»   » ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೊಸ ಚಿತ್ರ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೊಸ ಚಿತ್ರ

Posted By:
Subscribe to Filmibeat Kannada
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೊಸ ಚಿತ್ರವೊಂದಕ್ಕೆ ಸಹಿ ಹಾಕಿದ್ದಾರೆ. ಈಗಾಗಲೆ ಅವರು ವೈವಿಧ್ಯಮಯ ಪಾತ್ರಗಳನ್ನು ಪೋಷಿಸುತ್ತಿದ್ದು ಈ ಬಾರಿ ಕ್ರೀಡಾಪಟುವಾಗಿ ಕಾಣಿಸಲಿದ್ದಾರೆ. ಅವರು ಯಾವ ಕ್ರೀಡಾಕಾರನಾಗಿ ಕಾಣಿಸಲಿದ್ದಾರೆ ಎಂಬುದು ಸದ್ಯಕ್ಕೆ ಸಸ್ಪೆನ್ಸ್.

ಶಿವಣ್ಣ ಈ ಬಾರಿ ರಾಜೇಂದ್ರ ಬಾಬು ಜೊತೆ ಕೈಜೋಡಿಸುತ್ತಿದ್ದಾರೆ. ಇನ್ನೂ ಹೆಸರಿಡ ಈ ಚಿತ್ರಕ್ಕೆ ಪಿ.ಎಚ್.ಕೆ. ದಾಸ್ ಛಾಯಾಗ್ರಹಣ ಹಾಗೂ ಜೆಸ್ಸಿ ಗಿಫ್ಟ್ ಸಂಗೀತ ಸಂಯೋಜಿಸುವ ಸಾಧ್ಯತೆಗಳಿವೆ. ಉಳಿದ ತಾರಾಗಣ ಹಾಗೂ ತಾಂತ್ರಿಕ ಬಳಗದ ವಿವರಗಳು ಇನ್ನಷ್ಟೇ ಹೊರಬೀಳಬೇಕು.

ರಾಜೇಂದ್ರ ಬಾಬು ಜೊತೆ ಶಿವಣ್ಣ ಈ ಹಿಂದೆ ಸಾಕಷ್ಟು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಜೋಡಿ ಹಕ್ಕಿ, ಕುರುಬನ ರಾಣಿ ಹಾಗೂ ಪ್ರೀತ್ಸೆ ಚಿತ್ರಗಳಲ್ಲಿ ಶಿವಣ್ಣ ಅಭಿನಯಿಸಿದ್ದಾರೆ. ಈಗ ಮತ್ತೊಮ್ಮೆ ಹಳೆಯ ಜೋಡಿ ಒಂದಾಗುತ್ತಿದೆ.

ಏತನ್ಮಧ್ಯೆ ಶಿವಣ್ಣ ಅಭಿನಯದ ಮತ್ತೊಂದು ಬಹುನಿರೀಕ್ಷಿತ ಚಿತ್ರ 'ಶಿವ' ಡಬ್ಬಿಂಗ್ ಹಂತದಲ್ಲಿದೆ. ಮಾಸ್ ಮಸಾಲಾ ನಿರ್ದೇಶಕ ಓಂ ಪ್ರಕಾಶ್ ರಾವ್ ನಿರ್ದೇಶನದ ಈ ಚಿತ್ರದ ಬಗ್ಗೆ ಚಿತ್ರೋದ್ಯಮದಲ್ಲಿ ಸಾಕಷ್ಟು ಕುತೂಹಲ ಮೂಡಿದೆ. ವಿಭಿನ್ನ ಗೆಟಪ್‌ನಲ್ಲಿರುವ 'ಶಿವ' ಪೋಸ್ಟರ್‌ಗಳು ಈಗಾಗಲೆ ಎಲ್ಲರ ಗಮನಸೆಳೆಯುತ್ತಿವೆ.

ಶಿವಣ್ಣ ಅಭಿನಯಿಸುತ್ತಿರುವ ಲಕ್ಷ್ಮಿ ಹಾಗೂ ಅಂದರ್ ಬಾಹರ್ ಚಿತ್ರಗಳ ಚಿತ್ರೀಕರಣವೂ ಭರದಿಂದ ಸಾಗಿದೆ. ಇನ್ನೇನು ದುನಿಯಾ ಸೂರಿ ನಿರ್ದೇಶನದಲ್ಲಿ ಕಡ್ಡಿಪುಡಿ ಚಿತ್ರವೂ ಸೆಟ್ಟೇರಲಿದೆ. ಸ್ವಯಂವರ ಚಂದ್ರು ನಿರ್ಮಾಣದ ಈ ಚಿತ್ರದ ನಾಯಕಿ ರಾಧಿಕಾ ಪಂಡಿತ್. ಉಳಿದಂತೆ ಸೂರಿ ರೆಗ್ಯುಲರ್ ಟೀಂ ಇದ್ದೇ ಇರುತ್ತದೆ. (ಏಜೆನ್ಸೀಸ್)

English summary
Hat Trick Hero Shivarajkumar is all set to team up with Rajendra Babu for his next project. Sources revealed that Shivanna will play a sportsperson in the film. Earlier they worked together in films like Jodi Hakki, Kurubana Rani, Preethse.
Please Wait while comments are loading...