»   » ಶಿವಣ್ಣ ಫಿಟ್ ಅಂಡ್ ಫೈನ್; 'ಶ್ರೀಕಂಠ' ಶುಕ್ರವಾರ ಶುರು

ಶಿವಣ್ಣ ಫಿಟ್ ಅಂಡ್ ಫೈನ್; 'ಶ್ರೀಕಂಠ' ಶುಕ್ರವಾರ ಶುರು

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಈಗ ಫಿಟ್ ಅಂಡ್ ಫೈನ್ ಆಗಿದ್ದಾರೆ. ಶಿವಣ್ಣನ ಆರೋಗ್ಯದಲ್ಲಿ ಇದೀಗ ಚೇತರಿಕೆ ಕಂಡು ಬಂದಿದೆ. ಮತ್ತೆ ಎಂದಿನಂತೆ ಓಡಾಟ ಶುರುಮಾಡಿರುವ ಶಿವಣ್ಣ ಮುಂದಿನ ವಾರದಿಂದ ಶೂಟಿಂಗ್ ಗೆ ಹಾಜರಾಗಲಿದ್ದಾರೆ.

ಅಷ್ಟೇ ಅಲ್ಲ, ಇದೇ ಶುಕ್ರವಾರ ಅವರ ಹೊಸ ಸಿನಿಮಾದ ಮುಹೂರ್ತ ನೆರವೇರಲಿದೆ. ಆ ಚಿತ್ರವೇ 'ಶ್ರೀಕಂಠ'. ಕಂಠೀರವ ಸ್ಟುಡಿಯೋದಲ್ಲಿ ಶುಕ್ರವಾರ ಬೆಳಗ್ಗೆ 10 ಗಂಟೆಗೆ 'ಶ್ರೀಕಂಠ' ಚಿತ್ರಕ್ಕೆ ಚಾಲನೆ ಸಿಗಲಿದೆ.['ಸಿ.ಎಂ' ಆಗಲಿದ್ದಾರೆ ಡಾ.ಶಿವರಾಜ್ ಕುಮಾರ್!]

Shivarajkumar's 'Srikanta' to go on floors this friday

'ಶ್ರಾವಣಿ-ಸುಬ್ರಮಣ್ಯ' ಚಿತ್ರದ ನಂತರ ನಿರ್ದೇಶಕ ಮಂಜು ಸ್ವರಾಜ್ 'ಶ್ರೀಕಂಠ' ಚಿತ್ರವನ್ನ ನಿರ್ದೇಶಿಸುತ್ತಿದ್ದಾರೆ. ಶಿವಣ್ಣನಿಗೆ ವಿಭಿನ್ನ ಪಾತ್ರ ನೀಡಬೇಕು ಅನ್ನುವ ಸಲುವಾಗಿ ಕಳೆದ ವರ್ಷದಿಂದ ಚಿತ್ರಕಥೆ ರೆಡಿ ಮಾಡುತ್ತಿದ್ದಾರೆ.

'ಶ್ರೀಕಂಠ' ಚಿತ್ರದಲ್ಲಿ ಶಿವಣ್ಣ C.M ಆಗಿ ಕಾಣಿಸಿಕೊಳ್ತಿದ್ದಾರೆ. ಸಿ.ಎಂ ಅಂದ್ರೆ ಮುಖ್ಯಮಂತ್ರಿ ಅಲ್ಲ. (C)ಕಾಮನ್ (M)ಮ್ಯಾನ್ ಆಗಿ ಶಿವರಾಜ್ ಕುಮಾರ್ ಮಿಂಚಲಿದ್ದಾರೆ. ಹೀಗಾಗಿ ಈ ಚಿತ್ರದಲ್ಲಿ ಶಿವಣ್ಣ ಲಾಂಗ್ ಹಿಡಿಯುವುದಿಲ್ಲ.

ಸದ್ಯಕ್ಕೆ ಶಿವರಾಜ್ ಕುಮಾರ್ ಒಬ್ಬರನ್ನ ಬಿಟ್ಟರೆ 'ಶ್ರೀಕಂಠ' ಚಿತ್ರದ ಬಾಕಿ ತಾರಾಬಳಗ ಫೈನಲ್ ಆಗಿಲ್ಲ. ಶುಕ್ರವಾರ ಮುಹೂರ್ತ ನಡೆಯಲಿದ್ದು, ಕೆಲವೇ ದಿನಗಳಲ್ಲಿ ಶೂಟಿಂಗ್ ಶುರುವಾಗಲಿದೆ.

    English summary
    Kannada Actor Shivarajkumar starrer 'Srikanta' is all set to go on floors this friday (October 16th). The movie is directed by Manju Swaraj.
    Please Wait while comments are loading...

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada