For Quick Alerts
  ALLOW NOTIFICATIONS  
  For Daily Alerts

  ಸೆಂಚುರಿ ಸ್ಟಾರ್ ಶಿವಣ್ಣನ ಅನಾರೋಗ್ಯಕ್ಕೆ ನಿಜವಾದ ಕಾರಣವೇನು?

  By Harshitha
  |

  'ಆನಂದ್' ಚಿತ್ರದಲ್ಲಿ ಟುವ್ವಿ ಟುವ್ವಿ ಅಂತ ಹಾಡ್ತಾ ಕನ್ನಡ ಸಿನಿಲೋಕಕ್ಕೆ ಎಂಟ್ರಿ ಕೊಟ್ಟ ಅಣ್ಣಾವ್ರ ಮಗ ಶಿವಣ್ಣ ಅವತ್ತು ಹೇಗೆ ಇದ್ರೋ, ಇವತ್ತಿಗೂ ಹಾಗೇ ಇದ್ದಾರೆ. ಮುಖದಲ್ಲಿ ಒಂದಿಷ್ಟು ಗಾಂಭೀರ್ಯ ಬಂದಿದೆ ಅನ್ನೋದು ಬಿಟ್ರೆ, ಇವತ್ತಿಗೂ ಶಿವಣ್ಣ 25ರ ಯುವಕನೇ. ಅದೇ ರೂಪ, ಅದೇ ಮೈಕಟ್ಟು.

  ಶಿವಣ್ಣನ ಜೊತೆಗೆ ಎಂಟ್ರಿ ಕೊಟ್ಟ ಅದೆಷ್ಟೋ ನಾಯಕ ನಟರನ್ನ ಇವತ್ತು ಗುರುತಿಸುವುದಕ್ಕಾಗೋಲ್ಲ. ಆದ್ರೆ, ಶಿವಣ್ಣ ಮಾತ್ರ ಈ ವಿಚಾರದಲ್ಲಿ ಸಿಕ್ಕಾಪಟ್ಟೆ ಕಟ್ಟುನಿಟ್ಟು. ಕೊನೆ ಸಿನಿಮಾವರೆಗೂ ಅದೇ ಮೈಕಟ್ಟು ಕಾಪಾಡಿಕೊಂಡು ಬಂದಿದ್ದ ಅಣ್ಣಾವ್ರೇ ಈ ಅಣ್ಣಾವ್ರ ಮಗನಿಗೆ ಸ್ಪೂರ್ತಿ. ಅಷ್ಟರಮಟ್ಟಿಗೆ ಎನರ್ಜಿ ಅನ್ನುವ ಪದಕ್ಕೆ ಶಿವರಾಜ್ ಕುಮಾರ್ ಅನ್ವರ್ಥ.['ನಾನು ಚೆನ್ನಾಗಿದ್ದೇನೆ...ನೀವೆಲ್ಲಾ ಮನೆಗೆ ಹೋಗಿ' ಎಂದ ಶಿವು]

  54 ವರ್ಷ ವಯಸ್ಸಿನ ನಟ ಡಾ.ಶಿವರಾಜ್ ಕುಮಾರ್ ಇವತ್ತಿನವರೆಗೂ ಹುಷಾರಿಲ್ಲ ಅಂತ ಹಾಸಿಗೆ ಹಿಡಿದ ಉದಾಹರಣೆ ಇಲ್ಲ. ಅಂತದ್ರಲ್ಲಿ, ಅವರಿಗೆ ನಿನ್ನೆ ಏಕಾಏಕಿ ಲಘು ಹೃದಯಾಘಾತವಾಗಿದೆ. ಶಿವಣ್ಣನ ಹಠಾತ್ ಅನಾರೋಗ್ಯಕ್ಕೆ ಕಾರಣವೇನು? ಮುಂದೆ ಓದಿ.....

  ಅರ್ಧ ಸೆಂಚುರಿ ಬಾರಿಸಿದರೂ ಅದೇ ಹುರುಪು

  ಅರ್ಧ ಸೆಂಚುರಿ ಬಾರಿಸಿದರೂ ಅದೇ ಹುರುಪು

  ರೀಲ್ ನಲ್ಲಿ ಸೆಂಚುರಿ ಬಾರಿಸಿರುವ ಶಿವಣ್ಣ, ರಿಯಲ್ ಲೈಫ್ ನಲ್ಲಿ ಹಾಫ್ ಸೆಂಚುರಿ ಬಾರಿಸಿದ್ದಾಗಿದೆ. ಆದರೂ, ಶಿವಣ್ಣನ ಚಾರ್ಮ್ ಮಾತ್ರ ಕಳೆಗುಂದಿಲ್ಲ. ಇದಕ್ಕೆ ಕಾರಣ ಅವರು ಪ್ರತಿನಿತ್ಯ ಅನುಸರಿಸುವ ಡಯೆಟ್ ಮತ್ತು ಸ್ಟ್ರಿಕ್ಟ್ ವರ್ಕೌಟ್.

  ಪ್ರತಿದಿನ ಜಿಮ್ ನಲ್ಲಿ ಬೆವರಿಳಿಸುವ ಶಿವಣ್ಣ

  ಪ್ರತಿದಿನ ಜಿಮ್ ನಲ್ಲಿ ಬೆವರಿಳಿಸುವ ಶಿವಣ್ಣ

  ಶಿವಣ್ಣ ಪ್ರತಿದಿನ ಜಿಮ್ ನಲ್ಲಿ ಬೆವರಿಳಿಸುತ್ತಾರೆ. ಫಿಟ್ನೆಸ್ ಮೇನ್ಟೇನ್ ಮಾಡುತ್ತಾರೆ. ಅಷ್ಟೇ ಆರೋಗ್ಯವಾಗಿದ್ದಾರೆ. [ಹ್ಯಾಟ್ರಿಕ್ ಹೀರೋ ಹಾರ್ಟ್ ಅಟ್ಯಾಕ್ ಸುದ್ದಿ ಕೇಳಿ ಅಂಬರೀಶ್ ಶಾಕ್!]

  51ನೇ ವಯಸ್ಸಿನಲ್ಲಿ ಸಿಕ್ಸ್ ಪ್ಯಾಕ್

  51ನೇ ವಯಸ್ಸಿನಲ್ಲಿ ಸಿಕ್ಸ್ ಪ್ಯಾಕ್

  51ನೇ ವಯಸ್ಸಿನಲ್ಲೂ 'ಭಜರಂಗಿ' ಚಿತ್ರಕ್ಕಾಗಿ ಶಿವಣ್ಣ ಸಿಕ್ಸ್ ಪ್ಯಾಕ್ ಮಾಡಿ ಅಚ್ಚರಿ ಮೂಡಿಸಿದರು.

  ಹೀಗಿದ್ದರೂ, ಅನಾರೋಗ್ಯಕ್ಕೆ ಕಾರಣವೇನು?

  ಹೀಗಿದ್ದರೂ, ಅನಾರೋಗ್ಯಕ್ಕೆ ಕಾರಣವೇನು?

  ಹೃದಯ ಸಂಬಂಧಿ ಕಾಯಿಲೆ ಹೆರಿಡಿಟಿ. ಡಾ.ರಾಜ್ ಕುಮಾರ್ ರವರು ಕೂಡ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲಿದ್ದರು. ಸಹೋದರ ರಾಘವೇಂದ್ರ ರಾಜ್ ಕುಮಾರ್ ಗೂ ಹೃದಯಾಘಾತವಾಗಿತ್ತು. ಹೀಗಾಗಿ ಹಾರ್ಟ್ ಪ್ರಾಬ್ಲಂ ಹೆರಿಡಿಟಿ ಅನ್ನುತ್ತಾರೆ ವೈದ್ಯರು. [ಶಿವಣ್ಣನಿಗೆ ಹಾರ್ಟ್ ಅಟ್ಯಾಕ್.! ಮಲ್ಯ ವೈದ್ಯರು ಹೇಳಿದ್ದೇನು?]

  ಕೊಂಚ ರೆಸ್ಟ್ ಇರ್ಲಿಲ್ಲ.!

  ಕೊಂಚ ರೆಸ್ಟ್ ಇರ್ಲಿಲ್ಲ.!

  ಕಳೆದ ಕೆಲ ತಿಂಗಳಿನಿಂದ ಶಿವಣ್ಣನಿಗೆ ರೆಸ್ಟ್ ಸಿಕ್ಕಿರಲಿಲ್ಲ. ಮಗಳ ಮದುವೆ ಓಡಾಟದಲ್ಲಿ ಶಿವಣ್ಣ ಬಿಜಿಯಿದ್ದರು. ಚಿತ್ರರಂಗದ ಗಣ್ಯರನ್ನ ಆಹ್ವಾನಿಸುವುದಕ್ಕೆ ಚೆನ್ನೈ, ಹೈದರಾಬಾದ್, ಮುಂಬೈ ಅಂತ ಹೆಚ್ಚು ಪ್ರಯಾಣ ಮಾಡಿದ್ದರು. [ಶಿವಣ್ಣನ ಮಗಳ ಮದುವೆ ಚಿತ್ರಗಳು]

  ಮದುವೆ ಬಿಜಿಯಲ್ಲಿ ವರ್ಕೌಟ್ ಮಾಡಿರಲಿಲ್ಲ.!

  ಮದುವೆ ಬಿಜಿಯಲ್ಲಿ ವರ್ಕೌಟ್ ಮಾಡಿರಲಿಲ್ಲ.!

  ಮಗಳ ಮದುವೆ ಬಿಜಿಯಲ್ಲಿ ಓಡಾಡುತ್ತಿದ್ದ ಶಿವಣ್ಣ ವರ್ಕೌಟ್ ಬಿಟ್ಟಿದ್ದರು. ತಿಂಗಳುಗಳ ಗ್ಯಾಪ್ ನಂತರ ನಿನ್ನೆ ಮತ್ತೆ ವರ್ಕೌಟ್ ಶುರುಮಾಡಿದ್ದಾರೆ. ಇದರಿಂದ ಅವರ ಬಲ ಭುಜದಲ್ಲಿ ನೋವು ಕಾಣಿಸಿಕೊಂಡಿದೆ. [ಶಿವಣ್ಣ ಅಸ್ವಸ್ಥ : ರಾಘಣ್ಣ, ಪುನೀತ್, ಮಧು ಬಂಗಾರಪ್ಪ ಏನಂತಾರೆ?]

  ಶೂಟಿಂಗ್ ನಲ್ಲೂ ಸಖತ್ ಬಿಜಿ

  ಶೂಟಿಂಗ್ ನಲ್ಲೂ ಸಖತ್ ಬಿಜಿ

  ಮಗಳ ಮದುವೆ ಗ್ಯಾಪ್ ನಲ್ಲೂ ಶಿವಣ್ಣ 'ಕಿಲ್ಲಿಂಗ್ ವೀರಪ್ಪನ್' ಚಿತ್ರದ ಶೂಟಿಂಗ್ ನಲ್ಲಿ ಭಾಗವಹಿಸಿದ್ದರು. ಮದುವೆ ಮುಗಿತಿದ್ದ ಹಾಗೆ, 'ಸಂತೆಯಲ್ಲಿ ನಿಂತ ಕಬೀರ' ಚಿತ್ರೀಕರಣದಲ್ಲಿ ಪಾಲ್ಗೊಂಡರು. 'ಶಿವಲಿಂಗು' ಮತ್ತು 'ಕಿಲ್ಲಿಂಗ್ ವೀರಪ್ಪನ್' ಡಬ್ಬಿಂಗ್ ಮಾಡಿಕೊಟ್ಟರು. ಬಿಡುವಿಲ್ಲದ ಅವರ ಬಿಜಿ ಶೆಡ್ಯೂಲ್ ಅವರ ಆರೋಗ್ಯದ ಮೇಲೆ ಪರಿಣಾಮ ಬೀರಿದೆ ಅನ್ನುತ್ತಾರೆ ವೈದ್ಯರು.

  'ಕಿಲ್ಲಿಂಗ್ ವೀರಪ್ಪನ್' ಸೆಟ್ ನಲ್ಲಿ ಇನ್ಫೆಕ್ಷನ್

  'ಕಿಲ್ಲಿಂಗ್ ವೀರಪ್ಪನ್' ಸೆಟ್ ನಲ್ಲಿ ಇನ್ಫೆಕ್ಷನ್

  ಚಿಕ್ಕಮಗಳೂರಿನಲ್ಲಿ 'ಕಿಲ್ಲಿಂಗ್ ವೀರಪ್ಪನ್' ಶೂಟಿಂಗ್ ನಲ್ಲಿ ಭಾಗವಹಿಸಿದ್ದ ಶಿವಣ್ಣಗೆ ಅಲ್ಲಿ ಇನ್ಫೆಕ್ಷನ್ ಆಗಿತ್ತು. ಆದರೂ, ಅವರು ಆರಾಮಾಗಿದ್ದ ಕಾರಣ ಇನ್ಫೆಕ್ಷನ್ ನ ಗಂಭೀರವಾಗಿ ಪರಿಗಣಿಸಲಿಲ್ಲ.

  ಗ್ಯಾಪ್ ನಂತರ ವರ್ಕೌಟ್ ಮಾಡಿದ್ದು ಮುಳುವಾಯ್ತು.!

  ಗ್ಯಾಪ್ ನಂತರ ವರ್ಕೌಟ್ ಮಾಡಿದ್ದು ಮುಳುವಾಯ್ತು.!

  ತಿಂಗಳುಗಳ ನಂತರ ನಿನ್ನೆ ಹೆವಿ ವರ್ಕೌಟ್ ಮಾಡಿದ ಪರಿಣಾಮ ಶಿವಣ್ಣ ಅಸ್ವಸ್ಥಗೊಂಡಿದ್ದಾರೆ.

  ಶಿವಣ್ಣನ ಹೃದಯ ಆರೋಗ್ಯವಾಗಿದೆ.!

  ಶಿವಣ್ಣನ ಹೃದಯ ಆರೋಗ್ಯವಾಗಿದೆ.!

  ''ಅವರದ್ದು ಅಥ್ಲೀಟ್ ಬಾಡಿ. ಆರೋಗ್ಯದ ಬಗ್ಗೆ ಶಿವಣ್ಣ ಇಷ್ಟು ದಿನ ವಹಿಸಿದ್ದ ಕಾಳಜಿಯಿಂದ ಇಂದು ಅಪಾಯದಿಂದ ಪಾರಾಗಿದ್ದಾರೆ. ಅವರ ಹೃದಯ ಆರೋಗ್ಯವಾಗಿದೆ'' ಅಂತಾರೆ ಮಲ್ಯ ಆಸ್ಪತ್ರೆಯ ವೈದ್ಯರು.

  ನಾಳೆ ಡಿಸ್ಚಾರ್ಜ್

  ನಾಳೆ ಡಿಸ್ಚಾರ್ಜ್

  ಇದೀಗ ಆರೋಗ್ಯದಲ್ಲಿ ಚೇತರಿಸಿಕೊಂಡಿರುವ ಶಿವಣ್ಣ ನಾಳೆ ಬೆಳಗ್ಗೆ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ.

  ಮುಂದಿನ ವಾರ ಶೂಟಿಂಗ್?

  ಮುಂದಿನ ವಾರ ಶೂಟಿಂಗ್?

  ಡಿಸ್ಚಾರ್ಚ್ ಆದ ಬಳಿಕ ಒಂದು ವಾರ ರೆಸ್ಟ್ ತೆಗೆದುಕೊಂಡು, ಮುಂದಿನ ವಾರದಿಂದ ಶೂಟಿಂಗ್ ಗೆ ಹೋಗುವು ಮನಸ್ಸು ಮಾಡಿದ್ದಾರೆ ಶಿವಣ್ಣ.

  English summary
  Kannada Actor Shivarajkumar has suffered a mild heart attack and has been admitted to Mallya Hospital, Bengaluru yesterday (October 6th). But what is the reason for Shivarajkumar's illness? Read the article to know.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X