For Quick Alerts
  ALLOW NOTIFICATIONS  
  For Daily Alerts

  'ರೈತರಿಗೆ ನಮ್ಮ ಬೆಂಬಲ ಸದಾ ಇರುತ್ತೆ': ಹೋರಾಟಕ್ಕೆ ಶಿವರಾಜ್ ಕುಮಾರ್ ಬೆಂಬಲ

  |

  ದೆಹಲಿ ರೈತ ಹೋರಾಟಕ್ಕೆ ಬಾಲಿವುಡ್‌ನ ಬಹುಪಾಲು ಸೆಲೆಬ್ರಿಟಿಗಳು ಬೆಂಬಲ ಸೂಚಿಸಿಲ್ಲ, ಕೆಲವರಂತೂ ರೈತ ಹೋರಾಟದ ವಿರುದ್ಧ ಮಾತನಾಡಿದ್ದಾರೆ. ಹಲವರು ಮೌನವಾಗಿದ್ದಾರೆ. ಆದರೆ ಕನ್ನಡದ ಸ್ಟಾರ್ ನಟ ಶಿವರಾಜ್ ಕುಮಾರ್ ರೈತ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.

  ಅವರು ಬೀದಿಯಲ್ಲಿ ಕೂತು ಊಟ ಮಾಡೋದು ನೋಡಿದ್ರೆ ನೋವಾಗುತ್ತೆ | Filmibeat Kannada

  ಇಂದು ಮಾಧ್ಯಮಗಳೊಟ್ಟಿಗೆ ಮಾತನಾಡಿದ ಶಿವಣ್ಣ, 'ನನ್ನ ಕೈಯಲ್ಲಿ ಅಧಿಕಾರ ಇದ್ದಿದ್ರೆ ರೈತರು ಕೇಳಿದ್ದು ಬರೆದುಕೊಡ್ತಿದ್ದೆ. ಸರ್ಕಾರ ರೈತರ ಮನವಿಗೆ ಸ್ಪಂದಿಸಬೇಕು' ಎಂದು ಹೇಳಿದ್ದಾರೆ.

  ''ರೈತರು ರಸ್ತೆಯಲ್ಲಿ ಕುಳಿತು ಊಟ ಮಾಡುವುದನ್ನು ನೋಡಿದರೆ ಹೊಟ್ಟೆ ಉರಿಯುತ್ತೆ. ಯಾರೂ ಹೋರಾಟದ ಬಗ್ಗೆ ಕಾಮೆಂಟ್ ಮಾಡುತ್ತಿಲ್ಲ ಎನ್ನುತ್ತಾರೆ. ಆದರೆ ಅದು ನಮ್ಮಿಂದ, ಇಂಡಸ್ಟ್ರಿಯಿಂದ ಅಥವಾ ಇಡೀ ಭಾರತೀಯ ಸಿನಿಮಾರಂಗ ಬೀದಿ ಇಳಿಯೋದರಿಂದ ಏನೂ ಸಾಧ್ಯವಾಗಲ್ಲ, ಅದನ್ನು ಸರ್ಕಾರ ಬಗೆಹರಿಸಬೇಕು' ಎಂದಿದ್ದಾರೆ ಶಿವರಾಜ್ ಕುಮಾರ್.

  'ಒಂದು ವೇಳೆ ನಾವು ಬೀದಿಗೆ ಇಳಿಯುವುದರಿಂದ ಸಮಸ್ಯೆ ಬಗೆಹರಿಯುವುದಾದರೆ ನಾವು ಸಿದ್ಧ. ಯಾರೇ ರೈತರ ಪರವಾಗಿ ನಿಂತರೆ ಬೆಂಬಲ ಇದೆ' ಎಂದಿದ್ದಾರೆ ಶಿವಣ್ಣ.

  ''ನಮ್ಮ ಸಮಸ್ಯೆಗಳನ್ನ ನಾವು ಪರಿಹಾರ ಮಾಡಿಕೊಳ್ಳೋಕೆ ಆಗುತ್ತಿಲ್ಲ, ಅಂತದ್ರಲ್ಲಿ ನಮ್ಮ ಕೈಯಲ್ಲಿ ಏನಿದೆ, ರೈತರ ಏನೇ ಮಾಡಿದರೂ ನಮ್ಮ ಬೆಂಬಲ ಕಂಡಿದ ಇದೆ. ನನ್ನ ಕೈಯಲ್ಲಿ ಆಧಿಕಾರ ಇದ್ದಿದ್ದರೆ, ಎಲ್ಲವನ್ನೂ ಬರೆದು ಕೊಡ್ತಿದ್ದೆ'' ಎಂದಿದ್ದಾರೆ ಶಿವಣ್ಣ.

  ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ಹೊಸ ಸ್ಟುಡಿಯೋದಲ್ಲಿ ನಟ ಶಿವರಾಜ್ ಕುಮಾರ್ ಅವರು ಹಾಡಿನ ರೆಕಾರ್ಡ್ ಮಾಡಿದರು. ರವಿಚಂದ್ರನ್ ನಟಿಸುತ್ತಿರುವ 'ಕನ್ನಡಿಗ' ಸಿನಿಮಾದ ಹಾಡಿಗೆ ಶಿವಣ್ಣ ದನಿಯಾದರು. ಆ ಸಮಯದಲ್ಲಿ ಎದುರಾದ ಮಾಧ್ಯಮಗಳೊಟ್ಟಿಗೆ ಶಿವಣ್ಣ ಮೇಲಿನಂತೆ ಮಾತನಾಡಿದ್ದಾರೆ.

  ಶಿವರಾಜ್ ಕುಮಾರ್ ಅವರು ರೈತ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಹಲವಾರು ಮಂದಿ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತಿದ್ದಾರೆ. ರೈತ ಹೋರಾಟದ ಬಗ್ಗೆ ಮಾತನಾಡಲು ಬಾಲಿವುಡ್ ನಟರೇ ಭಯ ಪಡುತ್ತಿರುವ ಹೊತ್ತಿನಲ್ಲಿ ಶಿವಣ್ಣ ರೈತ ಪ್ರತಿಭಟನೆಗೆ ಬೆಂಬಲ ಸೂಚಿಸಿ ಮಾತನಾಡಿರುವುದಕ್ಕೆ ಅಭಿನಂದನೆಗಳು ವ್ಯಕ್ತವಾಗುತ್ತಿದೆ.

  English summary
  Actor Shiva Rajkumar supports Delhi farmers protest. He said if i would have a chance I'll give what ever farmers are demanding.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X