For Quick Alerts
  ALLOW NOTIFICATIONS  
  For Daily Alerts

  ದಾಖಲೆ ಸಂಖ್ಯೆ ಚಿತ್ರಮಂದಿರಗಳಲ್ಲಿ 'ಶಿವ' ತಾಂಡವ

  |

  ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಹಾಗೂ ಓಂ ಪ್ರಕಾಶ್ ರಾವ್ ಸಂಗಮದ 'ಶಿವ' ಚಿತ್ರವು ಇಂದು (ಆಗಸ್ಟ್ 24, 2012) ರಂದು ಕರ್ನಾಟಕದಾದ್ಯಂತ '213' ದಾಖಲೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಕನ್ನಡ ಚಿತ್ರವೊಂದು '200'ಕ್ಕೂ ಹೆಚ್ಚು ತೆರೆಯಲ್ಲಿ ಪ್ರದರ್ಶನ ಕಾಣುತ್ತಿರುವುದು ಇದೇ ಮೊದಲು. ಈ ಮೊದಲು ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಚಿಂಗಾರಿ' ಚಿತ್ರವು 190 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು.

  ಪತ್ರಿಕೆಗಳಲ್ಲಿ ಬಂದಿರುವ ಜಾಹೀರಾತಿನ ಪ್ರಕಾರ ಮಲ್ಟಿಫ್ಲೆಕ್ಸ್ ಗಳೂ ಸೇರಿದಂತೆ ಒಟ್ಟೂ 213 ಚಿತ್ರಮಂದಿರಗಳಲ್ಲಿ ಶಿವ ಚಿತ್ರ ಬಿಡುಗಡೆಯಾಗಿದೆ. ಎಲ್ಲೆಡೆ 'ಶಿವ'ನಿಗೆ ಭರ್ಜರಿ ಪ್ರತಿಕ್ರಿಯೆ ದೊರೆತಿದೆ. ಶಿವರಾಜ್ ಕುಮಾರ್ ಅವರ 101ನೇ ಚಿತ್ರವೆಂಬ ಹೆಗ್ಗಳಿಕೆಯೊಂದಿಗೆ ತೆರೆ ಅಲಂಕರಿಸಿರುವ ಶಿವ, ಅದ್ದೂರಿ ಪ್ರಚಾರಕಾರ್ಯದ ಮೂಲಕ ತೆರೆಗೆ ಬಂದಿದೆ. ಹಾಗೇ ದಾಖಲೆ ಚಿತ್ರಮಂದಿರಗಳಲ್ಲು ಬಿಡುಗಡೆಯಾಗಿದೆ.

  ಬೆಂಗಳೂರಿನ ಸಂತೋಷ್ ಚಿತ್ರಮಂದಿರದ ಎದುರು ಚಿತ್ರದಲ್ಲಿ ಬಳಸಲಾಗಿರುವ ಶಿವನ ಬೃಹತ್ ಮೂರ್ತಿಯನ್ನು ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗಿದೆ. "ನಮ್ಮ ಚಿತ್ರದ ಶೀರ್ಷಿಕೆ 'ಶಿವ'. ಚಿತ್ರದ ಅಗತ್ಯಕ್ಕೆ 'ಶಿವ'ನ ಪ್ರತಿಮೆ ಮಾಡಿಸಿ, ನಾವು ಚಿತ್ರೀಕರಿಸಿದ್ದೇವೆ. ನಂತರ ಅದನ್ನು ಹಾಗೇ ಮೂಲೆಗುಂಪು ಮಾಡುವ ಬದಲು ಪ್ರೇಕ್ಷಕರಿಗೆ ಪ್ರತ್ಯಕ್ಷ ದರ್ಶನ ಮಾಡಿಸಿದರೆ ಒಳ್ಳೆಯದು. ಜೊತೆಗೆ ಚಿತ್ರಕ್ಕೆ ಸಂಬಂಧಪಟ್ಟ ದೇವರ ವಿಗ್ರಹವಿದ್ದರೆ ಚಿತ್ರದ ಪ್ರಚಾರಕ್ಕೂ ಅನುಕೂಲ" ಎಂದಿದ್ದಾರೆ ಈ ಬಗ್ಗೆ ಓಂ ಪ್ರಕಾಶ್ ರಾವ್.

  ರಾಜ್ಯದಾದ್ಯಂತ ಶಿವಣ್ಣರ ಅಭಿಮಾನಿ ಸಂಘಗಳು 'ಶಿವ' ಚಿತ್ರಕ್ಕೆ ವಿಶೇಷ ಸ್ವಾಗತ ಕೋರಿದ್ದು ಸಂತೋಷ್ ಚಿತ್ರಮಂದಿರದ ಎದುರು ಇಡಲಾಗಿರುವ ಬೃಹತ್ ಶಿವನ ಮೂರ್ತಿಗೆ ಹಾಲಿನ ಅಭಿಷೇಕ ಮಾಡಿ ಹಾಗೂ ಹೂವಿನ ಹಾರ ಹಾಕಿ ಸಂಭ್ರಮಿಸಲಾಗಿದೆ. ಮೈಸೂರಿನ ಸಂಗಮ್ ಚಿತ್ರಮಂದಿರದ ಎದುರು ಶಿವರಾಜ್ ಕುಮಾರ್ ಬೃಹತ್ ಕಟೌಟ್ ಇಡಲಾಗಿದೆ. ಅದಕ್ಕೆ ಹೂವಿನ ಹಾರ ಹಾಕಿ ಸಿಂಗರಿಸುವ ವೇಳೆ ಅಭಿಮಾನಿಯೊಬ್ಬ ಬಿದ್ದು ಕೈಮುರಿದುಕೊಂಡ ಘಟನೆ ಕೂಡ ನಡೆದಿದೆ.

  ಕೆಪಿ ಶ್ರೀಕಾಂತ್ ನಿರ್ಮಾಣದ ಬಹುನಿರೀಕ್ಷೆಯ ಈ ಚಿತ್ರಕ್ಕೆ ಶಿವಣ್ಣರಿಗೆ ಮೊದಲ ಬಾರಿ ರಾಗಿಣಿ ನಾಯಕಿಯಾಗಿದ್ದಾರೆ. 'ಮೈಲಾರಿ' ನಂತರ ಶಿವಣ್ಣರ ಈ ಚಿತ್ರಕ್ಕೆ ಗುರುಕಿರಣ್ ಸಂಗೀತವಿದೆ. ವಿಶೇಷ ಗ್ರಾಫಿಕ್ಸ್ ಮೂಲಕ ಚಿತ್ರವು ತಾಂತ್ರಿಕವಾಗಿ ತುಂಬಾ ಅದ್ದೂರಿಯಾಗಿದ್ದು ಚಿತ್ರದ ಹೈಲೈಟ್ ಎನ್ನಲಾಗಿದೆ. ಭಾರಿ ನಿರೀಕ್ಷೆಯಿಟ್ಟಿರುವ ಶಿವಣ್ಣರ ಅಭಿಮಾನಿಗಳಿಗೆ ಈ ಚಿತ್ರ ನಿರಾಸೆ ಮಾಡಲಾರದೆಂಬ ನಂಬಿಕೆ ಬಲವಾಗಿದೆ. ಇನ್ನು ಕೆಲವೇ ಗಂಟೆಗಳಲ್ಲಿ ಚಿತ್ರ ವಿಮರ್ಶೆ ಬರಲಿದೆ, ನೋಡಿ...(ಒನ್ ಇಂಡಿಯಾ ಕನ್ನಡ)

  English summary
  Hit Trick Hero Shivarajkumar's '101' movie 'Shiva' released Today, on 24th August 2012. This movie released in 213 theaters for the first time in Karnataka. Om Prakash Rao directed this movie for KP Srikanth Production. Gurukiran composed Music for this Shivanna movie once again after Mylaari. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X