»   » ಶಿವರಾಜ್ ಕುಮಾರ್ ಅಭಿಮಾನಿ ಮಾಡಿದ 'ಟಗರು' ದೋಸೆ

ಶಿವರಾಜ್ ಕುಮಾರ್ ಅಭಿಮಾನಿ ಮಾಡಿದ 'ಟಗರು' ದೋಸೆ

Posted By:
Subscribe to Filmibeat Kannada

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ 'ಟಗರು' ಸಿನಿಮಾದ ಕ್ರೇಜ್ ದಿನೇ ದಿನೇ ಜೋರಾಗುತ್ತಿದೆ. ಶಿವಣ್ಣ ಸಿನಿಮಾಗಾಗಿ ಅನೇಕ ದಿನಗಳಿಂದ ಫ್ಯಾನ್ಸ್ ಕಾಯುತ್ತಿದ್ದಾರೆ. ಅದೇ ರೀತಿ ಇಲ್ಲೊಬ್ಬ ಅಭಿಮಾನಿ ತಮ್ಮ ಅಭಿಮಾನವನ್ನು 'ಟಗರು' ದೋಸೆ ಮಾಡಿ ತೋರಿಸಿದ್ದಾರೆ.

ಫೋಟೋಗಳು: 'ಟಗರು' ಚಿತ್ರ ಸೆಟ್ ನಲ್ಲಿ ಪುನೀತ್ ರಾಜ್ ಕುಮಾರ್

ದಾವಣಗೆರೆಯ ಈ ಅಪ್ಪಟ್ಟ ಶಿವಣ್ಣನ ಅಭಿಮಾನಿ ದೊಡ್ಡ ದೋಸೆ ಮಾಡಿ ಅದಕ್ಕೆ 'ಟಗರು' ಟೈಟಲ್ ಬರೆದಿದ್ದಾರೆ. 'ಟಗರು' ದೋಸೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹಿಂದೆ ಶಿವಣ್ಣ ಫ್ಯಾನ್ಸ್ ಕಾರು, ಬೈಕ್ ಗಳಿಗೆ 'ಟಗರು' ಸಿನಿಮಾದ ಚಿತ್ರ ಬರೆಸಿಕೊಂಡು ಕ್ರೇಜ್ ಸೃಷ್ಟಿಸಿದ್ದರು. ಈಗ ಈ ಅಭಿಮಾನಿ ಒಂದು ಹೆಜ್ಜೆ ಮುಂದೆ ಹೋಗಿ 'ಟಗರು' ದೋಸೆ ಮಾಡಿದ್ದಾರೆ.

Shiva Rajkumar's 'Tagaru' movie craze

ಅಂದಹಾಗೆ, ಶಿವಣ್ಣ ಅವರ 'ಟಗರು' ಸಿನಿಮಾವನ್ನು ಸೂರಿ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ಡಬ್ಬಿಂಗ್ ಕೆಲಸದಲ್ಲಿ ಬಿಜಿ ಇರುವ 'ಟಗರು' ಕೆಲವೇ ತಿಂಗಳಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ.

English summary
Watch Video: Fan makes 'Tagaru' Dosa

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada