»   » 'ರಾಜಮೌಳಿ' ಅಪ್ಪ ವಿಜಯೇಂದ್ರ ಪ್ರಸಾದ್ ನಿರ್ದೇಶನದ ಚಿತ್ರದಲ್ಲಿ ಶಿವಣ್ಣ!

'ರಾಜಮೌಳಿ' ಅಪ್ಪ ವಿಜಯೇಂದ್ರ ಪ್ರಸಾದ್ ನಿರ್ದೇಶನದ ಚಿತ್ರದಲ್ಲಿ ಶಿವಣ್ಣ!

Posted By:
Subscribe to Filmibeat Kannada

ರಾಜಮೌಳಿ.. . ತೆಲುಗಿನ ಸ್ಟಾರ್ ಡೈರೆಕ್ಟರ್... ತಮ್ಮ ಚಿತ್ರಗಳ ಮೂಲಕ ಇಡೀ ಭಾರತದ ಚಿತ್ರರಂಗವನ್ನ ತನ್ನತ್ತ ಸೆಳೆದಿರುವ ನಿರ್ದೇಶಕ. ಇವರ ತಂದೆಯೇ ವಿಜಯೇಂದ್ರ ಪ್ರಸಾದ್. ಚಿತ್ರಗಳಿಗೆ ಕಥೆ ಬರೆಯುವುದರಲ್ಲಿ ಸೂಪರ್ ಸ್ಟಾರ್. ರಾಜಮೌಳಿ ನಿರ್ದೇಶನದ ಬಹುತೇಕ ಎಲ್ಲ ಚಿತ್ರಗಳಿಗೂ ವಿಜಯೇಂದ್ರ ಪ್ರಸಾದ್ ಅವರೇ ಕಥೆ ಬರೆಯುತ್ತಾರೆ.

ಈ ದಿಗ್ಗಜ ಕಥೆಗಾರ ಕನ್ನಡದಲ್ಲೊಂದು ಸಿನಿಮಾ ನಿರ್ದೇಶನ ಮಾಡುತ್ತಿರುವುದು ಬಹುಶಃ ಗೊತ್ತಿರುತ್ತೆ. ಕಳೆದ ವರ್ಷ ಈ ಸಿನಿಮಾ ಸೆಟ್ಟೇರಿತ್ತು. ಈಗ ಈ ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಕೂಡ ಒಂದು ಭಾಗವಾಗುತ್ತಿದ್ದಾರೆ.

ವಿಜಯೇಂದ್ರ ಪ್ರಸಾದ್ ಚಿತ್ರದಲ್ಲಿ ಶಿವಣ್ಣ!

ರಾಜಮೌಳಿ ಅವರ ಅಪ್ಪ ಕನ್ನಡದಲ್ಲಿ ನಿರ್ದೇಶನ ಮಾಡುತ್ತಿರುವ ಚಿತ್ರಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಧ್ವನಿ ನೀಡಲಿದ್ದಾರೆ.

'ಶ್ರೀವಲ್ಲಿ' ಚಿತ್ರಕ್ಕೆ ಹ್ಯಾಟ್ರಿಕ್ ಹೀರೋ ಸಾಥ್!

ಚಿತ್ರದ ಮುಖ್ಯವಾದ ಎರಡು ದೃಶ್ಯಗಳಿಗೆ ಸೆಂಚುರಿ ಸ್ಟಾರ್ ಹಿನ್ನೆಲೆ ಧ್ವನಿ ನೀಡುತ್ತಿದ್ದಾರೆ. ಈ ಕುರಿತು ವಿಜಯೇಂದ್ರ ಪ್ರಸಾದ್ ಅವರು, ಶಿವಣ್ಣ ಅವರನ್ನ ಭೇಟಿ ಮಾಡಿದ್ದು, ಶಿವಣ್ಣ ಕೂಡ ಒಪ್ಪಿಕೊಂಡಿದ್ದಾರೆ.

ಹೊಸಬರ 'ಶ್ರೀವಲ್ಲಿ'!

ವಿಜಯೇಂದ್ರ ಪ್ರಸಾದ್ ಕನ್ನಡದಲ್ಲಿ ನಿರ್ದೇಶನ ಮಾಡುತ್ತಿರುವ ಮೊದಲ ಚಿತ್ರಕ್ಕೆ 'ಶ್ರೀವಲ್ಲಿ' ಎಂಬ ಟೈಟಲ್ ಇಟ್ಟಿದ್ದು, ಈ ಚಿತ್ರದಲ್ಲಿ ರಂಜಿತ್ ಮತ್ತು ಮಾಜಿ ಮಿಸ್ ಇಂಡಿಯಾ ಸ್ನೇಹಾ ಸಿಂಗ್ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಬಿಡುಗಡೆ ಯಾವಾಗ?

ವಿಜೇಂದ್ರ ಪ್ರಸಾದ್ ಈ ಚಿತ್ರಕ್ಕೆ, ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದರೇ, ಬಿ.ವಿ.ಎಸ್.ಎನ್ ರಾಜ್ ಕುಮಾರ್ ನಿರ್ಮಾಣ ಮಾಡಿದ್ದಾರೆ. ಸದ್ಯ, ಶ್ರೀವಲ್ಲಿ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಜನವರಿ ತಿಂಗಳಲ್ಲಿ ಟೀಸರ್ ಮತ್ತು ಆಡಿಯೋ ಬಿಡುಗಡೆ ಮಾಡಲಿದ್ದಾರೆ. ಎಲ್ಲ ಅಂದುಕೊಂಡಂತೆ ಆದ್ರೆ, ಇದೇ ತಿಂಗಳಲ್ಲಿ ಸಿನಿಮಾ ಬಿಡುಗಡೆ ಮಾಡುವ ಯೋಚನೆಯಲ್ಲಿದೆ ಚಿತ್ರತಂಡ.

English summary
Kannada Actor Shivaraj Kumar Lends his voice for Vijayendra Prasad's New Kannada Movie 'Srivalli'. Srivalli is First Directional Kannada Movie of Vijayendra Prasad's.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X