For Quick Alerts
  ALLOW NOTIFICATIONS  
  For Daily Alerts

  'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ'ನ ರಿಲೀಸ್ ಡೇಟ್ ಪಕ್ಕಾ ಆಯ್ತು!

  By Bharath Kumar
  |

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಟಗರು', 'ಲೀಡರ್, ಮತ್ತು 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಚಿತ್ರಗಳಲ್ಲಿ ಮೊದಲು ಯಾವುದು ಬಿಡುಗಡೆಯಾಗುತ್ತೆ ಎಂಬ ಕುತೂಹಲ ಕಾಡುತ್ತಿತ್ತು. ಈಗ ಮೊದಲ ಚಿತ್ರಕ್ಕೆ ದಿನಾಂಕ ನಿಗದಿಯಾಗಿದೆ.

  ನಿರೀಕ್ಷೆಯಂತೆ 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಚಿತ್ರ ಮೊದಲು ತೆರೆಕಾಣುತ್ತಿದ್ದು, ಈ ತಿಂಗಳಲ್ಲೇ ಥಿಯೇಟರ್ ಗೆ ಲಗ್ಗೆಯಿಡುತ್ತಿದೆ. ಈ ಮೂಲಕ ಶಿವಣ್ಣ ಅಭಿಮಾನಿಗಳು ಬಂಗಾರದ ಮನುಷ್ಯನ ಸ್ವಾಗತಕ್ಕೆ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಬಿಡುಗಡೆ ದಿನಾಂಕ ತಿಳಿದುಕೊಳ್ಳಲು ಮುಂದೆ ಓದಿ......

  ಮೇ 19ಕ್ಕೆ 'ಬಂಗಾರದ ಮನುಷ್ಯ' ಎಂಟ್ರಿ!

  ಮೇ 19ಕ್ಕೆ 'ಬಂಗಾರದ ಮನುಷ್ಯ' ಎಂಟ್ರಿ!

  ಎಲ್ಲ ಅಂದುಕೊಂಡಂತೆ ಆಗಿದ್ದರೇ, ಏಪ್ರಿಲ್ ತಿಂಗಳಲ್ಲೇ ಸಿನಿಮಾ ತೆರೆಕಾಣಬೇಕಿತ್ತು. ಆದ್ರೆ, ಪೋಸ್ಟ್ ಪ್ರೊಡಕ್ಷನ್ ಕೆಲಸದಿಂದ ವಿಳಂಬವಾಗಿತ್ತು. ಇದೀಗ, ಕಂಪ್ಲೀಟ್ ಕೆಲಸ ಮುಗಿಸಿರುವ 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಮೇ 19ರಂದು ಗಾಂಧಿನಗರಕ್ಕೆ ಎಂಟ್ರಿ ಕೊಡ್ತಿದ್ದಾನೆ.[ಟ್ರೈಲರ್ ನಲ್ಲಿ ರಿವಿಲ್ ಆಯ್ತು 'ಬಂಗಾರದ ಮನುಷ್ಯ'ನ ವಿಶೇಷತೆಗಳು]

  ಜಯಣ್ಣ ಕಂಬೈನ್ಸ್ ವಿತರಣೆ!

  ಜಯಣ್ಣ ಕಂಬೈನ್ಸ್ ವಿತರಣೆ!

  ಅಂದ್ಹಾಗೆ, 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಚಿತ್ರವನ್ನ ನಿರ್ಮಾಣ ಮಾಡಿರುವುದು ಜಯಣ್ಣ-ಭೊಗೇಂದ್ರ. ಹೀಗಾಗಿ, ತಾವೇ ರಾಜ್ಯಾದ್ಯಂತ ವಿತರಣೆ ಮಾಡುತ್ತಿದ್ದು, ಈಗಾಗಲೇ ಚಿತ್ರಮಂದಿರಗಳ ವ್ಯವಹಾರದಲ್ಲಿ ತೊಡಗಿಕೊಂಡಿದ್ದಾರಂತೆ.[ಶಿವಣ್ಣನ 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಟೀಸರ್ ಔಟ್]

  ಎನ್ ಆರ್ ಐ ಪಾತ್ರದಲ್ಲಿ ಶಿವಣ್ಣ!

  ಎನ್ ಆರ್ ಐ ಪಾತ್ರದಲ್ಲಿ ಶಿವಣ್ಣ!

  'ಬಂಗಾರ s/o ಬಂಗಾರದ ಮನುಷ್ಯ' ಚಿತ್ರದಲ್ಲಿ ಶಿವಣ್ಣ ಎನ್ ಆರ್ ಐ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜನಸಾಮಾನ್ಯರ ಪರವಾಗಿ ಸಿಡಿದೇಳುವ ಕಾಮನ್ ಮ್ಯಾನ್ ಆಗಿ ಮಿಂಚಲಿದ್ದಾರೆ.['ಬಂಗಾರದ ಮನುಷ್ಯ'ನ ಜೋಡಿಯಾಗೋ ಚೆಂದುಳ್ಳಿ ಚೆಲುವೆ ಈಕೆ]

  ವಿದ್ಯಾ ಪ್ರದೀಪ್ ನಾಯಕಿ

  ವಿದ್ಯಾ ಪ್ರದೀಪ್ ನಾಯಕಿ

  ಚಿತ್ರದಲ್ಲಿ 'ಬಂಗಾರ s/o ಬಂಗಾರದ ಮನುಷ್ಯ'ನಿಗೆ ಜೋಡಿಯಾಗಿ ತಮಿಳು ನಟಿ ವಿದ್ಯಾ ಪ್ರದೀಪ್ ಕಾಣಿಸಿಕೊಂಡಿದ್ದಾರೆ. ಸುಮಾರು 10 ಕ್ಕೂ ಹೆಚ್ಚು ತಮಿಳು ವಿದ್ಯಾ ಪ್ರದೀಪ್ ಚಿತ್ರಗಳಲ್ಲಿ ನಟಿಸಿದ್ದು, ಮೊದಲ ಬಾರಿಗೆ ಸ್ಯಾಂಡಲ್ ವುಡ್ ನಲ್ಲಿ ಬಣ್ಣ ಹಚ್ಚಿದ್ದಾರೆ.['ಬಂಗಾರದ ಮನುಷ್ಯ'ನ ಅವತಾರದಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣ]

  ಬಹುದೊಡ್ಡ ತಾರಾಬಳಗ

  ಬಹುದೊಡ್ಡ ತಾರಾಬಳಗ

  ಚಿತ್ರದಲ್ಲಿ ಶಿವಣ್ಣ ನಿಗೆ ವಿದ್ಯಾ ಪ್ರದೀಪ್ ಕಾಂಬಿನೇಷನ್ ಆಗಿದ್ದಾರೆ. ಉಳಿದಂತೆ ದೊಡ್ಡ ತಾರಾಬಳಗವೇ ಇದ್ದು ವಿಶಾಲ್ ಹೆಗಡೆ, ಶ್ರೀನಾಥ್, ಶ್ರೀನಿವಾಸ ಮೂರ್ತಿ, ಶಿವರಾಂ, ಹೊನ್ನವಳ್ಳಿ ಕೃಷ್ಣ ಮುಂತಾದವರು ಅಭಿನಯಿಸಿದ್ದಾರೆ.

  ಯೋಗಿ ಜಿ ರಾಜ್ ಆಕ್ಷನ್ ಕಟ್

  ಯೋಗಿ ಜಿ ರಾಜ್ ಆಕ್ಷನ್ ಕಟ್

  ಈ ಹಿಂದೆ ಗಣೇಶ್ ಅಭಿನಯದ 'ಖುಷಿ ಖುಷಿಯಾಗಿ' ಚಿತ್ರ ನಿರ್ದೇಶನ ಮಾಡಿದ್ದ ಯೋಗಿ ಜಿ ರಾಜ್ 'ಬಂಗಾರ s/o ಬಂಗಾರದ ಮನುಷ್ಯ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ವಿ.ಹರಿಕೃಷ್ಣ ಅವರ ಸಂಗೀತವಿದ್ದು, ಜೈ ಆನಂದ್ ಛಾಯಾಗ್ರಹಣ, ಡಾ.ಕೆ ರವಿವರ್ಮ ಮತ್ತು ಮಾಸ್ ಮಾದ ಸ್ಟಂಟ್ಸ್ ಚಿತ್ರಕ್ಕಿದೆ.

  English summary
  Shivarajkumar's new film Bangara S/o Bangarada Manushya is likely to release on May 19.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X