»   » ಬಿಡುಗಡೆಯಾಯ್ತು ಶಿವಣ್ಣ ಶಿವ; ಫಲಿತಾಂಶವಷ್ಟೆ ಬಾಕಿ!

ಬಿಡುಗಡೆಯಾಯ್ತು ಶಿವಣ್ಣ ಶಿವ; ಫಲಿತಾಂಶವಷ್ಟೆ ಬಾಕಿ!

Posted By:
Subscribe to Filmibeat Kannada
Shivarajkumar Ragini
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಓಂ ಪ್ರಕಾಶ್ ರಾವ್ ನಿರ್ದೇಶನದ 'ಶಿವ' ಚಿತ್ರವು ಇಂದು (ಆಗಸ್ಟ್ 24, 2012) ರಂದು ಬಿಡುಗಡೆಯಾಗಿದ್ದು ಎಲ್ಲಡೆ ಶಿವನಿಗೆ ಭರ್ಜರಿ ಪ್ರತಿಕ್ರಿಯೆ ದೊರೆತಿದೆ. ಅದ್ದೂರಿ ಪ್ರಚಾರಕಾರ್ಯದ ಮೂಲಕ ತೆರೆಗೆ ಬಂದಿರುವ ಶಿವ ಚಿತ್ರ, ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ 101ನೇ ಚಿತ್ರವೆಂಬ ಹೆಗ್ಗಳಿಕೆ ಹೊಂದಿದೆ. ಬರೋಬ್ಬರಿ ವರ್ಷಗಳ ನಂತರ ಶಿವಣ್ಣರ ಚಿತ್ರವೊಂದು ತೆರೆಗೆ ಬಂದಿದೆ.

ಅಷ್ಟೇ ಅಲ್ಲ, ಭೀಮಾ ತೀರದಲ್ಲಿ (ಚಂದಪ್ಪ) ನಂತರ ಓಂ ಪ್ರಕಾಶ್ ರಾವ್ ನಿರ್ದೇಶನದ ಯಾವ ಚಿತ್ರವೂ ಕೂಡ ತೆರೆಗೆ ಬಂದಿರಲಿಲ್ಲ. ಈಗ ಇವರಿಬ್ಬರ ಸಂಗಮದ 'ಶಿವ' ಇಂದಿನಿಂದ ತೆರೆಯ ಮೇಲೆ ಆರ್ಭಟಿಸಲಿದೆ. ಶಿವಣ್ಣರ ಅಭಿಮಾನಿಗಳಿಗಂತೂ ಹಬ್ಬದೂಟ ಬಡಿಸಿದಂತಾಗಿದೆ. ಶಿವಣ್ಣ ಜೊತೆ ನಾಯಕಿಯಾಗಿ ಗ್ಲಾಮರ್ ರಾಣಿ ರಾಗಿಣಿ ಇದ್ದಾರೆ. ಶಿವಕ್ಕೆ ಗುರುಕಿರಣ್ ಸಂಗೀತ ಜೊತೆಯಾಗಿದೆ.

ಕಳೆದ ಜುಲೈ 27ರಂದೇ ತೆರೆಗೆ ಬರಬೇಕಾಗಿದ್ದ ಚಿತ್ರ, ಗ್ರಾಫಿಕ್ಸ್ ಕಾರಣದಿಂದ ಮುಂದೂಡಲ್ಪಟ್ಟಿತ್ತು. ನಂತರ ಆಗಸ್ಟ್ 10 ರಂದು ಬಿಡುಗಡೆ ಘೋಷಿಸಿ ಚಿತ್ರತಂಡಕ್ಕೆ ಆಗಲೂ ಚಿತ್ರವನ್ನು ತೆರೆಗೆ ತರಲು ಸಾಧ್ಯವಾಗಲಿಲ್ಲ. ಇದೀಗ ಎಲ್ಲಾ ಅಡೆ-ತಡೆಗಳನ್ನು ನಿವಾರಿಸಿಕೊಂಡಿರುವ ಇಂದಿನಿಂದ ಚಿತ್ರ ತೆರೆ ಮೇಲೆ ಪ್ರದರ್ಶನ ಪ್ರಾರಂಭವಾಗಿದೆ. ಲೇಟಾದರೂ ಲೇಟೆಸ್ಟ್ ಆಗಿದೆಯೇ ಎಂಬುದು ಇನ್ನೇನು ಕೆಲವೇ ಗಂಟೆಗಳಲ್ಲಿ ತಿಳಿಯಲಿದೆ.

ರಾಜ್ಯದಾದ್ಯಂತ ಶಿವಣ್ಣರ ಅಭಿಮಾನಿ ಸಂಘಗಳು 'ಶಿವ' ಚಿತ್ರಕ್ಕೆ ವಿಶೇಷ ಸ್ವಾಗತ ಕೋರಿದ್ದು ಸಂತೋಷ್ ಚಿತ್ರಮಂದಿರದ ಎದುರು ಇಡಲಾಗಿರುವ ಬೃಹತ್ ಶಿವನ ಮೂರ್ತಿಗೆ ಹಾಲಿನ ಅಭಿಷೇಕ ಮಾಡಿ ಹಾಗೂ ಹೂವಿನ ಹಾರ ಹಾಕಿ ಸಂಭ್ರಮಿಸಲಾಗಿದೆ. ಎಲ್ಲವನ್ನೂ ಅಚ್ಚುಕಟ್ಟಾಗಿ ನಡೆಸಲು ಮೊದಲೇ ಸಿದ್ಧರಾಗಿದ್ದ ಶಿವ ಚಿತ್ರದ ನಿರ್ಮಾಪಕ ಹಾಗೂ ಶಿವಣ್ಣ ಅಭಿಮಾನಿಗಳ ಸಂಘದ ಅಧ್ಯಕ್ಷರೂ ಆಗಿರುವ ಕೆಪಿ ಶ್ರೀಕಾಂತ್, ಎಲ್ಲವನ್ನೂ ನೆರವೇರಿಸಿ ಖುಷಿಯಾಗಿದ್ದಾರೆ.

ಜೋಗಯ್ಯ ನಂತರ ಶಿವಣ್ಣ ಅಭಿನಯದ ಯಾವ ಚಿತ್ರವೂ ಬಿಡುಗಡೆಯಾಗಿಲ್ಲ. ಬಂದಿದ್ದ ಜೋಗಯ್ಯ ಕೂಡ 'ಫ್ಲಾಪ್'. ಹೀಗಾಗಿ ಶಿವ ಚಿತ್ರದ ಬಗ್ಗೆ ಶಿವಣ್ಣರ ಅಭಿಮಾನಿಗಳು ಹಾಗೂ ಪ್ರೇಕ್ಷಕರಲ್ಲಿ ಭಾರಿ ಭರವಸೆ ಮೂಡಿದೆ. ಈ ಹಿಂದಿನ ಓಂ ಪ್ರಕಾಶ್ ರಾವ್ ಹಾಗೂ ಶಿವಣ್ಣ ಜೋಡಿಯ ಚಿತ್ರ 'ಎಕೆ 47' ಸೂಪರ್ ಹಿಟ್ ಆಗಿದ್ದೂ ಕೂಡ ಈ ಪರಿ ನಿರೀಕ್ಷೆಗೆ ಕಾರಣ. ಕೇವಲ ಕರ್ನಾಟಕ ಮಾತ್ರವಲ್ಲದೇ ನೆರೆರಾಜ್ಯದ ಘಟಾನುಘಟಿಗಳೂ ಕೂಡ ಈ ಚಿತ್ರದ ಬಗ್ಗೆ ನಿರೀಕ್ಷೆ ಹೊಂದಿರುವುದು ವಿಶೇಷ.

ಕೆಪಿ ಶ್ರೀಕಾಂತ್ ಬಹುನಿರೀಕ್ಷೆ ನಿರ್ಮಾಣದ ಈ ಚಿತ್ರಕ್ಕೆ ಶಿವಣ್ಣರಿಗೆ ಮೊದಲ ಬಾರಿಗೆ ರಾಗಿಣಿ ನಾಯಕಿಯಾಗಿದ್ದಾರೆ. ಮೈಲಾರಿ ನಂತರ ಶಿವಣ್ಣರ ಈ ಚಿತ್ರಕ್ಕೆ ಗುರುಕಿರಣ್ ಸಂಗೀತವಿದೆ. ವಿಶೇಷ ಗ್ರಾಫಿಕ್ಸ್ ಮೂಲಕ ಚಿತ್ರವು ತಾಂತ್ರಿಕವಾಗಿ ತುಂಬಾ ಅದ್ದೂರಿಯಾಗಿದ್ದು ಚಿತ್ರದ ಹೈಲೈಟ್ ಎನ್ನಲಾಗಿದೆ. ಒಟ್ಟಿನಲ್ಲಿ, ಶಿವಣ್ಣರ ಅಭಿಮಾನಿಗಳು ಭಾರಿ ನಿರೀಕ್ಷೆಯಿಟ್ಟಿದ್ದಾರೆ, ನಿರಾಸೆಯಾಗಲಾರದೆಂಬ ನಂಬಿಕೆಯಿದೆ. ಕೆಲವೇ ಗಂಟೆಗಳಲ್ಲಿ ಚಿತ್ರ ವಿಮರ್ಶೆ ಬರಲಿದೆ, ನೋಡಿ...(ಒನ್ ಇಂಡಿಯಾ ಕನ್ನಡ)

English summary
Hit Trick Hero Shivarajkumar's '101' movie 'Shiva' released Today, on 24 th August 2012. Om Prakash Rao directed this movie for KP Srikanth Production. Gurukiran composed Music for this Shivanna movie once again after Mylaari. 
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada