರಲ್ಲಿ ನಮ್ಮ ಪುನೀತ್ ರಾಜ್ ಕುಮಾರ್, ಸುದೀಪ್, ವಿಜಯ್ ರಾಘವೇಂದ್ರ, ಗಣೇಶ್, ಉಪೇಂದ್ರ, ಕೋಮಲ್ ಮತ್ತು ಇತ್ತೀಚೆಗಷ್ಟೇ ಯಶ್ ಗಾನಸುಧೆ ಹರಿಸಿ ಯಶಸ್ವಿಯಾಗಿದ್ದಾರೆ. ['ಅಣ್ತಮ್ಮ'ನಿಗಾಗಿ ಗಾಯಕನಾದ ಯಶ್ ಅಸಲಿ ಕಥೆ]

Sharan turns singer for Raja Rajendra

ಇದೀಗ ಇದೇ ಪಟ್ಟಿಗೆ ಸೇರ್ಪಡೆಯಾಗುತ್ತಿರುವುದು ನಾಯಕ ನಟ ಶರಣ್. ಕಾಮಿಡಿ ಕಿಂಗ್ ಆಗಿದ್ದ ಶರಣ್ 'ನಾಯಕ'ನಾಗಿ ಬಡ್ತಿ ಪಡೆದ ಮೇಲೆ ಗಾಯಕನಾಗುತ್ತಿರುವುದು 'ರಾಜ ರಾಜೇಂದ್ರ'ನಿಗಾಗಿ.

'ಅಧ್ಯಕ್ಷ' ಸೂಪರ್ ಡ್ಯೂಪರ್ ಹಿಟ್ ಆದ್ಮೇಲೆ ಶರಣ್ ಅಭಿನಯಿಸುತ್ತಿರುವ ಸಿನಿಮಾ 'ರಾಜ ರಾಜೇಂದ್ರ'. ಈಗಾಗ್ಲೇ ರಾಜನಾಗಿ ಭರ್ಜರಿ ಪೋಸ್ ಗಳನ್ನ ನೀಡಿರುವ ಶರಣ್, ಚಿತ್ರದ ಹಾಡೊಂದಕ್ಕೆ ದನಿಯಾಗಿದ್ದಾರೆ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

Sharan turns singer for Raja Rajendra2

ನಿಜ ಹೇಳ್ಬೇಕಂದ್ರೆ ಶರಣ್, ರ್ಯಾಂಬೋ ಚಿತ್ರದಲ್ಲೇ ಗಾನ ಸುಧೆ ಹರಿಸಬೇಕಿತ್ತು. ಆದ್ರೆ ಈಗ ಬೇಡ, ಆಗ ಬೇಡ ಅಂತ ಮುಂದಕ್ಕೆ ತಳ್ಳುತ್ತಾನೇ ಬಂದ ಶರಣ್, ಕೊನೆಗೂ ಹಾಡುವುದಕ್ಕೆ ಒಪ್ಪಿಕೊಂಡು ಬಿಟ್ಟಿದ್ದಾರೆ.

ಹಾಡು ಹಾಡುವುದಕ್ಕೆ ಶರಣ್ ಏನೋ ಒಪ್ಪಿಕೊಂಡು ಬಿಟ್ರು. ಆದ್ರೆ, ಮೈಕ್ ಮುಂದೆ ನಿಂತ ಮೇಲೆ ಶರಣ್ ಕಥೆ ಯಾಕೆ ಕೇಳ್ತೀರಾ. ಗಡ ಗಡ ಅಂತ ನಡುಗುತ್ತಿದ್ದ ಶರಣ್ ಗಾನ ಸುಧೆ ಬಗ್ಗೆ ನಾವ್ ಹೇಳೋಕ್ಕಿಂತ ನೀವು ನೋಡಿದ್ರೆ...ಅದರ ಮಜಾನೇ ಬೇರೆ...

Sharan turns singer for Raja Rajendra3

ನಾಯಕ-ನಾಯಕಿ ಪರಸ್ಪರ ಕಾಲೆಳೆದುಕೊಳ್ಳುವ ಈ ಹಾಡಿಗೆ ಶರಣ್ ಜೊತೆ ದನಿಯಾಗಿರುವುದು ಖ್ಯಾತ ಗಾಯಕಿ ಮಂಜುಳ ಗುರುರಾಜ್. ಯೋಗರಾಜ್ ಭಟ್ರು ಬರೆದಿರುವ ಮಜವಾಗಿರುವ ಈ ಹಾಡಿಗೆ ಅರ್ಜುನ್ ಜನ್ಯ ಮಸ್ತ್ ಮ್ಯೂಸಿಕ್ ನೀಡಿದ್ದಾರೆ. [ಗಾಂಧಿನಗರಕ್ಕೆ ಮತ್ತೆ ಅಡಿಯಿಟ್ಟ ನಾಗವಲ್ಲಿ ವಿಮಲಾ]

ಶರಣ್ ಗೆ ಚಿತ್ರದಲ್ಲಿ ವಿಮಲಾ ರಾಮನ್ ಜೋಡಿಯಾಗಿದ್ದಾರೆ. ಪಿ.ಕುಮಾರ್ ಆಕ್ಷನ್ ಕಟ್ ಹೇಳಿರುವ 'ರಾಜ ರಾಜೇಂದ್ರ' ಚಿತ್ರ ಸದ್ಯಕ್ಕೆ ಶೂಟಿಂಗ್ ನಲ್ಲಿ ಬಿಜಿಯಾಗಿದೆ. (ಫಿಲ್ಮಿಬೀಟ್ ಕನ್ನಡ)

English summary
Actor Sharan of Rambo fame has turned singer for his upcoming movie Raja Rajendra. Watch the making video of Sharan Singing.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada