»   » 'ನಾನು ಚೆನ್ನಾಗಿದ್ದೇನೆ...ನೀವೆಲ್ಲಾ ಮನೆಗೆ ಹೋಗಿ' ಎಂದ ಶಿವು

'ನಾನು ಚೆನ್ನಾಗಿದ್ದೇನೆ...ನೀವೆಲ್ಲಾ ಮನೆಗೆ ಹೋಗಿ' ಎಂದ ಶಿವು

Posted By:
Subscribe to Filmibeat Kannada

ಹೀರೋ...ಹೀರೋ...ಹ್ಯಾಟ್ರಿಕ್ ಹೀರೋ....ಶಿವಣ್ಣನಿಗೆ ಜೈ...ಕರುನಾಡ ಚಕ್ರವರ್ತಿಗೆ ಜೈ...ಇದು ಮಲ್ಯ ಆಸ್ಪತ್ರೆ ಮುಂದೆ ಈಗ ಕೇಳಿ ಬರುತ್ತಿರುವ ಕೂಗು....ಇದಕ್ಕೆಲ್ಲಾ ಕಾರಣ ನಟ ಶಿವರಾಜ್ ಕುಮಾರ್ ರವರ ದರ್ಶನ..!

ಹೌದು, ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಗೆ ಹೃದಯಾಘಾತವಾಗಿದೆ ಅಂತ ಸುದ್ದಿ ಯಾವಾಗ ಸ್ಫೋಟಗೊಳ್ತೋ, ಅಂದಿನಿಂದ 'ಶಿವ ಭಕ್ತರು' ಆಘಾತಕ್ಕೆ ಒಳಗಾಗಿದ್ದರು. ಶಿವಣ್ಣನ ಆರೋಗ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. [ಶಿವಣ್ಣ ಅಸ್ವಸ್ಥ : ರಾಘಣ್ಣ, ಪುನೀತ್, ಮಧು ಬಂಗಾರಪ್ಪ ಏನಂತಾರೆ?]

shivarajkumar

ಎಲ್ಲರ ಆತಂಕಕ್ಕೆ ಫುಲ್ ಸ್ಟಾಪ್ ಇಡುವ ಸಲುವಾಗಿ ನಟ ಶಿವರಾಜ್ ಕುಮಾರ್ ಇಂದು ಸಂಜೆ 4.45ರ ಸುಮಾರಿಗೆ ಅಭಿಮಾನಿಗಳ ಮುಂದೆ ಬಂದರು. ಮಲ್ಯ ಆಸ್ಪತ್ರೆಯ ವಾರ್ಡ್ ನ ಕಿಟಕಿಯಿಂದ ಅಭಿಮಾನಿಗಳಗೆ ಕೈ ಬೀಸಿದರು.

''ನನಗೇನು ಆಗಿಲ್ಲ, ನಾನು ಸೂಪರ್ ಆಗಿದ್ದೇನೆ'' ಅನ್ನೋದನ್ನ THUMBS UP ಮಾಡುವ ಮೂಲಕ ಸಾಂಕೇತಿಕವಾಗಿ ಅಭಿಮಾನಿಗಳಿಗೆ ಶಿವಣ್ಣ ಸಂದೇಶ ನೀಡಿದರು. ''ನಾನು ಚೆನ್ನಾಗಿದ್ದೇನೆ. ನೀವೆಲ್ಲಾ ಮನೆಗೆ ಹೋಗಿ'' ಅನ್ನೋದನ್ನ ಅವರದ್ದೇ ಸ್ಟೈಲ್ ನಲ್ಲಿ ಶಿವಣ್ಣ ಹೇಳಿದರು. [ಶಿವಣ್ಣನಿಗೆ ಹಾರ್ಟ್ ಅಟ್ಯಾಕ್.! ಮಲ್ಯ ವೈದ್ಯರು ಹೇಳಿದ್ದೇನು?]

ಕೆಲವು ನಿಮಿಷಗಳ ಕಾಲ ವಾರ್ಡ್ ಕಿಟಕಿಯಲ್ಲಿ ನಿಂತ ಶಿವಣ್ಣ, ನಂತರ ವೈದ್ಯರ ಸಲಹೆ ಮೇರೆಗೆ ಒಳ ನಡೆದರು. ಅಲ್ಲಿಗೆ, ಶಿವಣ್ಣ is absolutely fine ಅಂತರ್ಥ. ಗಾಬರಿಗೊಂಡಿದ್ದ ಅಭಿಮಾನಿಗಳಿಗೆ ಇದಕ್ಕಿಂತ ಮತ್ತೇನು ಬೇಕು ಹೇಳಿ..??

    English summary
    After proper treatment, Kannada Actor Shivarajkumar is absolutely fit and fine. Shivarajkumar waved hands to his fans from the hospital's window to indicate that he is healthy. Shivarajkumar has suffered a mild heart attack and has been admitted to Mallya Hospital, Bengaluru today (October 6th).

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada