»   » ಅಮೆರಿಕದಲ್ಲೂ 'ಶಿವಲಿಂಗ' ಅಬ್ಬರ ಶುರು ಆಯ್ತು

ಅಮೆರಿಕದಲ್ಲೂ 'ಶಿವಲಿಂಗ' ಅಬ್ಬರ ಶುರು ಆಯ್ತು

Posted By:
Subscribe to Filmibeat Kannada

ಇಡೀ ಕರ್ನಾಟಕದಾದ್ಯಂತ ತೆರೆಕಂಡು, ತದನಂತರ ಬೇರೆ ರಾಜ್ಯಗಳಲ್ಲೂ ತನ್ನ ಕಂಪನ್ನು ಪಸರಿಸಿದ ಶಿವರಾಜ್ ಕುಮಾರ್ ಅವರ 'ಶಿವಲಿಂಗ' ಸಿನಿಮಾ ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಾ ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸುತ್ತಿದೆ.

ನಿರ್ದೇಶಕ ಪಿ.ವಾಸು ಅವರು ಆಕ್ಷನ್-ಕಟ್ ಹೇಳಿರುವ ಹಾರರ್-ಥ್ರಿಲ್ಲರ್ ಸಿನಿಮಾ 'ಶಿವಲಿಂಗ' ಸಿನಿಮಾ ನಮ್ಮ ರಾಜ್ಯದಲ್ಲಿ ಮತ್ತು ಪಕ್ಕದ ರಾಜ್ಯದಲ್ಲಿ ಸದ್ದು ಮಾಡಿದ ನಂತರ ಇದೀಗ ದೇಶ ಸಂಚರಿಸಲು ಆರಂಭಿಸಿದೆ.[ಲಂಡನ್ ಗೆ ಹಾರಲು ಸಜ್ಜಾದ ಶಿವಣ್ಣನ 'ಶಿವಲಿಂಗ']


Shivanna's 'Shivalinga' screening in Waterbury on March 5

ಲಂಡನ್ ನಲ್ಲಿ 'ಶಿವಲಿಂಗ' ಪ್ರದರ್ಶನ ಕಾಣುತ್ತಿದೆ ಎಂದು ಸುದ್ದಿಯಾದ ಬೆನ್ನಲ್ಲೇ ಇದೀಗ ಯು.ಎಸ್ ನ ವಾಟರ್ ಬರಿ ಸಿಟಿಯಲ್ಲೂ 'ಶಿವಲಿಂಗ'ನ ಅಬ್ಬರ ಭರ್ಜರಿಯಾಗಿ ಆರಂಭವಾಗುತ್ತಿದೆ.


ಮಾರ್ಚ್ 5 ರಂದು ಶನಿವಾರ 6.30ಕ್ಕೆ ವಾಟರ್ ಬರಿ ಸಿಟಿಯಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ನಟಿ ವೇದಿಕಾ ಅವರು ಅಭಿನಯಿಸಿರುವ 'ಶಿವಲಿಂಗ' ಸಿನಿಮಾ ಗ್ರ್ಯಾಂಡ್ ಆಗಿ ಪ್ರದರ್ಶನಗೊಳ್ಳಲಿದೆ.['ಶಿವಲಿಂಗ' ಚಿತ್ರದ ಬಗ್ಗೆ ಏನೇನು ಮಾತುಗಳು ಕೇಳಿಬರುತ್ತಿವೆ ಗೊತ್ತೇ?]


Shivanna's 'Shivalinga' screening in Waterbury on March 5

ಕೇವಲ ಒಂದೇ ಒಂದು ಶೋ ಇರುವುದರಿಂದ ಅಮೆರಿಕದಲ್ಲಿರುವ ಕನ್ನಡಿಗರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಯುಎಸ್ ನಲ್ಲಿರುವ ಕನ್ನಡಿಗರಿಗೆ ಮನರಂಜನೆ ನೀಡುವ ಉದ್ದೇಶದಿಂದ ಹೊಯ್ಸಳ ಕನ್ನಡ ಕೂಟದವರು 'ಶಿವಲಿಂಗ' ಚಿತ್ರದ ಶೋ ಅನ್ನು ಹಮ್ಮಿಕೊಂಡಿದ್ದಾರೆ.[ರಂಗಿತರಂಗ ಅಮೆರಿಕದಲ್ಲಿ ಕೋಟಿಗಟ್ಟಲೇ ಗಳಿಕೆ]


ಹೆಚ್ಚಿನ ಮಾಹಿತಿಗಾಗಿ Apple Cinemas: 920 Walcott St, Waterbury, CT 06705, www.applecinemas.com ಗೆ ಭೇಟಿ ನೀಡಿ.

English summary
Kasturi Media (in association with Hoysala Kannada Koota of CT) has organized new blockbuster Kannada Movie 'Shivalinga' screening in Waterbury, CT on Mar 5th, at 6:30pm (Only one show). Kannada Actor Shiva Rajkumar, Actress Vedika in the lead role. The movie is directed by P Vasu.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada