»   » ರಜನಿಕಾಂತ್ ಬರ್ತ್ ಡೇಗೆ ತೆರೆಗೆ ಶಿವಣ್ಣ 'ಭಜರಂಗಿ'

ರಜನಿಕಾಂತ್ ಬರ್ತ್ ಡೇಗೆ ತೆರೆಗೆ ಶಿವಣ್ಣ 'ಭಜರಂಗಿ'

Posted By:
Subscribe to Filmibeat Kannada

ಈ ವರ್ಷದ ಬಹುನಿರೀಕ್ಷಿಸಿದ ಚಿತ್ರಗಳಲ್ಲಿ ಒಂದಾಗಿರುವ 'ಭಜರಂಗಿ' ಚಿತ್ರ ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ. ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರ ಡಿಸೆಂಬರ್ 12ಕ್ಕೆ ತೆರೆಗೆ ಅಪ್ಪಳಿಸುತ್ತಿದೆ.

ಕೊನೆ ಕ್ಷಣದಲ್ಲಿ ಏನಾದರೂ ಬದಲಾವಣೆಗಳಾದರೆ ಭಜರಂಗಿ ಚಿತ್ರ ಇನ್ನೊಂದು ವಾರ ಮುಂದೂಡಬಹುದು. ಇದನ್ನು ಹೊರತುಪಡಿಸಿದರೆ ಡಿಸೆಂಬರ್ 12ಕ್ಕೆ ಬಿಡುಗಡೆ ಪಕ್ಕಾ ಎನ್ನುತ್ತವೆ ಮೂಲಗಳು. ಅಂದಹಾಗೆ ಡಿಸೆಂಬರ್ 12ಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ 63ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

ಈ ಬಾರಿ ಶುಕ್ರವಾರಕ್ಕೆ ಬದಲಾಗಿ ಗುರುವಾರ (ಡಿ.12) ಚಿತ್ರವನ್ನು ತೆರೆಗೆ ತರುತ್ತಿರುವುದು ಇನ್ನೊಂದು ವಿಶೇಷ. ಗುರುರಾಯರ ಕೃಪೆ, ಶಿವಣ್ಣನ ಅಭಿಮಾನಿಗಳ ನಿರೀಕ್ಷೆ ಹುಸಿಯಾಗಲ್ಲ ಎಂಬ ಲೆಕ್ಕಾಚಾರದಲ್ಲಿ ಚಿತ್ರತಂಡವಿದೆ.

ನೃತ್ಯ ನಿರ್ದೇಶಕ ಎ ಹರ್ಷ ಅವರು ಆಕ್ಷನ್ ಕಟ್ ಹೇಳಿರುವ ಚಿತ್ರವಿದು. ಚಿತ್ರದ ನಾಯಕಿ ಐಂದ್ರಿತಾ ರೇ. ಈಗಾಗಲೆ ಚಿತ್ರದ ಟ್ರೇಲರ್ ಹಾಗೂ ಹಾಡುಗಳಿಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿರುವುದು ಚಿತ್ರತಂಡವ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸಿದೆ. ಬನ್ನಿ ಚಿತ್ರದ ಹೈಲೈಟ್ಸ್ ಮೇಲೆ ಒಮ್ಮೆ ಕಣ್ಣಾಡಿಸೋಣ.

ಐವತ್ತೊಂದರ ಹರೆಯದಲ್ಲೂ ಸಿಕ್ಸ್ ಪ್ಯಾಕ್

ಈ ಚಿತ್ರಕ್ಕಾಗಿ ಶಿವಣ್ಣ ತನ್ನ 51ನೇ ವಯಸ್ಸಿನಲ್ಲೇ ಚಿಗುರುಮೀಸೆ ಹುಡುಗರು ನಾಚುವಂತೆ ಕಾಣಿಸುತ್ತಿದ್ದಾರೆ. ಈ ಚಿತ್ರಕ್ಕಾಗಿ ತೂಕ ಇಳಿಸಿಕೊಂಡಿದ್ದು ಸಿಕ್ಸ್ ಪ್ಯಾಕ್ ನಲ್ಲಿ ಕಾಣಿಸುತ್ತಿದ್ದಾರೆ. ಚಿತ್ರದ ಹೈಲೈಟ್ ಗಳಲ್ಲಿ ಇದೂ ಒಂದು.

ಬಹುತೇಕ ಚಿತ್ರೀಕರಣ ಹೆಸರಘಟ್ಟದಲ್ಲಿ

ಭಜರಂಗಿ ಚಿತ್ರದ ಬಹುತೇಕ ಚಿತ್ರೀಕರಣ ಹೆಸರಘಟ್ಟದಲ್ಲಿ ನಡೆದಿರುವುದು ಇನ್ನೊಂದು ವಿಶೇಷ. ತಾಂತ್ರಿಕವರ್ಗದಲ್ಲಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ, ಚಿತ್ರಕಥೆ 'ವಿಕ್ಟರಿ' ಖ್ಯಾತಿಯ ನಂದಕಿಶೋರ್, ನಿರ್ದೇಶನ ಎ. ಹರ್ಷ, ಯೋಗಾನಂದ ಸಂಭಾಷಣೆ.

ಮೊಳಕಾಲಿನಲ್ಲೇ ನೃತ್ಯ ಮಾಡಿರುವ ಶಿವಣ್ಣ

ಈ ಚಿತ್ರದಲ್ಲಿ 'ರುದ್ರ ತಾಂಡವ' ನೃತ್ಯ ಇದ್ದು ಶಿವಣ್ಣ ಮೊಳಕಾಲಿನಲ್ಲೇ ನೃತ್ಯ ಮಾಡಿರುವುದು ವಿಶೇಷ. ಚಿತ್ರದ ಪ್ರಮುಖ ಆಕರ್ಷಣೆಗಳಲ್ಲಿ ಇದೂ ಒಂದಾಗಲಿದೆ ಎನ್ನುತ್ತಾರೆ ಹರ್ಷಾ.

ಎರಡು ಭಿನ್ನ ಶೇಡ್ ಗಳಲ್ಲಿ ಶಿವಣ್ಣ

"ಚಿತ್ರದಲ್ಲಿ ಶಿವಣ್ಣ ಅವರು ಎರಡು ವಿಭಿನ್ನ ಶೇಡ್ ಗಳಲ್ಲಿ ಕಾಣಿಸಲಿದ್ದಾರೆ. ಎರಡೂ ಪಾತ್ರಗಳ ಬಾಡಿ ಲಾಂಗ್ವೇಜ್ ಹಾಗೂ ಲುಕ್ ವಿಭಿನ್ನವಾಗಿದೆ" ಎಂದು ಚಿತ್ರತಂಡ ಹೇಳಿದೆ.

ಖಳನಟನಾಗಿ ಸೌರವ್ ಲೋಕೇಶ್

ನಾಟಕರಂಗದಿಂದ ಕನ್ನಡದ ಹೊಸ ಪ್ರತಿಭೆ ಬಂದಿರುವ ಸೌರವ್ ಲೋಕೇಶ್ ಅವರು ತಮ್ಮ ಉತ್ತಮ ಅಂಗಸೌಷ್ಟವ ಪ್ರದರ್ಶನದ ಜತೆಗೆ ಶಿವರಾಜ್ ಎದುರಾಗಿ ನಿಲ್ಲಲಿದ್ದಾರೆ.

English summary
The makers of Sandalwood's much anticipated movie Bhajarangi starring Hattrick hero Shivaraj Kumar, have confirmed its release date on 12 December 2013. The same day Superstar Rajinikanth will be celebrating his 63rd birthday.
Please Wait while comments are loading...