Don't Miss!
- News
ಜನವರಿ 28ರಂದು 300 ರೈಲುಗಳನ್ನು ರದ್ದುಗೊಳಿಸಿದ ಭಾರತೀಯ ರೈಲ್ವೆ- ಸಂಪೂರ್ಣ ಪಟ್ಟಿ ಇಲ್ಲಿದೆ
- Sports
SA Vs Eng 1st ODI: ಚೇಸಿಂಗ್ನಲ್ಲಿ ಎಡವಿದ ಇಂಗ್ಲೆಂಡ್ : ದಕ್ಷಿಣ ಆಫ್ರಿಕಾಗೆ 27 ರನ್ಗಳ ಜಯ
- Automobiles
ವೈರಲ್: ಬೆಂಗಳೂರಿನಲ್ಲಿ ಕಾಣಿಸಿಕೊಂಡಿತು ಹೊಚ್ಚ ಹೊಸ ವಾಹನ... ಇದರ ಬಗ್ಗೆ ಗೊತ್ತಾ?
- Lifestyle
2023ರಲ್ಲಿ ರಾಜಯೋಗದಿಂದಾಗಿ ಈ 4 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನವಾಗಲಿದೆ
- Finance
7th Pay Commission: ನೌಕರರಿಗೆ ಸಿಹಿ ಸುದ್ದಿ: ಬಾಕಿ DA ಹಣ ನೀಡಲು ಕೇಂದ್ರ ಸರ್ಕಾರ ನಿರ್ಧಾರ, ಹೇಗೆ?
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Vedha Trailer: 'ವೇದ' ಹೆದರೋದು ಇಲ್ಲ.. ಕ್ಷಮಿಸೋದು ಇಲ್ಲ: ಶಿವಣ್ಣ ಈಸ್ ಬ್ಯಾಕ್
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಟನೆಯ 'ವೇದ' ಸಿನಿಮಾ ಟ್ರೈಲರ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ಪ್ರತಿಫ್ರೇಮ್ ಗೂಸ್‌ಬಂಪ್ಸ್ ಎನ್ನುವಂತಿದೆ. ಎ. ಹರ್ಷ ಟೇಕಿಂಗ್, ಶಿವಣ್ಣ ಆಕ್ಟಿಂಗ್ ಫಸ್ಟ್ ಕ್ಲಾಸ್. ಟ್ರೈಲರ್ ನೋಡಿದ ಅಭಿಮಾನಿಗಳಂತೂ ಥ್ರಿಲ್ಲಾಗಿದ್ದಾರೆ.
ಭರ್ಜರಿ ಬಿಜಿಎಂ ಜೊತೆಗೆ ಅದ್ಭುತ ದೃಶ್ಯಗಳ ಚಿತ್ತಾರ ಬಿಡಿಸಿ ನಿರ್ದೇಶನಕ ಹರ್ಷ ಕುತೂಹಲ ಕೆರಳಿಸಿದ್ದಾರೆ. ಅದಿತಿ ಸಾಗರ್, ಶ್ವೇತಾ ಚಂಗಪ್ಪ, ವೀಣಾ ಪೊನ್ನಣ್ಣ, ಗಾನವಿ ಲಕ್ಷ್ಮಣ್ ಹೀಗೆ ಪ್ರತಿಯೊಬ್ಬರು ಜಬರ್ದಸ್ತ್ ಪರ್ಫಾರ್ಮನ್ಸ್ ನೀಡಿರೋದು ಗೊತ್ತಾಗುತ್ತಿದೆ. ಅದ್ಭುತ ಸೆಟ್‌ಗಳನ್ನು ನಿರ್ಮಿಸಿದ ಕಣ್ಣಿಗೆ ಕಟ್ಟಿದಂತೆ ಪ್ರತಿ ಸನ್ನಿವೇಶವನ್ನು ಕಟ್ಟಿಕೊಟ್ಟಿರೋದು ಗೊತ್ತಾಗುತ್ತಿದೆ. ಸಿನಿಮಾಟೋಗ್ರಫಿ, ಬಿಜಿಎಂ, ಶಿವಣ್ಣನ ಕಣ್ಣುಗಳಲ್ಲಿರುವ ಬೆಂಕಿ ಮೊದಲ ನೋಡದಲ್ಲೇ ವಾಹ್ ಎನಿಸುತ್ತಿದೆ.
Vedha
Teaser:
ಕಲ್ಲು,
ಮಚ್ಚು,
ಪಂಜು,
'ವೇದ'ನ
ಅಸ್ತ್ರ:
ಶಿವಣ್ಣ
125ನೇ
ಚಿತ್ರದ
ಟೀಸರ್
ಚಿಂದಿ!
ಪ್ರತಿ ಫ್ರೇಮ್‌ನಲ್ಲೂ ಚಿತ್ರತಂಡದ ಶ್ರಮ ಎದ್ದು ಕಾಣುತ್ತಿದೆ. ಟ್ರೈಲರ್ ಸಿನಿಮಾ ಬಗ್ಗೆ ಭರವಸೆ ಮೂಡಿಸಿದೆ. 2 ನಿಮಿಷ ನಿಮ್ಮನ್ನು 'ವೇದ' ಪ್ರಪಂಚಕ್ಕೆ ಕೊಂಡೊಯ್ಯುತ್ತದೆ. ದುಷ್ಟರನ್ನು ಕೊಲ್ಲುವ ದೃಶ್ಯಗಳು ಮೈ ಜುಮ್ ಅನ್ನಿಸುತ್ತದೆ. ಟ್ರೈಲರ್ ನೋಡಿ ಅಭಿಮಾನಿಗಳು ಫಸ್ಟ್ ಡೇ ಫಸ್ಟ್ ಶೋ ನೋಡೋದು ಫಿಕ್ಸ್ ಎನ್ನುತ್ತಿದ್ದಾರೆ.

'ವೇದ' ಪ್ರಪಂಚ ಅನಾವರಣ
ಸಿನಿಮಾ ರಿಲೀಸ್ ಡೇಟ್ ಹತ್ತಿರವಾಗ್ತಿದ್ದಂತೆ ಟ್ರೈಲರ್ ರಿಲೀಸ್ ಮಾಡಿ ಹೈಪ್ ಕ್ರಿಯೇಟ್ ಮಾಡ್ತಿದೆ ಚಿತ್ರತಂಡ. ನಿರ್ದೇಶಕ ಪಾತ್ರಗಳನ್ನು ಡಿಸೈನ್ ಮಾಡಿರುವ ರೀತಿ, ಪ್ರತಿಯೊಬ್ಬರ ಲುಕ್ಕು, ಪರ್ಫಾರ್ಮೆನ್ಸ್ ಸೂಪರ್ ಎನ್ನುವಂತಿದೆ. ಒಂದು ಊರು. ಆ ಊರಿನ ಆಚರಣೆಗಳು, ಜನರ ನಂಬಿಕೆಗಳು. ಇದ್ದಕ್ಕಿದಂತೆ ಅಲ್ಲಿ ದುಷ್ಟರ ಕಾಟ. ಅವರನ್ನು ಎದುರಿಸಿ ನಿಲ್ಲುವ ನಾಯಕ ಮತ್ತು ಆತನ ಸಂಗಡಿಗರು. ಖಳರ ವಿರುದ್ಧ 'ವೇದ'ನ ದಂಡಯಾತ್ರೆ. ಅಬ್ಬಬ್ಬಾ ಟ್ರೈಲರ್ ನಿಜಕ್ಕೂ ಅದ್ಭುತ ಅನುಭವ ನೀಡುವಂತಿದೆ.

ಪವರ್‌ಫುಲ್ ಮಹಿಳಾ ಪಾತ್ರಗಳು
ಶಿವಣ್ಣ ಎರಡು ಶೇಡ್‌ಗಳಿರುವ ಪಾತ್ರದಲ್ಲಿ ಮಿಂಚಿದ್ದಾರೆ. ಒಂದರಲ್ಲಿ ಕೊಂಚ ಯಂಗ್ ಆಗಿ ಮತ್ತೊಂದರಲ್ಲಿ ಬಿಳಿ ಗಡ್ಡ, ಮೀಸೆಯಲ್ಲಿ ವಯಸ್ಸಾದ ವ್ಯಕ್ತಿಯಾಗಿ ದರ್ಶನ ಕೊಟ್ಟಿದ್ದಾರೆ. ಇನ್ನು ಶಿವಣ್ಣನನ್ನು ಮೀರಿಸುವಂತೆ ಅದಿತಿ ಅರುಣ್ ಸಾಗರ್, ಶ್ವೇತಾ ಚೆಂಗಪ್ಪ ಅಬ್ಬರಿಸಿದ್ದಾರೆ. ಮಹಿಳಾ ಪಾತ್ರಗಳನ್ನು ಬಹಳ ಪವರ್‌ಫುಲ್ಲಾಗಿ ಕಟ್ಟಿಕೊಟ್ಟಿರುವುದು ಗೊತ್ತಾಗುತ್ತಿದೆ. ನಿಜಕ್ಕೂ ಒಬ್ಬರಿಗಿಂತ ಒಬ್ಬರು ಭಯಹುಟ್ಟಿಸುವಂತೆ ಅಬ್ಬರಿಸಿದ್ದಾರೆ. ಇದು ಪಕ್ಕಾ ಪೈಸಾ ವಸೂಲ್ ಆಕ್ಷನ್ ಪ್ಯಾಕ್ಡ್ ಸಿನಿಮಾ ಎನ್ನುವುದು ಗೊತ್ತಾಗುತ್ತಿದೆ.

ಟೆಕ್ನಿಕಲಿ ಸ್ಟ್ರಾಂಗ್ ಆಗಿದೆ 'ವೇದ'
ಫ್ಯಾಂಟಸಿ, ಪೌರಾಣಿಕ ಅಂಶಗಳನ್ನು ಬಿಟ್ಟು 60, 70ರ ದಶಕದಲ್ಲಿ ಒಂದು ಊರಿನಲ್ಲಿ ನಡೆದ ಕಥೆಯನ್ನು ಚಿತ್ರದಲ್ಲಿ ಕಟ್ಟಿಕೊಡುತ್ತಿರುವುದಾಗಿ ಚಿತ್ರತಂಡ ಹೇಳಿದೆ. 'ವೇದ'ನ ಜೀವನದಲ್ಲಿ ನಡೆಯುವ ಘಟನೆಗಳನ್ನು ಎಳೆ ಎಳೆಯಾಗಿ ಬಿಚ್ಚಿಡಲಾಗಿದೆ. ಅದಕ್ಕೆ ಬೇಕಾದ ಮೂಡ್ ಕ್ರಿಯೇಟ್ ಮಾಡುವಲ್ಲಿ ಟೀಂ ಸಕ್ಸಸ್ ಆಗಿರುವಂತೆ ಕಾಣುತ್ತಿದೆ. ಸ್ವಾಮಿ ಗೌಡ ಸಿನಿಮಾಟೋಗ್ರಫಿ ಹಾಗೂ ಅರ್ಜುನ್ ಮ್ಯೂಸಿಕ್ ಅದಕ್ಕೆ ಸಾಥ್ ನೀಡಿದೆ.

ಡಿ. 23ಕ್ಕೆ 'ವೇದ' ಅಬ್ಬರ
ಮೇಲ್ನೋಟಕ್ಕೆ ಇದೊಂದು ರಿವೇಂಜ್ ಡ್ರಾಮಾ ಎನ್ನುವುದು ಗೊತ್ತಾಗುತ್ತಿದೆ. ಆದರೆ ಯಾಕೆ ರಿವೇಂಜ್? ಯಾರ ಮೇಲೆ ರಿವೇಂಜ್? ಎನ್ನುವ ಪ್ರಶ್ನೆಗೆ ಡಿಸೆಂಬರ್ 23ಕ್ಕೆ ಉತ್ತರ ಸಿಗಲಿದೆ. ಕೆಲವರು ಟ್ರೈಲರ್ ನೋಡಿ ಇದು ಪ್ಯಾನ್ ಇಂಡಿಯಾ ಆಗುವಂತಹ ಸಿನಿಮಾ. ಬೇರೆ ಭಾಷೆಗಳಿಗೂ ಡಬ್ ಮಾಡಿ ಎನ್ನುತ್ತಿದ್ದಾರೆ. ಕಥೆಯ ಬಗ್ಗೆ ಸುಳಿವು ಕೊಡದೇ ಬರೀ ಭರ್ಜರಿ ದೃಶ್ಯಗಳನ್ನು ಟ್ರೈಲರ್‌ನಲ್ಲಿ ಕಟ್ ಮಾಡಿದ್ದಾರೆ. ಜೀ ಸ್ಟುಡಿಯೋಸ್ ಜೊತೆ ಸೇರಿ ಗೀತಾ ಶಿವರಾಜ್‌ಕುಮಾರ್ 'ವೇದ' ಸಿನಿಮಾ ನಿರ್ಮಾಣ ಮಾಡಿದ್ದಾರೆ.