»   » 'ಡಿ' ಬಾಸ್ ದರ್ಶನ್ ಜೊತೆ ಸಿನಿಮಾ ಮಾಡುವ ಇಚ್ಛೆ ವ್ಯಕ್ತಪಡಿಸಿದ ಶಿವಣ್ಣ.!

'ಡಿ' ಬಾಸ್ ದರ್ಶನ್ ಜೊತೆ ಸಿನಿಮಾ ಮಾಡುವ ಇಚ್ಛೆ ವ್ಯಕ್ತಪಡಿಸಿದ ಶಿವಣ್ಣ.!

By: ಫಿಲ್ಮಿಬೀಟ್ ಡೆಸ್ಕ್
Subscribe to Filmibeat Kannada

ನಿರ್ಮಾಪಕರೇ ಕೇಳಿಸಿಕೊಳ್ಳಿ... ನಿಮ್ಮ ಕಿವಿಯನ್ನ ಸ್ವಲ್ಪ ನೆಟ್ಟಗೆ ಮಾಡಿಕೊಳ್ಳಿ... ಶಿವಣ್ಣ ಆಡಿರುವ ಮಾತುಗಳತ್ತ ಒಮ್ಮೆ ಗಮನ ಕೊಡಿ....

ಮೂವತ್ತು ದಶಕಗಳ ವೃತ್ತಿ ಜೀವನದಲ್ಲಿ ನೂರಾರು ಸಿನಿಮಾಗಳಲ್ಲಿ ಅಭಿನಯಿಸಿದ್ದರೂ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ರವರಿಗೆ ಕೊಂಚ ಕೂಡ ಜಂಭ, ಅಹಂ ಅನ್ನೋದು ಇಲ್ಲ.

Shiva Rajkumar is ready to work with Darshan

''ಎಲ್ಲರೊಂದಿಗೆ ಇರಲು ಇಷ್ಟ ಪಡುತ್ತೇನೆ'' ಎನ್ನುವ ಶಿವರಾಜ್ ಕುಮಾರ್ ಈಗಾಗಲೇ ಕ್ರೇಜಿ ಸ್ಟಾರ್ ರವಿಚಂದ್ರನ್, ಉಪೇಂದ್ರ, ಜಗ್ಗೇಶ್, ರಮೇಶ್ ಅರವಿಂದ್, ವಿಜಯ್ ರಾಘವೇಂದ್ರ ಹೀಗೆ ಸ್ಯಾಂಡಲ್ ವುಡ್ ನ ಹಲವು ನಟರ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ.

ಈಗ ಸುದೀಪ್ ರವರೊಂದಿಗೆ 'ದಿ ವಿಲನ್' ಸಿನಿಮಾದಲ್ಲಿ ಅಭಿನಯಿಸುತ್ತಿರುವ ಶಿವಣ್ಣನಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಸ್ಕ್ರೀನ್ ಶೇರ್ ಮಾಡುವ ಇಚ್ಛೆ ಇದೆ.

''ದರ್ಶನ್ ಜೊತೆ ಸಿನಿಮಾ ಮಾಡಬೇಕು ಅಂದರೆ ಮಾಡುತ್ತೇನೆ'' ಎಂದು 'ಪಬ್ಲಿಕ್ ಟಿವಿ'ಗಾಗಿ ನೀಡಿದ ವಿಶೇಷ ಸಂದರ್ಶನದಲ್ಲಿ ಶಿವರಾಜ್ ಕುಮಾರ್ ಹೇಳಿದ್ದಾರೆ.

ಶಿವಣ್ಣ ಕಡೆಯಿಂದ ಅಂತೂ ಗ್ರೀನ್ ಸಿಗ್ನಲ್ ಸಿಕ್ಕಿದೆ. ನಿರ್ಮಾಪಕರು ಮನಸ್ಸು ಮಾಡಿದರೆ, ಇಬ್ಬರು ಸ್ಟಾರ್ ನಟರ ಅಭಿಮಾನಿಗಳ ಖುಷಿಗೆ ಪಾರವೇ ಇರುವುದಿಲ್ಲ.

English summary
Kannada Actor Shiva Rajkumar has expressed his desire to work with Challenging Star Darshan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada