»   » ಚಿತ್ರ ವಿತರಕ ಪ್ರಸಾದ್‌ಗೆ ತಿರುಗೇಟು ನೀಡಿದ ಶಿವಣ್ಣ

ಚಿತ್ರ ವಿತರಕ ಪ್ರಸಾದ್‌ಗೆ ತಿರುಗೇಟು ನೀಡಿದ ಶಿವಣ್ಣ

Posted By:
Subscribe to Filmibeat Kannada
ಹಲವಾರು ವರ್ಷಗಳಿಂದ ರಾಜ್ ಬ್ಯಾನರ್ ಸದಭಿರುಚಿಯ ಚಿತ್ರಗಳನ್ನೇ ನಿರ್ಮಿಸುತ್ತಾ ಬಂದಿದೆ. ನಮ್ಮ ಸಂಸ್ಥೆಯ ಚಿತ್ರಗಳಿಗೆ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದರ ಬಗ್ಗೆ ನಾನು ವಿಶೇಷವಾಗಿ ಹೇಳಬೇಕಾಗಿಲ್ಲ. ಬೇರೆಯವರಿಂದ ನಾವು ಹೇಳಿಸಿಕೊಂಡು ಚಿತ್ರ ನಿರ್ಮಿಸುವ ಅಗತ್ಯವಿಲ್ಲ ಎಂದು ಪರೋಕ್ಷವಾಗಿ ಚಿತ್ರ ವಿತರಕ ಪ್ರಸಾದ್ ಮಾತಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಅವರು ಮೈಸೂರಿನಲ್ಲಿ ಮಾತನಾಡುತ್ತಿದ್ದರು. ಇತ್ತೀಚೆಗೆ ಯುವಕರಿಗೆ ಬೇಕಾದ ಚಿತ್ರಗಳನ್ನು ನಮ್ಮ ಬ್ಯಾನರ್ ನೀಡುತ್ತಿದೆ. ಜನರ ಅಭಿರುಚಿಗೆ ತಕ್ಕಂತೆ ರಾಜ್ ಬ್ಯಾನರ್ ಚಿತ್ರಗಳನ್ನು ನಿರ್ಮಿಸುತ್ತಿದೆ. ಇದನ್ನು ವಿಶೇಷವಾಗಿ ಬಾಯ್ಬಿಟ್ಟು ಹೇಳಬೇಕಾಗಿಲ್ಲ. ಈ ವಿಷಯ ರಾಜ್ಯದ ಜನತೆಗೂ ಗೊತ್ತು.

ಯಾರೋ ನಮ್ಮ ಕುಟುಂಬವನ್ನು ಟೀಕಿಸಿದರೆ ನಾವು ಅವರ ಮಟ್ಟಕ್ಕೆ ಇಳಿದು ಟೀಕಿಸಲು ಸಾಧ್ಯವಿಲ್ಲ. ಆ ರೀತಿ ಮಾಡಿದರೆ ನಮಗೂ ಅವರಿಗೂ ಏನು ವ್ಯತ್ಯಾಸ ಎಂದು ಶಿವಣ್ಣ ಹೇಳಿದ್ದಾರೆ. "ರಾಜ್ ಬ್ಯಾನರ್ ಕಥೆಯೇ ಇಲ್ಲದ ಚಿತ್ರಗಳನ್ನು ನಿರ್ಮಿಸುತ್ತಿದೆ" ಪ್ರಸಾದ್ ಟೀಕಿಸಿದ್ದರು.

ಈ ಭೂಮಿ ಆ ಭಾನು ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಪ್ರಸಾದ್ ಮಾತುಗಳು ರಾಜ್ ಬ್ಯಾನರ್ ಚಿತ್ರಗಳ ಕಡೆಗೆ ಹೊರಳಿತ್ತು. ಕಥೆಯೇ ಇಲ್ಲದ ಸಿನಿಮಾಗಳನ್ನು ಮಾಡಿ ರಾಜ್ ಬ್ಯಾನರ್ ಜನರಿಗೆ ಮೋಸ ಮಾಡುತ್ತಿದೆ ಎಂದಿದ್ದರು.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಣ್ಣಬಾಂಡ್ ವಿತರಣೆ ಹಕ್ಕುಗಳು ಪ್ರಸಾದ್‌ಗೆ ಕೂದಳೆಲೆ ಅಂತರದಲ್ಲಿ ಕೈತಪ್ಪಿ ಹೋಗಿತ್ತು. ಸರಿಸುಮಾರು ರು.16 ಕೋಟಿಗೆ ಅಣ್ಣಾಬಾಂಡ್ ವಿತರಣೆ ಹಕ್ಕುಗಳನ್ನು ಕೊಂಡುಕೊಳ್ಳಲು ಪ್ರಸಾದ್ ಮುಂದಾಗಿದ್ದರು. ಆದರೆ ಅದ್ಯಾಕೋ ಏನೋ ರಾಘವೇಂದ್ರ ರಾಜ್ ಕುಮಾರ್ ನಿರಾಕರಿಸಿದ್ದರು. (ಏಜೆನ್ಸೀಸ್)

English summary
After gives a derogatory statement against Dr Rajkumar banner films, Hat Trick Hero Shivarajkumar hits back at distributor Prasad. He strongly reacts and said that, we don't want to learn from him how to make good movies.
Please Wait while comments are loading...