For Quick Alerts
  ALLOW NOTIFICATIONS  
  For Daily Alerts

  ಒಂದೇ ಚಿತ್ರದಲ್ಲಿ ಶಿವಣ್ಣ, ರಾಜ್ ಬಿ ಶೆಟ್ಟಿ ಹಾಗೂ ಉಪೇಂದ್ರ; ನಿರ್ದೇಶನ ಯಾರದ್ದು?

  |

  ಇತ್ತೀಚಿನ ದಿನಗಳಲ್ಲಿ ಮಲ್ಟಿಸ್ಟಾರ್ ಚಿತ್ರಗಳಿಗೆ ಕ್ರೇಜ್ ಹಾಗೂ ಬೇಡಿಕೆ ಎರಡೂ ಸಹ ಹೆಚ್ಚಾಗುತ್ತಿದೆ. ರಾಜ್‌ಕುಮಾರ್ ಕಾಲದಿಂದಲೂ ಇರುವ ಈ ಮಲ್ಟಿಸ್ಟಾರರ್ ಟ್ರೆಂಡ್ ಹೊಸತೇನು ಅಲ್ಲದಿದ್ದರೂ ಪ್ರತಿ ಬಾರಿ ಇಬ್ಬರು ಸ್ಟಾರ್ ನಟರು ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ ಆ ಚಿತ್ರದ ಮೇಲೆ ನಿರೀಕ್ಷೆ ದುಪ್ಪಟ್ಟಾಗುತ್ತದೆ. ಇನ್ನು ಸೆಂಚುರಿ ಸ್ಟಾರ್ ಶಿವ ರಾಜ್‌ಕುಮಾರ್ ಇತ್ತೀಚಿನ ದಿನಗಳಲ್ಲಿ ಹೆಚ್ಚು ಮಲ್ಟಿಸ್ಟಾರರ್ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದು, ಈ ಪೈಕಿ ಬಹುತೇಕ ಹಿಟ್ ಆಗಿವೆ ಹಾಗೂ ನಿರ್ಮಾಪಕರ ಜೇಬು ತುಂಬಿಸಿವೆ.

  'ದಿ ವಿಲನ್' ಚಿತ್ರಕ್ಕಾಗಿ ಸುದೀಪ್ ಜತೆ ತೆರೆ ಹಂಚಿಕೊಂಡಿದ್ದ ನಟ ಶಿವ ರಾಜ್‌ಕುಮಾರ್ ನಂತರದ ದಿನಗಳಲ್ಲಿ ದೊಡ್ಡ ಸ್ಟಾರ್ ನಟರ ಜತೆ ತೆರೆ ಹಂಚಿಕೊಂಡಿರಲಿಲ್ಲ. ಅದರಲ್ಲಿಯೂ ಶಿವ ರಾಜ್‌ಕುಮಾರ್ ತಮ್ಮ ಗೆಳೆಯ ಉಪೇಂದ್ರ ಜತೆ ಮಲ್ಟಿಸ್ಟಾರರ್ ಚಿತ್ರದಲ್ಲಿ ಮತ್ತೊಮ್ಮೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿಯೇ ಹರಿದಾಡಿತ್ತು. ಈ ಹಿಂದೆ ಪ್ರೀತ್ಸೆ, ಲವ ಕುಶ ಚಿತ್ರಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದ ಈ ಜೋಡಿ ಮತ್ತೊಮ್ಮೆ ಯಾವ ಚಿತ್ರದಲ್ಲಿ ಕಾಣಿಸಿಕೊಳ್ಳಲಿದೆ ಎಂಬ ಕುತೂಹಲ ಸಿನಿ ರಸಿಕರಲ್ಲಿ ಹಾಗೂ ಅಭಿಮಾನಿಗಳಲ್ಲಿ ಮೂಡಿತ್ತು.

  ಈ ಕುತೂಹಲಕ್ಕೆ ಇದೀಗ ಸ್ವತಃ ಶಿವ ರಾಜ್‌ಕುಮಾರ್ ಅವರೇ 'ಸಿನಿಬಜ್ ಕನ್ನಡ' ನಡೆಸಿದ ಸಂದರ್ಶನದಲ್ಲಿ ಈ ವಿಷಯದ ಕುರಿತು ಮಾತನಾಡಿ ತೆರೆ ಎಳೆದಿದ್ದಾರೆ. ಅಷ್ಟೇ ಅಲ್ಲದೇ ಈ ಚಿತ್ರದಲ್ಲಿ ತಮ್ಮ ಹಾಗೂ ಉಪೇಂದ್ರ ಜತೆಗೆ ರಾಜ್ ಬಿ ಶೆಟ್ಟಿ ಸಹ ಇರಲಿದ್ದಾರೆ ಎಂಬ ವಿಶೇಷ ಮಾಹಿತಿಯನ್ನು ಶಿವ ರಾಜ್‌ಕುಮಾರ್ ಹಂಚಿಕೊಂಡಿದ್ದಾರೆ.

  ಶಿವಣ್ಣ, ಉಪ್ಪಿ ಹಾಗೂ ರಾಜ್ ಒಂದೇ ಚಿತ್ರದಲ್ಲಿ

  ಶಿವಣ್ಣ, ಉಪ್ಪಿ ಹಾಗೂ ರಾಜ್ ಒಂದೇ ಚಿತ್ರದಲ್ಲಿ

  ಸಂದರ್ಶನದಲ್ಲಿ ತಮ್ಮ ಮುಂದಿನ ಚಿತ್ರಗಳ ಬಗ್ಗೆ ಮಾಹಿತಿ ಹಂಚಿಕೊಂಡ ಶಿವ ರಾಜ್‌ಕುಮಾರ್ 45 ಎಂಬ ಚಿತ್ರದಲ್ಲಿ ತನ್ನ ಜತೆ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ನಟಿಸಲಿದ್ದಾರೆ ಎಂಬ ಮಾಹಿತಿ ಹಂಚಿಕೊಂಡರು. ಈ ಮೂವರು ಒಂದೇ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಅಂಶ ಚಿತ್ರಕ್ಕೆ ದೊಡ್ಡ ಹೈಪ್ ನೀಡುವುದರಲ್ಲಿ ಎರಡು ಮಾತಿಲ್ಲ.

  ನಿರ್ದೇಶನ ಯಾರದ್ದು?

  ನಿರ್ದೇಶನ ಯಾರದ್ದು?

  ಇನ್ನು ಶಿವ ರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಒಟ್ಟಿಗೆ ಕಾಣಿಸಿಕೊಳ್ಳಲಿರುವ ಚಿತ್ರ ಅರ್ಜುನ್ ಜನ್ಯಾ ನಿರ್ದೇಶನದ 45 ( ಫಾರ್ಟಿ ಫೈವ್ ). ಹೌದು, ಕಳೆದ ವರ್ಷದ ಜೂನ್ ತಿಂಗಳಿನಲ್ಲಿ ಶಿವ ರಾಜ್‌ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಈ ಚಿತ್ರವನ್ನು ಘೋಷಣೆ ಮಾಡಲಾಗಿತ್ತು. ಅಂದು ಹಂಚಿಕೊಂಡಿದ್ದ ಈ ಪೋಸ್ಟರ್‌ನಲ್ಲಿ ಕೇವಲ ಶಿವ ರಾಜ್‌ಕುಮಾರ್ ನಟಿಸಲಿರುವ ಚಿತ್ರ ಎಂದು ಉಲ್ಲೇಖಿಸಲಾಗಿತ್ತು. ಆದರೆ ಇದೀಗ ಶಿವ ರಾಜ್‌ಕುಮಾರ್ ತನ್ನ ಜತೆ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಕೂಡ ಇರಲಿದ್ದಾರೆ ಎಂಬುದನ್ನು ತಿಳಿಸಲಿದ್ದಾರೆ.

  ಯಾವಾಗ ಶುರುವಾಗಲಿದೆ 45?

  ಯಾವಾಗ ಶುರುವಾಗಲಿದೆ 45?

  ಇನ್ನು ಅರ್ಜುನ್ ಜನ್ಯಾ ನಿರ್ದೇಶನದ 45 ಚಿತ್ರವನ್ನು ಶಿವ ರಾಜ್‌ಕುಮಾರ್ ಯೋಗರಾಜ್ ಭಟ್ ನಿರ್ದೇಶನದ 'ಕರಟಕ ದಮನಕ' ಹಾಗೂ ಶ್ರೀನಿ ನಿರ್ದೇಶನದ 'ಘೋಸ್ಟ್' ಚಿತ್ರದ ಚಿತ್ರೀಕರಣ ಮುಗಿದ ಬಳಿಕ ಕೈಗೆತ್ತಿಕೊಳ್ಳಲಿದ್ದಾರೆ. ಸದ್ಯ ಈ ಎರಡೂ ಚಿತ್ರಗಳ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಕರಟಕ ದಮನಕ ಫನ್ ಎಲಿಮೆಂಟ್ ಚಿತ್ರ ಹಾಗೂ ಘೋಸ್ಟ್ ಸಸ್ಪೆನ್ಸ್ ಥ್ರಿಲ್ಲರ್ ಎಂದು ಶಿವಣ್ಣ ತಿಳಿಸಿದ್ದಾರೆ.

  English summary
  Shiva Rajkumar, Upendra and Raj B Shetty will share screen in Arjun Janya's 45 movie. Read on
  Monday, January 2, 2023, 14:52
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X