»   » ಅಪ್ಪುವಿನಂತೆ ಸುದೀಪ್ ಕೂಡ ನನ್ನ ಸಹೋದರನೆಂದ ಶಿವಣ್ಣ

ಅಪ್ಪುವಿನಂತೆ ಸುದೀಪ್ ಕೂಡ ನನ್ನ ಸಹೋದರನೆಂದ ಶಿವಣ್ಣ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ವಾರ್ ಹೆಚ್ಚಾಗಿದೆ ಎನ್ನುತ್ತಿದ್ದ ಕಾಲವೆಲ್ಲ ಹೋಯ್ತು. ಈಗೇನಿದ್ರು ನಾವೆಲ್ಲ ಒಂದೇ ಎಂಬ ಧ್ಯೇಯ. ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ 'ಮಾಸ್ ಲೀಡರ್' ಚಿತ್ರವನ್ನ ಕಿಚ್ಚ ಸುದೀಪ್ ನೋಡಿ ಮೆಚ್ಚಿಕೊಂಡಿದ್ದಾರೆ. ಅದರ ಬೆನ್ನಲ್ಲೆ ಸುದೀಪ್ ಅವರ ಬಗ್ಗೆ ಶಿವಣ್ಣ ಮೆಚ್ಚುಗೆಯ ಮಾತನ್ನಾಡಿದ್ದಾರೆ.

ಸುದೀಪ್ ಅವರಿಗಾಗಿ ವಿಶೇಷ ಪ್ರದರ್ಶನ ಮಾಡಿದ್ದ ಚಿತ್ರತಂಡ 'ಮಾಸ್ ಲೀಡರ್' ಸಿನಿಮಾವನ್ನ ತೋರಿಸಿದ್ದಾರೆ. ನಿನ್ನೆ (ಆಗಸ್ಟ್ 9) ಕಿಚ್ಚನ ಮನೆಯಲ್ಲಿ ಸ್ಪೆಷಲ್ ಶೋ ಏರ್ಪಡಿಸಲಾಗಿತ್ತು. ಈ ಪ್ರದರ್ಶನಕ್ಕೆ ಶಿವರಾಜ್ ಕುಮಾರ್ ಮತ್ತು ಗೀತಾ ದಂಪತಿ ಕೂಡ ಆಗಮಿಸಿದ್ದರು.

ಈ ವೇಳೆ ಮಾತನಾಡಿದ ಶಿವಣ್ಣ ಸುದೀಪ್ ನನ್ನ ಸಹೋದರ ಎಂದಿದ್ದಾರೆ. ಕಿಚ್ಚನ ಬಗ್ಗೆ ಹ್ಯಾಟ್ರಿಕ್ ಹೀರೋ ಏನಂದ್ರು ಮುಂದೆ ಓದಿ.....

ಸುದೀಪ್ ಮನೆಗೆ ಭೇಟಿ ನೀಡಿದ ಶಿವಣ್ಣ

''ಸುದೀಪ್ ಮನೆಗೆ ಬರ್ತಿರುವುದು ಹೊಸದೇನಲ್ಲ. ಯಾವಗಲೂ ಬರ್ತಾ ಇರ್ತೀನಿ. ಶಾಂತಿ ನಿವಾಸ ಸಿನಿಮಾದ ಪ್ರೀಮಿಯರ್ ಶೋ ನೋಡಿ ಇಲ್ಲಿಗೆ ಬಂದಿದ್ವಿ'' - ಶಿವರಾಜ್ ಕುಮಾರ್, ನಟ

ಶಿವಣ್ಣನ 'ಮಾಸ್ ಲೀಡರ್' ನೋಡಿ ಮೆಚ್ಚಿಕೊಂಡ ಕಿಚ್ಚ ಏನಂದ್ರು?

ಸುದೀಪ್ ಜೊತೆ ಸಿನಿಮಾ ನೋಡಿದ್ದು ಖುಷಿ ಕೊಟ್ಟಿದೆ

''ಸುದೀಪ್ ಈ ಥಿಯೇಟರ್ ಕಟ್ಟುವಾಗ ಒಮ್ಮೆ ನಾನು, ಗೀತಾ ಬಂದಿದ್ವಿ. ಆಗ ಇನ್ನು ರೆಡಿ ಆಗ್ತಿತ್ತು. ಲಂಡನ್ ನಲ್ಲಿರುವಾಗ ಈ ಐಡಿಯಾ ಬಂತು. ಸುದೀಪ್ ಕೇಳಿದರು ಸಿನಿಮಾ ನೋಡೋಣ ಅಂತ, ನನಗೂ ಆಸೆ ಇತ್ತು. ನಾನು ಈಗಲೇ ಸಿನಿಮಾ ನೋಡಿದ್ದು'' - ಶಿವರಾಜ್ ಕುಮಾರ್, ನಟ

ಶಿವಣ್ಣನ 'ಮಾಸ್ ಲೀಡರ್' ನೋಡಲು ಈ 6 ಕಾರಣಗಳು ಸಾಕು!

ಸುದೀಪ್ ನನ್ನ ಸಹೋದರ

''ಸುದೀಪ್ ನಮ್ಮ ಕುಟುಂಬದ ಸದಸ್ಯರೇ. ನನಗೆ ಅಪ್ಪು ಹೇಗೋ, ಸುದೀಪ್ ಕೂಡ ಹಾಗೆ. ನನ್ನ ಸುದೀಪ್ ಸ್ನೇಹ ಸುಮಾರು 25 ವರ್ಷ ಆಗಿರಬಹುದು. ಅವರು ಫ್ಯಾಮಿಲಿ ನಮಗೆ ಆಪ್ತರು. ಸುದೀಪ್ ಇಂಡಸ್ಟ್ರಿಗೆ ಬಂದಾಗನಿಂದಲೂ ಪರಿಚಯ. ಒಟ್ಟಿಗೆ ಸಿನಿಮಾ ನೋಡಿದ್ದು ಖುಷಿ ಕೊಟ್ಟಿದೆ'' - ಶಿವರಾಜ್ ಕುಮಾರ್, ನಟ

'ಮಾಸ್ ಲೀಡರ್'ಗಾಗಿ ಒಂದಾದ ಸ್ಯಾಂಡಲ್ ವುಡ್ ತಾರೆಯರು

ಆಗಸ್ಟ್ 11ಕ್ಕೆ ಬಿಡುಗಡೆ

'ಮಾಸ್ ಲೀಡರ್' ಚಿತ್ರದಲ್ಲಿ ಶಿವಣ್ಣ ಆರ್ಮಿ ಆಫೀಸರ್ ಆಗಿ ಕಾಣಿಸಿಕೊಂಡಿದ್ದು, ಶಿವರಾಜ್ ಕುಮಾರ್ ಜೊತೆಯಲ್ಲಿ ಪ್ರಣಿತಾ, ವಿಜಯ ರಾಘವೇಂದ್ರ, ಲೂಸ್ ಮಾದ ಯೋಗೀಶ್, ಗುರು ಜಗ್ಗೇಶ್, ಶರ್ಮಿಳಾ ಮಾಂಡ್ರೆ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ನರಸಿಂಹ ಅವರು ಆಕ್ಷನ್ ಕಟ್ ಹೇಳಿದ್ದು, ತರುಣ್ ಶಿವಪ್ಪ ಮತ್ತು ಹಾರ್ದಿಕ್ ಗೌಡ ನಿರ್ಮಾಣ ಮಾಡಿದ್ದಾರೆ.

ಶಿವರಾಜ್ ಕುಮಾರ್ ಮಾತನಾಡಿರುವ ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ

English summary
Kannada Actor Shiva rajkumar Talk about Sudeep after finishing Mass Leader Movie premiere show at sudeep home on yesterday (august 9th)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada