For Quick Alerts
  ALLOW NOTIFICATIONS  
  For Daily Alerts

  ಅಸುರರ ಲೋಕಕ್ಕೆ ಭಜರಂಗಿಯ ಭರ್ಜರಿ ಎಂಟ್ರಿ

  |

  ಜುಲೈ 12 ರ ಈ ದಿನ ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬ. ಕೊರೊನಾ ಸಮಯದಲ್ಲಿ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ ಶಿವಣ್ಣ. ಶಿವರಾಜ್ ಕುಮಾರ್ ಹುಟ್ಟುಹಬ್ಬವನ್ನು ಕಳೆಗಾಣಿಸುತ್ತಿರುವುದು ಅವರ ಹೊಸ ಸಿನಿಮಾ ಘೋಷಣೆಗಳು, ಟ್ರೇಲರ್ ಬಿಡುಗಡೆಗಳು. ಶಿವಣ್ಣ ಹುಟ್ಟುಹಬ್ಬ ಪ್ರಯುಕ್ತ ಭಜರಂಗಿ 2 ಸಿನಿಮಾದ ಟ್ರೇಲರ್ ಇಂದು ಬಿಡುಗಡೆ ಆಗಿದೆ.

  ಶಿವಣ್ಣನ ಅಭಿಮಾನಿಗಳು ನಂಗೆ ಏನ್ ಮಾಡ್ತಾರೋ ಅನ್ನೋ ಭಯ ಆಗಿತ್ತು | Vijay Raghavendra | Filmibeat Kannada

  ಹಲವು ವರ್ಷಗಳ ಹಿಂದೆ ಹರ್ಷಾ ನಿರ್ದೇಶಕತನದಲ್ಲಿ ಬಿಡುಗಡೆ ಆಗಿದ್ದ ಭಜರಂಗಿ ಸಿನಿಮಾ ಭರ್ಜರಿ ಹಿಟ್ ಆಗಿತ್ತು. ಅತಿ ಮಾನುಷ ಕತೆಯನ್ನು ಹೊಂದಿದ್ದ ಸಿನಿಮಾ ಶಿವಣ್ಣ ಅಭಿಮಾನಿಗಳಿಗೆ ಸಖತ್ ಕಿಕ್ ಕೊಟ್ಟಿತ್ತು. ಈಗ ಬಹುತೇಕ ಅದೇ ತಂಡ ಭಜರಂಗಿ 2 ಸಿನಿಮಾ ತೆರೆಗೆ ತರುತ್ತಿದೆ.

  ಮತ್ತೊಮ್ಮೆ ಮೋಡಿ ಮಾಡಲು ಒಟ್ಟಿಗೆ ಬರುತ್ತಿದ್ದಾರೆ ಟಗರು ಶಿವ-ಡಾಲಿಮತ್ತೊಮ್ಮೆ ಮೋಡಿ ಮಾಡಲು ಒಟ್ಟಿಗೆ ಬರುತ್ತಿದ್ದಾರೆ ಟಗರು ಶಿವ-ಡಾಲಿ

  ಶಿವಣ್ಣ ಹುಟ್ಟುಹಬ್ಬಕ್ಕೆ ಭಜರಂಗಿ 2 ಟ್ರೇಲರ್ ಬಿಡುಗಡೆ ಆಗಿದ್ದು, ಉದ್ದನೆಯ ಟ್ರೇಲರ್ ಸಿನಿಮಾದ ಒಂದು ಝಲಕ್ ಅನ್ನು ಪ್ರೇಕ್ಷಕರಿಗೆ ನೀಡುತ್ತಿದೆ. ಸಿನಿಮಾ ನೋಡಬೇಕೆಂಬ ಕುತೂಹಲ ಹೆಚ್ಚು ಮಾಡುತ್ತಿದೆ ಈ ಟ್ರೇಲರ್.

  ಶಿವರಾಜ್ ಕುಮಾರ್ ಕಾಣಿಸಿಕೊಳ್ಳುವುದು ಕಡಿಮೆ

  ಶಿವರಾಜ್ ಕುಮಾರ್ ಕಾಣಿಸಿಕೊಳ್ಳುವುದು ಕಡಿಮೆ

  2:28 ನಿಮಿಷದ ಟ್ರೇಲರ್‌ನಲ್ಲಿ ಶಿವರಾಜ್ ಕುಮಾರ್ ಕಾಣಿಸಿಕೊಳ್ಳುವುದು ಬಹಳ ಕಡಿಮೆ. ಆದರೆ ಸಿನಿಮಾ ಒಳಗೊಂಡಿರುವ ಕುತೂಹಕಾರಿ ಅಂಶಗಳನ್ನು ಪ್ರೇಕ್ಷಕರಿಗೆ ಪರಿಚಯ ಮಾಡಿಸುತ್ತದೆ ಈ ಟ್ರೇಲರ್.

  ಭಿನ್ನ ಪಾತ್ರದಲ್ಲಿ ನಟಿ ಶ್ರುತಿ

  ಭಿನ್ನ ಪಾತ್ರದಲ್ಲಿ ನಟಿ ಶ್ರುತಿ

  ಟ್ರೇಲರ್‌ನಲ್ಲಿನ ಆಶ್ಚರ್ಯಕರ ಸಂಗತಿ ಎಂದರೆ ನಟಿ ಶ್ರುತಿ. ಸಿನಿಮಾದ ಭಿನ್ನ ಪಾತ್ರದಲ್ಲಿ ಶ್ರುತಿ ಕಾಣಿಸಿಕೊಂಡಿದ್ದಾರೆ. ಟ್ರೇಲರ್‌ ನಲ್ಲಿ ಶಿವರಾಜ್‌ ಕುಮಾರ್ ಬಿಟ್ಟರೆ ಗಮನ ಸೆಳೆಯುವುದು ಶ್ರುತಿ ಅವರೇ. ಬಹು ಭಿನ್ನ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ.

  ನರಾಚಿಗಿಂತಲೂ ಭಯಂಕರವಾಗಿದೆ ಸೆಟ್‌ಗಳು

  ನರಾಚಿಗಿಂತಲೂ ಭಯಂಕರವಾಗಿದೆ ಸೆಟ್‌ಗಳು

  ನರಾಚಿಗಿಂತಲೂ ಭಯಂಕರ ಕತೆ ನಡೆಯುವ ಸ್ಥಳ, ಭಯಹುಟ್ಟಿಸುವ ವಿಲನ್‌ಗಳು, ದೊಡ್ಡ ಸೆಟ್‌ಗಳು, ಚಿತ್ರ ವಿಚಿತ್ರ ಆಚರಣೆಗಳು, ಶಿವಣ್ಣನ ಭರ್ಜರಿ ಎಂಟ್ರಿ, ಅಬ್ಬರದ ಸಂಗೀತ ಎಲ್ಲವೂ ಟ್ರೇಲರ್‌ ಅನ್ನು ಕುತೂಹಲಭರಿತಗೊಳಿಸಿದೆ.

  ಹಲವು ಪ್ರಮುಖ ನಟರು ಸಿನಿಮಾದಲ್ಲಿದ್ದಾರೆ

  ಹಲವು ಪ್ರಮುಖ ನಟರು ಸಿನಿಮಾದಲ್ಲಿದ್ದಾರೆ

  ಭಜರಂಗಿ 2 ಸಿನಿಮಾದ ನಿರ್ದೇಶಕವನ್ನು ಹರ್ಷಾ ಮಾಡಿದ್ದು, ಭಾವನಾ ನಾಯಕಿಯಾಗಿದ್ದಾರೆ. ಭಜರಂಗಿ ಮೊದಲ ಸಿನಿಮಾದಲ್ಲಿದ್ದ ಸೂರ್ಯ ಲೋಕೇಶ್, ನಟಿ ಶ್ರುತಿ ಇನ್ನೂ ಹಲವು ಪ್ರಮುಖ ನಟರು ಸಿನಿಮಾದಲ್ಲಿದ್ದಾರೆ. ಲಾಕ್‌ಡೌನ್‌ ನ ನಂತರ ಸಿನಿಮಾ ಬಿಡುಗಡೆ ಆಗಲಿದೆ.

  English summary
  Actor Shiva Rajkumar's Bajarangi 2 trailer released on Shiva Rajkumar's birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X