»   » ಐವತ್ತರ ಪ್ರಾಯದಲ್ಲಿ ಶಿವಣ್ಣ ಸಿಕ್ಸ್ ಪ್ಯಾಕ್ ಕಸರತ್ತು

ಐವತ್ತರ ಪ್ರಾಯದಲ್ಲಿ ಶಿವಣ್ಣ ಸಿಕ್ಸ್ ಪ್ಯಾಕ್ ಕಸರತ್ತು

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ, ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರು ಮತ್ತೊಂದು ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ಈ ಬಾರಿ ಅವರು ತಮ್ಮ ದೇಹವನ್ನು ಸಿಕ್ಸ್ ಪ್ಯಾಕ್ ಗೆ ಹುರಿಗೊಳಿಸಲು ಸಿದ್ಧವಾಗಿದ್ದಾರೆ. ತಮ್ಮ ಲೇಟೆಸ್ಟ್ 'ಭಜರಂಗಿ' ಚಿತ್ರಕ್ಕಾಗಿ ಈ ತಯಾರಿ.

ಶಿವಣ್ಣ ತಮ್ಮ ವೃತ್ತಿಜೀವನದಲ್ಲಿ ಸಿಕ್ಸ್ ಪ್ಯಾಕ್ ದೇಹಕ್ಕಾಗಿ ಕಸರತ್ತು ಮಾಡುತ್ತಿರುವುದು ಇದೇ ಮೊದಲು. ಈಗ ಅವರ ವಯಸ್ಸು 50ರ ಪ್ರಾಯ. ಆದರೂ ಅವರಲ್ಲಿ ಇನ್ನೂ ಚಿಗುರು ಮೀಸೆ ಹುಡುಗನ ಉತ್ಸಾಹ ತಾಂಡವವಾಡುತ್ತಿದೆ.

Shivrajkumar with wife

"ನೋಡ್ತಾ ಇರಿ ಇನ್ನೆರಡೇ ಎರಡು ತಿಂಗಳಲ್ಲಿ ಸಿಕ್ಸ್ ಪ್ಯಾಕ್ ದೇಹ ರೆಡಿಯಾಗುತ್ತದೆ" ಎನ್ನುತ್ತಾರೆ ನೂರೈದು ಚಿತ್ರಗಳ ಸರದಾರ ಶಿವಣ್ಣ. "ಭಜರಂಗಿ ಚಿತ್ರದ ಪಾತ್ರ ಈ ರೀತಿಯ ಶಕ್ತಿಯುತ ದೇಹವನ್ನು ಬಯಸುತ್ತದೆ. ಹಾಗಾಗಿ ಸಿಕ್ಸ್ ಪ್ಯಾಕ್ ಗಾಗಿ ಶಿವಣ್ಣ ತಯಾರಿ" ಎನ್ನುತ್ತಾರೆ ಚಿತ್ರದ ನಿರ್ದೇಶಕ ಹರ್ಷಾ.

ಚಿತ್ರದಲ್ಲಿ 'ರುದ್ರ ತಾಂಡವ' ನೃತ್ಯವೂ ಇರುತ್ತದೆ. ಮೊಳಕಾಲಿನಲ್ಲೇ ಶಿವಣ್ಣ ನೃತ್ಯ ಮಾಡಲಿದ್ದಾರೆ. ಚಿತ್ರದ ಪ್ರಮುಖ ಆಕರ್ಷಣೆಗಳಲ್ಲಿ ಇದೂ ಒಂದಾಗಲಿದೆ ಎನ್ನುತ್ತಾರೆ ಹರ್ಷಾ. ಸಾಮಾನ್ಯ ವ್ಯಕ್ತಿಯೊಬ್ಬ ಅಸಾಮಾನ್ಯನಾಗುವತ್ತ ಸಾಗುವ ಕಥೆಯೇ ಚಿತ್ರದ ವಸ್ತು ಎನ್ನುತ್ತಾರವರು.

ಸಿಕ್ಸ್ ಪ್ಯಾಕ್ ಗಾಗಿ ಶಿವಣ್ಣ ತಯಾರಿ ಜೋರಾಗಿಯೇ ಇದೆ. "ಚಿತ್ರದಲ್ಲಿ ಶಿವಣ್ಣ ಅವರು ಎರಡು ವಿಭಿನ್ನ ಶೇಡ್ ಗಳಲ್ಲಿ ಕಾಣಿಸಲಿದ್ದಾರೆ. ಎರಡೂ ಪಾತ್ರಗಳ ಬಾಡಿ ಲಾಂಗ್ವೇಜ್ ಹಾಗೂ ಲುಕ್ ವಿಭಿನ್ನವಾಗಿರುತ್ತದೆ " ಎಂಬ ವಿವರಗಳನ್ನೂ ನೀಡಿದ್ದಾರೆ ಹರ್ಷಾ. ಅಂದಹಾಗೆ ಈ ಚಿತ್ರದ ನಾಯಕಿ ಐಂದ್ರಿತಾ ರೇ.

ಈಗಾಗಲೆ ಪುನೀತ್ ರಾಜ್ ಕುಮಾರ್ (ಅಣ್ಣಾಬಾಂಡ್), ದುನಿಯಾ ವಿಜಯ್ (ಶಂಕರ್ ಐಪಿಎಸ್), ಚೇತನ್ ಚಂದ್ರ (ಕುಂಭರಾಶಿ) ಸಿಕ್ಸ್ ಪ್ಯಾಕ್ ನಲ್ಲಿ ಗಮನಸೆಳೆದಿದ್ದಾರೆ. ಈಗ ಸಿಕ್ಸ್ ಪ್ಯಾಕ್ ಮೂಲಕ ಶಿವಣ್ಣ ಹೆಂಗೆಳೆಯರ ಹೃದಯ ಕದಿಯಲು ಬರುತ್ತಿದ್ದಾರೆ. (ಏಜೆನ್ಸೀಸ್)

English summary
Hat Trick Hero Shivrajkumar is now getting six packs abs for 'Bhajarangi', directed by dance choreographer turned director Harsha. Six packs abs is for the first time in his career.
Please Wait while comments are loading...