For Quick Alerts
  ALLOW NOTIFICATIONS  
  For Daily Alerts

  ಅದ್ದೂರಿಯಾಗಿ ಜರುಗಲಿದೆ 'ಶಿವಲಿಂಗ' ಶತದಿನೋತ್ಸವ ಸಮಾರಂಭ

  By Suneetha
  |

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಪಿ.ವಾಸು ಅವರ ಕಾಂಬಿನೇಷನ್ ನಲ್ಲಿ ಮೂಡಿಬಂದಿದ್ದ ಹಾರರ್-ಥ್ರಿಲ್ಲರ್ ಸಿನಿಮಾ 'ಶಿವಲಿಂಗ' 100 ದಿನಗಳನ್ನು ಪೂರೈಸಿದೆ. ಇದೀಗ 100 ದಿನದ ಸಂಭ್ರಮಾಚರಣೆಯನ್ನು ವಿಭಿನ್ನವಾಗಿ ಆಚರಿಸಲು 'ಶಿವಲಿಂಗ' ಚಿತ್ರ ಯೋಜನೆ ಹಾಕಿಕೊಂಡಿದೆ.

  ಹೌದು ಶಿವರಾಜ್ ಕುಮಾರ್, ನಟ ಶಕ್ತಿ ಮತ್ತು ನಟಿ ವೇದಿಕಾ ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ 'ಶಿವಲಿಂಗ' 100 ದಿನದ ಸಂಭ್ರಮಾಚರಣೆಯನ್ನು ಜೂನ್ 19 ರಂದು ಬೆಂಗಳೂರಿನ ಟೌನ್ ಹಾಲ್ ನಲ್ಲಿ ಡಿಫರೆಂಟ್ ಆಗಿ ಆಚರಿಸಲು ಚಿತ್ರತಂಡದವರು ಆಲೋಚನೆ ಮಾಡಿದ್ದಾರೆ.['ಶಿವಲಿಂಗ' ವಿಮರ್ಶೆ; ಪಿ.ವಾಸು ನಿರ್ದೇಶನದ ಮತ್ತೊಂದು 'ಆಪ್ತಮಿತ್ರ']

  ವಿಶೇಷ ಅಂದ್ರೆ ಶಿವಣ್ಣ ಅವರು ಚಿತ್ರರಂಗಕ್ಕೆ ಕಾಲಿಟ್ಟು ಭರ್ತಿ 30 ವರ್ಷ ಆಗಿದ್ದು, ಈ ಹೊತ್ತಲ್ಲೆ ಅವರ 'ಶಿವಲಿಂಗ' ಸಿನಿಮಾ ಕೂಡ 100ರ ಗಡಿ ದಾಟುತ್ತಿದೆ.

  ಅಷ್ಟಕ್ಕೂ ಜೂನ್ 19ಕ್ಕೆ ಈ ಸಮಾರಂಭ ಇಟ್ಟುಕೊಳ್ಳಲು ಒಂದು ಕಾರಣ ಏನಪ್ಪಾ ಅಂದ್ರೆ ಜೂನ್ 19, 1986 ರಂದು ಶಿವಣ್ಣ ಅವರ ಮೊದಲ ಸಿನಿಮಾ 'ಆನಂದ್' ಕೂಡ ತೆರೆ ಕಂಡಿತ್ತು.[ಶಿವಣ್ಣ30 ವಿಶೇಷ: ಶಿವಣ್ಣ ಅವರ 20 ಉತ್ತಮ ಚಿತ್ರಗಳ List]

  ಆದ್ದರಿಂದ 'ಶಿವಲಿಂಗ' ಸಂಭ್ರಮಾಚರಣೆ ಜೊತೆಗೆ ಶಿವಣ್ಣ ಅವರ 30 ವರ್ಷಗಳ ಸಿನಿ ಜರ್ನಿಯನ್ನು ಸ್ಮರಿಸಿಕೊಂಡು ಅವರಿಗೆ ಸನ್ಮಾನ ನೆರವೇರಿಸಲು 'ಶಿವಲಿಂಗ' ನಿರ್ಮಾಪಕ ಸುರೇಶ್ ಅವರು ನಿರ್ಧರಿಸಿದ್ದಾರೆ. ತದನಂತರ ಮನರಂಜನಾ ಕಾರ್ಯಕ್ರಮ ಜರುಗಲಿದೆ.[ಶಿವಣ್ಣನ 'ಶಿವತಾಂಡವ'ಕ್ಕೆ ಬೆಚ್ಚಿ ಬಿದ್ದ ಬಾಕ್ಸಾಫೀಸ್]

  ಬೆಂಗಳೂರಿನ ಟೌನ್ ಹಾಲ್ ನಲ್ಲಿ ನಡೆಯಲಿರುವ 'ಶಿವಲಿಂಗ' ಚಿತ್ರದ ಶತದಿನೋತ್ಸವ ಸಂಭ್ರಮದ ಸಮಾರಂಭದಲ್ಲಿ ರಜನಿಕಾಂತ್, ಚಿರಂಜೀವಿ, ಬಾಲಯ್ಯ ಸೇರಿದಂತೆ ದಕ್ಷಿಣ ಭಾರತದ ಖ್ಯಾತ ನಟರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಲಾಗಿದೆ.

  English summary
  Kannada Actor Shivarajakumar starrer 'Shivalinga' has completed 100 days and the team is planning to celebrate the success on the 19th of this month. The movie is produced by Suresh and directed P Vasu.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X