Don't Miss!
- Sports
ಸಿಕ್ಸರ್ ದಾಖಲೆ ಪಟ್ಟಿಯಲ್ಲಿ ಎಂಎಸ್ ಧೋನಿ ಸರಿಗಟ್ಟಿದ ರೋಹಿತ್ ಶರ್ಮಾ
- News
ಬಿಟ್ ಕಾಯಿನ್ ಮೌಲ್ಯ $60,000 ನಂತೆ ಸ್ಥಿರ, ಟ್ರೇಡರ್ಸ್ಗೆ ನೆಮ್ಮದಿ
- Automobiles
ಕೋವಿಡ್ ಅಬ್ಬರ: ಹೊಸ ವಾಹನಗಳ ಉತ್ಪಾದನೆಯಲ್ಲಿ ಕುಸಿತ
- Lifestyle
ಪಾತ್ರೆ ಉಜ್ಜುವ ಸೋಪ್ನಿಂದ ಈ ವಸ್ತುಗಳು ಹಾಗೂ ಸ್ಥಳಗಳನ್ನು ಸ್ವಚ್ಛ ಮಾಡಿ ನೋಡಿದ್ದೀರಾ?
- Finance
HDFC ಬ್ಯಾಂಕ್ ತ್ರೈಮಾಸಿಕ ಲಾಭ 18% ಏರಿಕೆ: 8,186 ಕೋಟಿ ರೂಪಾಯಿ ಲಾಭ
- Education
Ninasam Diploma Admission 2020-21: ಮೇ ತಿಂಗಳಲ್ಲಿ ನೀನಾಸಂ ಡಿಪ್ಲೋಮಾ ಪ್ರವೇಶಾತಿ ಆರಂಭ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅಪ್ಪನ ಹಾದಿ ಹಿಡಿದ ಶಿವಣ್ಣ: ಮಾಡಿದರು 'ಬೆಳಕು ನೀಡುವ' ಕಾರ್ಯ
ಡಾ.ರಾಜ್‌ಕುಮಾರ್ ಹಾದಿಯನ್ನೇ ಹಿಡಿದಿರುವ ಶಿವರಾಜ್ ಕುಮಾರ್ ನೇತ್ರದಾನ ಮಾಡಲು ಒಪ್ಪಿಗೆ ನೀಡಿದ್ದಾರೆ.
ಡಾ.ರಾಜ್‌ಕುಮಾರ್ ಅವರು ನೇತ್ರವನ್ನು ದಾನ ಮಾಡಲಾದ ನಾರಾಯಣ ನೇತ್ರಾಲಯದಲ್ಲಿಯೇ ಶಿವರಾಜ್ ಕುಮಾರ್ ಅವರು ತಮ್ಮ ಕಣ್ಣುಗಳನ್ನು ದಾನ ಮಾಡಲು ಒಪ್ಪಿಗೆ ಸೂಚಿಸಿ ಸಹಿ ಮಾಡಿದ್ದಾರೆ.
ಇತ್ತೀಚೆಗಷ್ಟೆ ಪ್ರಾದೇಶಿಕ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ಪಡೆದ ಕನ್ನಡ ಸಿನಿಮಾ 'ಅಕ್ಷಿ' ತಂಡದಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಿವರಾಜ್ ಕುಮಾರ್ ಅವರು ನೇತ್ರದಾನ ಮಾಡಲು ಒಪ್ಪಿಗೆ ಪತ್ರಕ್ಕೆ ಸಹಿ ಮಾಡಿ, ಎಲ್ಲರೂ ನೇತ್ರದಾನ ಮಾಡುವಂತೆ ಮನವಿ ಮಾಡಿದರು.
1994 ರಲ್ಲಿ ಡಾ.ರಾಜ್‌ಕುಮಾರ್ ನೇತ್ರ ಬ್ಯಾಂಕ್ ಸ್ಥಾಪನೆ ಆಗಿತ್ತು. ಅಂದು ಡಾ.ರಾಜ್‌ಕುಮಾರ್ ಅವರು ನೇತ್ರ ಬ್ಯಾಂಕ್ ಉದ್ಘಾಟನೆ ಮಾಡಿ, ನೇತ್ರದಾನಕ್ಕೆ ಒಪ್ಪಿಗೆ ನೀಡಿದ್ದರು. ರಾಜ್‌ಕುಮಾರ್ ಅವರ ಮರಣಾನಂತರ ಅವರ ನೇತ್ರವನ್ನು ಸಂರಕ್ಷಿಸಿ ಕಣ್ಣಿಲ್ಲದವರಿಗೆ ನೀಡಲಾಯಿತು.
ಡಾ.ರಾಜ್‌ಕುಮಾರ್ ಅವರ ಮರಣಾನಂತರ ನೇತ್ರದಾನ ಮಾಡುವವರ ಸಂಖ್ಯೆ ಹೆಚ್ಚಳವಾಗಿತ್ತು. ರಾಜ್‌ಕುಮಾರ್ ಮಾಡಿದ ಮಾದರಿ ಕಾರ್ಯವನ್ನು ಲಕ್ಷಾಂತರ ಮಂದಿ ಅನುಸರಿಸಿದ್ದರು. ಇದೀಗ ಶಿವರಾಜ್ ಕುಮಾರ್ ಅವರು ಸಹ ನೇತ್ರದಾನ ಮಾಡಲು ಒಪ್ಪಿಗೆ ಸೂಚಿಸಿದ್ದು, ಅಭಿಮಾನಿಗಳು, ಸಾರ್ವಜನಿಕರು ಹೆಚ್ಚು-ಹೆಚ್ಚು ಸಂಖ್ಯೆಯಲ್ಲಿ ನೇತ್ರದಾನ ಮಾಡುವಂತೆ ಕರೆ ನೀಡಿದ್ದಾರೆ.
'ಅಕ್ಷಿ' ಸಿನಿಮಾವು ನೇತ್ರದಾನದ ವಿಷಯವನ್ನು ವಸ್ತುವಾಗಿಸಿಕೊಂಡು ನಿರ್ಮಿಸಿರುವ ಸಿನಿಮಾ ಆಗಿದೆ. ಸಿನಿಮಾ ತೆಗೆಯಲು ಡಾ.ರಾಜ್‌ಕುಮಾರ್ ಅವರೇ ಸ್ಪೂರ್ತಿ ಎಂದು ನಿರ್ದೇಶಕ ಮನೋಜ್ ಕುಮಾರ್ ಹೇಳಿದ್ದಾರೆ.