»   » ಶಿವಣ್ಣ-ಪ್ರೇಮ್ ಸಂಗಮದ 'ಜಂಗಮ'ಕ್ಕೆ ಮುಹೂರ್ತ

ಶಿವಣ್ಣ-ಪ್ರೇಮ್ ಸಂಗಮದ 'ಜಂಗಮ'ಕ್ಕೆ ಮುಹೂರ್ತ

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ವೃತ್ತಿ ಬದುಕಿನಲ್ಲಿ ತಿರುವು ನೀಡಿದ ಚಿತ್ರಗಳ ಸಾಲಿನಲ್ಲಿ 'ಜೋಗಿ' ಹಾಗೂ 'ಜೋಗಯ್ಯ' ಚಿತ್ರಗಳಿಗೂ ವಿಶೇಷ ಪ್ರಾಧಾನ್ಯತೆ ಇದೆ. ಇದೀಗ ಇದೇ ಜೋಡಿ ಮತ್ತೊಂದು ಚಿತ್ರಕ್ಕೆ ಅಣಿಯಾಗಿದೆ. ಇವರಿಬ್ಬರ ಸಂಗಮದ ಚಿತ್ರಕ್ಕೆ 'ಜಂಗಮ' ಎಂದು ಹೆಸರಿಟ್ಟಿರುವುದು ಗೊತ್ತೇ ಇದೆ.

ಸಮರ್ಥ್ ವೆಂಚೂರ್ಸ್ ನ ಪ್ರಸಾದ್ ಅವರು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿರುವವರು. ಈಗಾಗಲೆ ಅವರು ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡಿ ಅಡ್ವಾನ್ಸ್ ಹಣವನ್ನೂ ಕೊಟ್ಟಾಗಿದೆಯಂತೆ. ಇನ್ನೇನಿದ್ದರೂ ಚಿತ್ರ ಆರಂಭವಾಗುವುದೊಂದು ಬಾಕಿ ಇದೆ. [ರಾಜ್ ಹುಟ್ಟುಹಬ್ಬದಂದು ರಾಜ್ ಕುಟುಂಬದ 3 ಚಿತ್ರ]

Prem, Shivanna combines

ಪ್ರೇಮ್ ಕೂಡ ಈಗಾಗಲೆ ಚಿತ್ರಕಥೆ ಹೆಣೆಯುವಲ್ಲಿ ಬಿಜಿಯಾಗಿದ್ದಾರೆ. ಸದ್ಯಕ್ಕೆ 'ಡಿಕೆ' ಹಾಗೂ 'ಭಂ ಭಂ ಭೋಲೇನಾಥ್' ಚಿತ್ರಗಳ ಶೂಟಿಂಗ್ ಆರಂಭವಾಗಲಿದೆ. ಈ ಎರಡೂ ಚಿತ್ರಗಳು ಮುಗಿದ ಮೇಲೆ 'ಜಂಗಮ'ಕ್ಕೆ ಮುಹೂರ್ತ.

ಯಾವುದೇ ಚಿತ್ರ ಮಾಡಲಿ ಪ್ರೇಮ್ ಅವರು ಅದಕ್ಕೆ ಕೊಡುವ ಭರ್ಜರಿ ಪ್ರಚಾರ, ಮೇಕಿಂಗ್ ಮೂಲಕವೇ ಭಾರಿ ಸೌಂಡ್ ಮಾಡುತ್ತಾರೆ. ಹಾಗಾಗಿ ಪ್ರೇಮ್ ಚಿತ್ರಗಳೆಂದರೆ ಮುಗಿಬೀಳುವ ಅಭಿಮಾನಿಗಳಿಗೇನು ಕಮ್ಮಿ ಇಲ್ಲ. ಇನ್ನು ಶಿವಣ್ಣ ಜೊತೆಗೆ ಅಂದ್ರೆ 'ಜಂಗಮ' ಚಿತ್ರದ ನಿರೀಕ್ಷೆಗಳು ದುಪ್ಪಟ್ಟಾಗಿರುತ್ತವೆ. (ಏಜೆನ್ಸೀಸ್)

English summary
Hat trick hero Shivrajkumar and Prem combination movie titled as 'Jangama'. The film will be produced by Sammarth Prasad under the Sammarth Ventures banner.
Please Wait while comments are loading...