»   » ಹ್ಯಾಟ್ರಿಕ್ ಹೀರೋ ಇನ್ನು ಡಾ.ಶಿವರಾಜ್ ಕುಮಾರ್

ಹ್ಯಾಟ್ರಿಕ್ ಹೀರೋ ಇನ್ನು ಡಾ.ಶಿವರಾಜ್ ಕುಮಾರ್

Posted By:
Subscribe to Filmibeat Kannada

ಸೆಂಚುರಿ ಸ್ಟಾರ್, ಹ್ಯಾಟ್ರಿಕ್ ಹೀರೋ ಶಿವಣ್ಣ ಇನ್ನು ಮುಂದೆ ಡಾ.ಶಿವರಾಜ್ ಕುಮಾರ್ ಆಗಲಿದ್ದಾರೆ. ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಶಿವಣ್ಣನಿಗೆ ಗೌರವ ಡಾಕ್ಟರೇಟ್ ನೀಡಲು ಮುಂದಾಗಿದೆ. ಸುದ್ದಿ ಇನ್ನು ಅಧಿಕೃತವಾಗಿ ಘೋಷಣೆಯಾಗುವುದೊಂದು ಮಾತ್ರ ಬಾಕಿ ಇದೆ.

ಈ ಬಗ್ಗೆ ಮಂಡ್ಯದಲ್ಲಿರುವ ಶಿವರಾಜ್ ಕುಮಾರ್ ಅವರು ತಕ್ಷಣ ಪ್ರತಿಕ್ರಿಯಿಸಿದ್ದು, "ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಅಪ್ಪಾಜಿ ಒಂದು ಮಾತು ಹೇಳುತ್ತಿದ್ದರು, ಪಾಲಿಗೆ ಬಂದದ್ದು ಪಂಚಾಮೃತ ಎಂದು. ಗೌರವ ಸಿಕ್ಕಿದರೆ ಅಭಿಮಾನಿಗಳಿಗೆ ಅರ್ಪಿಸುತ್ತೇನೆ. ಅಣ್ಣಾ ಹಜಾರೆ ಜೊತೆ ಡಾಕ್ಟರೇಟ್ ಪಡೆಯಲಿರುವುದು ಖಂಡಿತ ಸಂತೋಷ ಪಡುವಂತಹ ವಿಷಯ" ಎಂದಿದ್ದಾರೆ. [ಶಿವಣ್ಣ ಅವರಿಗೆ ರಾಜಕೀಯ ಇಂಟರೆಸ್ಟ್ ಇಲ್ಲವೇ?]


ಶಿವಣ್ಣನಿಗೆ ಗೌರವ ಡಾಕ್ಟರೇಟ್ ಇನ್ನೂ ಅಧಿಕೃತವಾಗಿ ಘೋಷಣೆಯಾಗದಿದ್ದರೂ ಸುದ್ದಿ ಅದು ಹೇಗೋ ಏನೋ ಲೀಕ್ ಆಗಿದೆ. ಈಗಾಗಲೆ ಶಿವಣ್ಣನಿಗೆ ಅಭಿಮಾನಿಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

ಚಿತ್ರ ನಿರ್ದೇಶಕ ವೀರೇಂದ್ರ ಅವರು ಈ ಬಗ್ಗೆ ಟ್ವೀಟಿಸಿದ್ದು, "Congrats to Shivanna," fans of the actor tweeted messages such as, "Raising Of Respect For Shivanna..He Is Not Just Hattrick Hero ,He Is Now Dr.Shivarajkumar - feeling great." ಎಂದಿದ್ದಾರೆ.

ನೂರು ಪ್ಲಸ್ ಚಿತ್ರಗಳ ಮೂಲಕ ವೈವಿಧ್ಯಮಯ ಪಾತ್ರಗಳನ್ನು ಪೋಷಿಸಿ ಕೋಟ್ಯಾಂತರ ಅಭಿಮಾನಿಗಳನ್ನು ಸಂಪಾದಿಸಿರುವ ಶಿವಣ್ಣ ಅವರಿಗೆ ಐವತ್ತೊಂದನೇ ವಯಸ್ಸಿನಲ್ಲಿ ಈ ವಿಶೇಷ ಮನ್ನಣೆ ಸಿಗುತ್ತಿರುವುದು ಅಭಿಮಾನಿಗಳ ಪಾಲಿಗೆ ಸಂಭ್ರಮದ ಸಂಗತಿ. (ಒನ್ಇಂಡಿಯಾ ಕನ್ನಡ)

English summary
Century Star, Hat Trick Hero Shivarajkumar all set to receive an honorary doctorate from Vijayanagara Sri Krishnadevaraya University, Bellary. While there have been no official reports on the same yet.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada