»   » ಕನ್ನಡದ 'ಮುಮ್ತಾಜ್' ಆದ ಶರ್ಮಿಳಾ ಮಾಂಡ್ರೆ

ಕನ್ನಡದ 'ಮುಮ್ತಾಜ್' ಆದ ಶರ್ಮಿಳಾ ಮಾಂಡ್ರೆ

By: ಜೀವನರಸಿಕ
Subscribe to Filmibeat Kannada

ಸ್ಯಾಂಡಲ್ ವುಡ್ ನಿಂದ ಇದ್ದಕ್ಕಿದ್ದಂತೆ ದೂರವಾಗಿದ್ದ ನಟಿ ಶರ್ಮಿಳಾ ಮಾಂಡ್ರೆ ಈಗ ಮತ್ತೆ ಬರ್ತಿದ್ದಾರೆ. ಬರ್ತಿದ್ದಾರೆ ಏನು ಬಂದಿದ್ದಾರೆ. ಕನ್ನಡದಲ್ಲಿ ಮುಮ್ತಾಜ್ ಸಿನಿಮಾದ ಮೂಲಕ ಶರ್ಮಿಳಾ ಮಾಂಡ್ರೆ ರೀ ಎಂಟ್ರಿ ಕೊಡ್ತಿದ್ದಾರೆ.

ಶರ್ಮಿಳಾ ಕನ್ನಡದಲ್ಲಿ ಅಭಿನಯಿಸಿದ ಸಿನಿಮಾಗಳಲ್ಲೇ ಮಿಂಚಿದ ಚೆಲುವೆ. ನವಗ್ರಹ, ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಕೃಷ್ಣ, ಧ್ಯಾನ್ ಜೊತೆ ಸಜನಿ ಸಿನಿಮಾದಲ್ಲಿ ಅಭಿನಯಿಸಿದ್ದ ಶರ್ಮಿಳಾ ಮಾಂಡ್ರೆ ಈಗ ಐದು ವರ್ಷಗಳ ನಂತರ ಧರ್ಮಕೀರ್ತಿರಾಜ್ ಜೊತೆ 'ಮುಮ್ತಾಜ್' ಸಿನಿಮಾಗೆ ಜೋಡಿಯಾಗಿದ್ದಾರೆ.


ಸಿನಿಮಾದ ಮುಹೂರ್ತ ಸೋಮವಾರ (ಜು.7) ನಡೀತಿದ್ದು ಚೆಂದುಳ್ಳಿ ಚೆಲುವೆ ಶರ್ಮಿಳಾ ಕಲರ್ ಫುಲ್ ಲಡ್ಕಿ ಮುಮ್ತಾಜ್ ಪಾತ್ರದಲ್ಲಿ ಮಿಂಚಲಿದ್ದಾರೆ. 'ನವಗ್ರಹ' ಸಿನಿಮಾದಲ್ಲಿ ಕಣ್ ಕಣ್ಣ ಸಲಿಗೆ ಹಾಡಿನಿಂದ ಪ್ರೇಕ್ಷಕರ ಮನಸೂರೆಗೊಂಡಿದ್ದ ಈ ಯುವ ಜೋಡಿ ಈಗ ಮತ್ತೆ ತೆರೆಮೇಲೆ ಒಂದಾಗ್ತಿರೋದು ಮುಮ್ತಾಜ್ ಸಿನಿಮಾದ ಬಗ್ಗೆ ನಿರೀಕ್ಷೆ ಮೂಡಿಸಿದೆ.

ಮುಮ್ತಾಜ್ ಚಿತ್ರಕ್ಕೆ ರಾಘವ ಮುರಳಿ ಆಕ್ಷನ್ ಕಟ್ ಹೇಳುತ್ತಿದ್ದು ನರಸಿಂಹಮೂರ್ತಿ ಕೆ.ಎನ್ ಹಾಗೂ ದಿವ್ಯಾ ನರಸಿಂಹಮೂರ್ತಿ ನಿರ್ಮಾಪಕರು. "ಜನನ ಲವ್ವಲ್ಲಿ ಮರಣ ಫೀಲಲ್ಲಿ, ಇಂತಿ ನಿನ್ನ ಶಾಜಿ" ಎಂಬುದು ಚಿತ್ರದ ಅಡಿಬರಹ.

English summary
After a long break actor Sharmila Mandre re-enters to Sandalwood as Mumtaz. The Kannada Movie directed by Raghava Murali and produced by Narasimha Murthy starring on Dharma keertiraj and Sharmila Mandre.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada