»   » 'ಸಿದ್ದಗಂಗಾ ಮಠ'ದಲ್ಲಿ ಶಿವಣ್ಣನ 'ಟಗರು' ಶೂಟಿಂಗ್!

'ಸಿದ್ದಗಂಗಾ ಮಠ'ದಲ್ಲಿ ಶಿವಣ್ಣನ 'ಟಗರು' ಶೂಟಿಂಗ್!

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಟಗರು' ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಇತ್ತೀಚೆಗಷ್ಟೇ ತುಮಕೂರಿನ ಸಿದ್ದಗಂಗಾ ಮಠದಲ್ಲಿ ಚಿತ್ರೀಕರಣ ಮಾಡಲಾಗಿದೆ.

'ಟಗರು' ಚಿತ್ರದಲ್ಲಿ ಶಿವರಾಜ್ ಕುಮಾರ್ ಪೊಲೀಸ್ ಅಧಿಕಾರಿ ಪಾತ್ರವನ್ನ ನಿರ್ವಹಿಸುತ್ತಿದ್ದು, ಸಿದ್ದಗಂಗಾ ಮಠದ ಗುರುಗಳಾದ ಶಿವಕುಮಾರ ಸ್ವಾಮೀಜಿ ಆರ್ಶೀವಾದ ಪಡೆಯುವ ದೃಶ್ಯವನ್ನ ಚಿತ್ರೀಕರಿಸಲಾಗಿದೆ.[ಚಿತ್ರಗಳು: 'ಟಗರು' ಶೂಟಿಂಗ್ ನಲ್ಲಿ ಶಿವಣ್ಣ, ಮಾನ್ವಿತಾ ಸ್ಟೈಲಿಶ್ ಲುಕ್!]

 Shivarajkumar visit to Sri Siddaganga Mutt

ಅಂದ್ಹಾಗೆ, ದುನಿಯಾ ಸೂರಿ 'ಟಗರು' ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ. ಕೆಂಡಸಂಪಿಗೆ ಖ್ಯಾತಿಯ ಮಾನ್ವಿತಾ ಹರೀಶ್ ಮತ್ತು ಜಾಕಿ ಭಾವನ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.[ಶಿವಣ್ಣನ 'ಟಗರಿ'ಗೆ ಬಂದ್ರು ಹೊಸ ಪೋರಿ!]

 Shivarajkumar visit to Sri Siddaganga Mutt

ಉಳಿದಂತೆ ಚಿತ್ರದಲ್ಲಿ ಧನಂಜಯ್, ವಸಿಷ್ಠ ಸಿಂಹ ವಿಲನ್ ಗಳಾಗಿ ಬಣ್ಣ ಹಚ್ಚಿದ್ದಾರೆ. ಚರಣ್ ರಾಜ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ನೀಡುತ್ತಿದ್ದಾರೆ. ಮತ್ತು ಕೆ,ಪಿ ಶ್ರೀಕಾಂತ್ ನಿರ್ಮಾಣ ಮಾಡುತ್ತಿದ್ದಾರೆ.['ರಾಟೆ' ರಾಜನ ರಗಡ್ ಲುಕ್ ಬೋ ಪಸಂದ್ ಆಗೈತಿ... ]

 Shivarajkumar visit to Sri Siddaganga Mutt

ಸದ್ಯ, ಮಂಗಳೂರು, ಉಡುಪಿ, ಕರಾವಳಿ ಪ್ರದೇಶಗಳಲ್ಲಿ ಶೂಟಿಂಗ್ ಮುಗಿಸಿರುವ 'ಟಗರು' ಚಿತ್ರತಂಡ, ಈಗ ತುಮಕೂರಿನ ಸಿದ್ದಗಂಗಾ ಮಠದಲ್ಲಿ ಚಿತ್ರೀಕರಣ ಮಾಡಿದೆ. ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಆದಷ್ಟೂ ಬೇಗ ಆಡಿಯೋ ಬಿಡುಗಡೆ ಮಾಡುವ ಯೋಚನೆಯಲ್ಲಿದೆ.

English summary
Shivarajakumar starrer 'Tagaru' which is being directed by director Suri is in full progress. On Tuesday, the shooting for the film took place at the Sri Siddaganga Mutt in Tumkur.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada