»   » 'ಬೆಳ್ಳಿ' ಲಾಂಗುಗಳ ಸಿಂಹಾಸನ ಏರಿದ ಸೆಂಚುರಿ ಸ್ಟಾರ್

'ಬೆಳ್ಳಿ' ಲಾಂಗುಗಳ ಸಿಂಹಾಸನ ಏರಿದ ಸೆಂಚುರಿ ಸ್ಟಾರ್

By: ಜೀವನರಸಿಕ
Subscribe to Filmibeat Kannada

ಬೆಳ್ಳಿ ಅನ್ನೋ ಸಿನಿಮಾದ ಮುಹೂರ್ತಕ್ಕೆ ಸೆಂಚುರಿ ಸ್ಟಾರ್ ಶಿವಣ್ಣ ವಿಶೇಷ ಕಾಳಜಿ ತೆಗೆದುಕೊಂಡಿದ್ದರು. ಕಗ್ಗಂಟಾಗಿದ್ದ ಒಕ್ಕೂಟದ ವಿವಾದವನ್ನ ಬಗೆಹರಿಸಿದರು. ಪವರ್ ಸ್ಟಾರ್ ಪುನೀತ್ ಕೂಡ ಒಕ್ಕೂಟದ ವಿವಾದ ಬಗೆ ಹರಿಸೋಕೆ ಎಂಟ್ರಿ ಕೊಟ್ಟರು. ಸಂಜೆ ವೇಳೆಗೆ ವಿವಾದ ಪರಿಹಾರವಾಯ್ತು.

ಶಿವಣ್ಣ ಅಭಿನಯದ 'ಬೆಳ್ಳಿ' ಸಿನಿಮಾದ ಮುಹೂರ್ತ ಬಹಳ ಅದ್ಧೂರಿಯಾಗಿ ಸೆಟ್ಟೇರಿದೆ. ಪವರ್ ಸ್ಟಾರ್ ಪುನೀತ್ ಕ್ಲ್ಯಾಪ್ ಮಾಡಿದ್ರು. 32 ಅಡಿ ಎತ್ತರದ ತಿರುಪತಿ ವೆಂಕಟರಮಣ ಸ್ವಾಮಿ ಮೂರ್ತಿಯ ಎದುರು ಶಿವಣ್ಣ ಮತ್ತು ನಾಲ್ಕು ಮಂದಿ ಸ್ಯಾಂಡಲ್ ವುಡ್ ನಾಯಕರು 'ಬೆಳ್ಳಿ'ಗೆ ಭರ್ಜರಿ ಓಪನಿಂಗ್ ಪಡ್ಕೊಂಡ್ರು. [ಬೆಳ್ಳಿ ಚಿತ್ರದ ಮುಹೂರ್ತ]

ಆದರೆ ಸದ್ಯ ಶಿವಣ್ಣನ ಕೈಯ್ಯಲ್ಲಿ ಏಳು ಸಿನಿಮಾಗಳಿವೆ. ಆದರೆ ಶಿವಣ್ಣ ಇಷ್ಟು ಬೇಗ 'ಬೆಳ್ಳಿ' ಸಿನಿಮಾ ಮಾಡೋಕೆ ಮನಸು ಮಾಡೋಕೆ ಕಾರಣವೂ ಇದೆ. ಶಿವಣ್ಣನಿಗೆ ಬೆಳ್ಳಿ ಸಿನಿಮಾ ತುಂಬಾನೆ ಇಷ್ಟವಾಗಿದೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಆದಷ್ಟು ಬೇಗ ಈ ಸಿನಿಮಾ ಮಾಡ್ಬೇಕು ಅಂದುಕೊಂಡ ಶಿವಣ್ಣ ಸಿನಿಮಾ ಶುರುಮಾಡಿ ಅಂದಿದ್ದಾರೆ. ಹಾಗಾದ್ರೆ ಬೆಳ್ಳಿಯ ಅಂತಹಾ ವಿಶೇಷತೆಗಳೇನು ಅನ್ನೋದನ್ನ ಕಲರ್ ಫುಲ್ ಫೋಟೋಗಳ ಜೊತೆ ಸ್ಲೈಡ್ ನಲ್ಲಿ ನೋಡಿ. [ಶಿವಣ್ಣ ಯಾಕೆ ರಾಜಕೀಯಕ್ಕೆ ಬರಲಿಲ್ಲ?]

ಶಿವಣ್ಣನ ಗೆಟಪ್ ಮೋಡಿ ಮಾಡಲಿದೆ

ಶಿವಣ್ಣ ಒಬ್ಬ ಪ್ರಬುದ್ಧ ನಟ. ಆದರೆ ಇಲ್ಲಿಯವರೆಗೂ ಶಿವಣ್ಣ ಮಾಡದಂತಹಾ ನಿಜಕ್ಕೂ ಭಿನ್ನ ಅನ್ನಿಸೋ ಪಾತ್ರ ಅವರದ್ದು. ಈ ಪಾತ್ರವೇ ಶಿವಣ್ಣನಿಗೆ ಇಷ್ಟವಾಗಿದೆ.

ಹೀರೋಗಳು ಶಿವಣ್ಣಂಗೆ ಜೈ ಅಂದಿದ್ದಾರೆ

ಇಲ್ಲಿ ವಿನೋದ್ ಪ್ರಭಾಕರ್, ಶಿಷ್ಯ ದೀಪಕ್, ಒರಟ ಪ್ರಶಾಂತ್, ವೆಂಕಿ ಅನ್ನೋ ನಾಲ್ಕು ಹೀರೋಗಳು ಶಿವಣ್ಣನ ಗೆಳೆಯರಾಗಿ ಕಾಣಿಸಿಕೊಳ್ತಿದ್ದಾರೆ. ಹೀರೋಗಳು ಶಿವಣ್ಣನ ಗೆಳೆಯರಾಗಿ ಕಾಣಿಸಿಕೊಳ್ಳೋಕೆ ಸೈ ಅಂದಿರೋದು ಶಿವಣ್ಣನಿಗೆ ಆನೆ ಬಲ ಬಂದಂತಾಗಿದೆ.

ಶಿವಣ್ಣ ಬೆಳ್ಳಿ ಕೃತಿ ಬಂಗಾರ ಡೈರೆಕ್ಟರೇ ಡೈಮಂಡ್

ಬೆಳ್ಳಿ ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಡಬ್ಬಲ್ ಶೇಡ್ ನಲ್ಲಿ ಕಾಣಿಸಿಕೊಳ್ತಿದ್ದು ಶಿವಣ್ಣ ಬೆಳ್ಳಿಯಾದ್ರೆ ನಾನು ಬಂಗಾರ ಅಂತಾರೆ ಕೃತಿ ಖರಬಂದ. ಗೋಲ್ಡ್ ಆಯ್ತು ಸಿಲ್ವರ್ ಆಯ್ತು ಡೈಮಂಡ್ ಯಾರು ಅಂದ್ರೆ ಡೈರೆಕ್ಟ್ರೇ ನನ್ ಪ್ರಕಾರ ಡೈಮಂಡ್ ಅಂದಿದ್ದಾರೆ.

ಉಳಿದ ಸಿನಿಮಾ ಇರಲಿ ಫಸ್ಟ್ ಬೆಳ್ಳಿ ಶುರುಮಾಡಿ

ಶಿವಣ್ಣ ಕೈಯ್ಯಲ್ಲಿ ಸದ್ಯ ಏಳು ಸಿನಿಮಾಗಳಿವೆ. ಹಾಗೆ ನೋಡಿದ್ರೆ ಸ್ಯಾಂಡಲ್ ವುಡ್ ನ ಮೋಸ್ಟ್ ಬಿಜಿ ಹೀರೋ ಶಿವಣ್ಣ. ಆರ್ಯನ್ ಮುಗಿದ ನಂತರ ಬಂಗಾರದ ವಂಶ, ಮನಮೋಹಕ, ಕಬೀರದಂತಹ ಮೋಸ್ಟ್ ಎಕ್ಸ್ ಫೆಕ್ಟೆಡ್ ಸಿನಿಮಾಗಳಿದ್ರೂ ಶಿವಣ್ಣ ಫಸ್ಟ್ ಬೆಳ್ಳಿ ಶುರುಮಾಡಿ ಅಂದಿದ್ದಾರೆ.

ಬೆಳ್ಳಿ ಗೆಳೆತನದ ಕಥೆ

ಶಿವಣ್ಣ ಮಲ್ಟಿಸ್ಟಾರರ್ ಸಿನಿಮಾಗಳನ್ನ ಇತ್ತೀಚೆಗೆ ಮಾಡಿದ್ದು ಕಡಿಮೆ. ಅದ್ರಲ್ಲೂ ಗೆಳೆತನದ ಸಬ್ಜೆಕ್ಟ್ ಮಾಡಿ ಬಹಳಾ ಸಮಯವೇ ಆಗಿತ್ತು. ಈಗ ಐದು ಜನ ಗೆಳೆಯರ ಕಥೆ ಇದಾಗಿದ್ದು ಚಿತ್ರ ಫ್ರೆಂಡ್ ಶಿಫ್ ನ ಮಹತ್ವ ಹೇಳಲಿದೆ.

ಡಿಫರೆಂಟ್ ಲಾಂಗ್ ಹಿಡಿದ ಶಿವಣ್ಣ

ಶಿವಣ್ಣನ ಕೈಯ್ಯಲ್ಲಿರೋ ಲಾಂಗ್ ನೋಡಿದ್ರೆ ನೀವ್ ಫಿದಾ ಆಗ್ತಿರೋ, ಸ್ಯಾಂಡಲ್ ವುಡ್ ಗೆ ಲಾಂಗ್ ಹಿಡಿಯೋದು ಕಲಿಸಿಕೊಟ್ಟ ಶಿವಣ್ಣ ಈ ಬಾರಿ ವೆರಿ ವೆರಿ ಡಿಫರೆಂಟ್ ಲಾಂಗ್ ಹಿಡಿದಿದ್ದಾರೆ. ಲಾಂಗುಗಳ ಸಿಂಹಾಸನದಮೇಲೆ ಕುಳಿತಿದ್ದಾರೆ.

ಶಿವಣ್ಣ ಲುಕ್ ನಲ್ಲಿ ಭಿನ್ನ ಫೀಲ್ ಇದೆ

ಇದನ್ನೆಲ್ಲಾ ನೋಡ್ತಿದ್ರೆ ಹೆಂಗಿರುತ್ತೋ ಶಿವಣ್ಣನ ಖದರ್ ಅಂತ ಅನ್ನಿಸದೇ ಇರೋದಿಲ್ಲ. ಇನ್ನು ಶಿವಣ್ಣನ ಲುಕ್ ನಲ್ಲಿ ಒಂದು ಭಿನ್ನ ಫೀಲ್ ಇದೆ. ಇದೆಲ್ಲವನ್ನ ನೋಡ್ತಿದ್ರೆ ಬೆಳ್ಳಿಯನ್ನ ಶಿವಣ್ಣ ಬೇಗ ಶುರುಮಾಡಿ ಅಂದಿರೋದ್ರಲ್ಲಿ ಅರ್ಥವಿದೆ ಅನ್ನಿಸ್ತಿದೆ.

English summary
Highlights of Century Star Shivrajkumar upcoming movie Belli, to be directed by Mussanje Mahesh. Kriti Kharbanda is the female lead of the movie. It also includes struggling actors Vinod Prabhakar, Deepak, Prashanth, and Venkatesh Prasad.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada