»   » ನಿರೂಪಕಿ ಶೀತಲ್ ಶೆಟ್ಟಿಗೆ ಯುವಕನಿಂದ ಲೈಂಗಿಕ ಕಿರುಕುಳ!

ನಿರೂಪಕಿ ಶೀತಲ್ ಶೆಟ್ಟಿಗೆ ಯುವಕನಿಂದ ಲೈಂಗಿಕ ಕಿರುಕುಳ!

Posted By:
Subscribe to Filmibeat Kannada

ಇತ್ತೀಚಿನ ದಿನಗಳಲ್ಲಿ ಚಿತ್ರ ನಟಿಯರ ಮೇಲೆ ಲೈಂಗಿಕ ಕಿರುಕುಳ, ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಕಳೆದ ಕೆಲ ತಿಂಗಳ ಹಿಂದೆಯಷ್ಟೇ ಮಲಯಾಳಂ ಖ್ಯಾತ ನಟಿಯರನ್ನ ಅಪರಹರಣ ಪ್ರಕರಣ ದೊಡ್ಡ ಸುದ್ದಿಯಾಗಿತ್ತು. ಇದೀಗ, ಕನ್ನಡ ಟಿವಿ ನಿರೂಪಕಿ ಕಮ್ ನಟಿ ಶೀತಲ್ ಶೆಟ್ಟಿ ಅವರು ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದರು ಎಂಬ ಘಟನೆ ಬೆಳಕಿಗೆ ಬಂದಿದೆ.['ಬಿಗ್ ಬಾಸ್' ಮುಗಿದ ಬಳಿಕ ಶೀತಲ್ ಶೆಟ್ಟಿ ಎಲ್ಲಿ? Exclusive ಮಾಹಿತಿ ಇಲ್ಲಿದೆ.!]

ಈ ವಿಚಾರವನ್ನ ಖುದ್ದು ಶೀತಲ್ ಶೆಟ್ಟಿಯೇ ತಮ್ಮ ಫೇಸ್ ಬುಕ್ ನಲ್ಲಿ ಬಹಿರಂಗಪಡಿಸಿದ್ದು, ತಮ್ಮ ಮೇಲಾದ ಕಿರುಕುಳವನ್ನ ತೀವ್ರವಾಗಿ ಖಂಡಿಸಿದ್ದಾರೆ. ಅಷ್ಟಕ್ಕೂ, ಶೀತಲ್ ಶೆಟ್ಟಿಗೆ ಲೈಂಗಿಕ ಕಿರುಕುಳ ಕೊಟ್ಟಿದ್ಯಾರು? ಏನಾಯ್ತು ಎಂಬ ಪೂರ್ತಿ ವಿವರ ಮುಂದೆ ಓದಿ.......

ಶೀತಲ್ ಶೆಟ್ಟಿಗೆ ಕೆಟ್ಟ ಸಂದೇಶ!

ಕಳೆದ ಎರಡು ಮೂರು ದಿನಗಳ ಹಿಂದೆ ಟಿವಿ ನಿರೂಪಕಿ ಶೀತಲ್ ಶೆಟ್ಟಿ ಅವರು, ತಮ್ಮ ಫೇಸ್ ಬುಕ್ ನಲ್ಲಿ ಹೊಸದೊಂದು ಫೋಟೋ ಅಪ್ ಲೌಡ್ ಮಾಡಿದ್ದರು. ಆ ಫೋಟೋಗೆ ಅನಾಮಿಕನೊಬ್ಬ ಮೆಸೆಂಜರ್ ಮೂಲಕ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾನೆ.['ಬಿಗ್ ಬಾಸ್' ಸದಸ್ಯರ ಅಸಲಿ ಮುಖಗಳನ್ನ ಬಿಚ್ಚಿಟ್ಟ ಶೀತಲ್ ಶೆಟ್ಟಿ!]

ನೇರವಾಗಿ ಮಂಚದ ವಿಷ್ಯ ಪ್ರಸ್ತಾಪಿಸಿದ ಹುಡುಗ

ಸಂದೇಶ ಕಳುಹಿಸಿ ಸುಮ್ಮನಾಗಿದ್ದರೇ ಪರವಾಗಿಲ್ಲ, ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಆ ಯುವಕ ಶೀತಲ್ ಶೆಟ್ಟಿ ಅವರ ಬಳಿ ನೇರವಾಗಿ ಮಂಚದ ವಿಷ್ಯ ಪ್ರಸ್ತಾಪಿಸಿದ್ದಾನೆ. ಅಷ್ಟೇ ಅಲ್ಲದೇ ಹಣದ ನೀಡವುದಾಗಿ ಬೇಡಿಕೆಯನ್ನ ಕೂಡ ಇಟ್ಟಿದ್ದಾನೆ.[ವಿಡಿಯೋ:'ಬಿಗ್ ಬಾಸ್' ಮನೆಯಿಂದ ಹೊರಬಂದ ಶೀತಲ್ ಶೆಟ್ಟಿ ಹೇಳಿದ್ದೇನು? ]

ಎಚ್ಚರಿಕೆ ನೀಡಿದ ಶೀತಲ್

ಸತತ ಸಂದೇಶಗಳ ಮೂಲಕ ಕಿರುಕುಳ ನೀಡುತ್ತಿದ್ದವನಿಗೆ ಶೀತಲ್ ಶೆಟ್ಟಿ ದಿಟ್ಟೆದೆಯಿಂದ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಮಾತು ತಿರುಗಿಸಿದ ವ್ಯಕ್ತಿ

ಶೀತಲ್ ಶೆಟ್ಟಿ ಅವರು ಪೊಲೀಸ್ ದೂರು ನೀಡುವುದಾಗಿ ತೀಳಿಸುತ್ತಿದ್ದಂತೆ, ಮಾತು ಬದಲಿಸಿದ ಆ ವ್ಯಕ್ತಿ ಕ್ಷಮೆ ಕೇಳಿದ್ದಾನೆ. ಇದು ನಿಮ್ಮ ಪರ್ಸನಲ್ ಅಕೌಂಟ್ ಎಂದು ಪರೀಕ್ಷೆ ಮಾಡಲು ಹೀಗೆ ಹೇಳಿದೆ ಎಂದು ಮಾತು ಬದಲಿಸಿದ್ದಾನೆ. ಈ ಮಧ್ಯೆ ಸಹೋದರಿ ಎಂದು ಕೂಡ ಸಂಭೋದಿಸಿದ್ದಾನೆ.

ದೂರು ನೀಡಿಲ್ಲ!

ಈ ಬಗ್ಗೆ ಪೊಲೀಸ್ ದೂರು ನೀಡುವುದಕ್ಕೆ ಯೋಚನೆ ಮಾಡಿದ್ದ ಶೀತಲ್ ಶೆಟ್ಟಿ, ಸದ್ಯ ಪೊಲೀಸ್ ದೂರು ನೀಡಿಲ್ಲ. ಮಾನವೀಯತೆ ದೃಷ್ಟಿಯಿಂದ ದೂರು ನೀಡಲ್ಲ ಎಂದು ಸ್ವತಃ ಶೀತಲ್ ಶೆಟ್ಟಿ ಅವರೇ ಫೇಸ್ ಬುಕ್ ಲೈವ್ ನಲ್ಲಿ ಹೇಳಿಕೊಂಡಿದ್ದಾರೆ.

ಆ ಯುವಕ ಯಾರು?

'Roy Picardo' ಎಂಬ ಹೆಸರಿನಲ್ಲಿ ಅಕೌಂಟ್ ಹೊಂದಿರುವ ಯುವಕ ಅಂಗವಿಕಲ ಎಂದು ಶೀತಲ್ ಶೆಟ್ಟಿ ಅವರೇ ತಿಳಿಸಿದ್ದಾರೆ. ಆದ್ರೆ, ಆ ಯುವಕ ಯಾರು ಎಂಬುದರ ಬಗ್ಗೆ ಸ್ವಷ್ಟವಾದ ಮಾಹಿತಿ ಬಿಟ್ಟುಕೊಟ್ಟಿಲ್ಲ.

English summary
Kannada Actress, Biggboss Kannada 4 Contestant Sheethal Shetty Sexual Harassed by Unknown Person in Social Media.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada