»   » ಸೆಪ್ಟೆಂಬರ್ 17 ರಂದು ತೆರೆ ಮೇಲೆ 'ರುದ್ರಮ್ಮದೇವಿ'

ಸೆಪ್ಟೆಂಬರ್ 17 ರಂದು ತೆರೆ ಮೇಲೆ 'ರುದ್ರಮ್ಮದೇವಿ'

By: ಸೋನು ಗೌಡ
Subscribe to Filmibeat Kannada

ತೆಲುಗು ತಾರೆ ಅನುಷ್ಕಾ ಶೆಟ್ಟಿ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿರುವ 'ರುದ್ರಮ್ಮದೇವಿ' ನಿರ್ದೇಶಕ ಗುಣಶೇಖರ್ ಅವರ ಕನಸಿನ ಪ್ರಾಜೆಕ್ಟ್ ಗೆ ಇದೀಗ ಮತ್ತೆ ಬಿಡುಗಡೆಯ ಸಮಸ್ಯೆ ಶುರುವಾಗಿದೆ.

ಈಗಾಗಲೇ ಚಿತ್ರದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗುತ್ತಿದ್ದು, ಸೆಪ್ಟೆಂಬರ್ 4 ರಂದು ಬಿಡುಗಡೆ ಕಾಣಬೇಕಿದ್ದ, ಚಿತ್ರ ಇದೀಗ ಮತ್ತೆ ಮುಂದಕ್ಕೆ ಹೋಗಿದ್ದು, ಸೆಪ್ಟೆಂಬರ್ 17 ರಂದು ಬಿಡುಗಡೆಯಾಗುತ್ತಿದೆ.

anushka shetty

2009 ರಲ್ಲಿ ತೆರೆ ಕಂಡು ಬಾಕ್ಸಾಫೀಸ್ ಕೊಳ್ಳೆ ಹೊಡೆದ 'ಅರುಂಧತಿ' ಚಿತ್ರ ಮಂಗಳೂರು ಬೆಡಗಿ ಕನ್ನಡತಿ ಅನುಷ್ಕಾ ಶೆಟ್ಟಿ ಅವರಿಗೆ ಬ್ರೇಕ್ ಕೊಟ್ಟ ಸಿನಿಮಾ. ತದನಂತರ ರಾಣಿ ಪಾತ್ರದ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸುತ್ತಾ ಬರುತ್ತಿರುವ ಅನುಷ್ಕಾ ಶೆಟ್ಟಿ ಇದೀಗ 'ರುದ್ರಮ್ಮದೇವಿ' ಚಿತ್ರದ ಮೂಲಕ ಅಭಿಮಾನಿಗಳನ್ನು ರಂಜಿಸಲಿದ್ದಾರೆ.

ಐತಿಹಾಸಿಕ 'ರುದ್ರಮ್ಮದೇವಿ' ಚಿತ್ರದಲ್ಲಿ ನಾಯಕಿಗೆ ಪ್ರಧಾನ ಪಾತ್ರ ಇಲ್ಲಿ ಅನುಷ್ಕಾ ಶೆಟ್ಟಿ ರಾಣಿ ರುದ್ರಮ್ಮದೇವಿಯ ಪಾತ್ರ ವಹಿಸಿದ್ದಾರೆ. ಸ್ಟೈಲೀಷ್ ಸ್ಟಾರ್ ಅಲ್ಲು ಅರ್ಜುನ್ ಅವರು 'ಗೋನ ಗನ್ನಾ ರೆಡ್ಡಿ' ಪಾತ್ರದಲ್ಲಿ ಮಿಂಚಿದರೆ, ರಾಣಾ ದಗ್ಗುಬಾಟಿ ಅವರು 'ಚಾಲುಕ್ಯ ವೀರಭದ್ರುಡು' ಪಾತ್ರದಲ್ಲಿ ಮಿಂಚಿದ್ದಾರೆ.

'ರುದ್ರಮ್ಮದೇವಿ' ತೆಲುಗು ಹಾಗೂ ತಮಿಳು ಭಾಷೆಯಲ್ಲೂ ತೆರೆ ಕಾಣಲಿದ್ದು, ಭಾರತದ ಪ್ರಥಮ ಐತಿಹಾಸಿಕ 3ಡಿ ಚಿತ್ರವಾಗಿದೆ. 'ರುದ್ರಮ್ಮದೇವಿ' 13 ರ ಶತಮಾನದ ತೆಲುಗು ರಾಣಿಯೊಬ್ಬಳ ಕಥೆಯಾನ್ನಧರಿಸಿದೆ.

anushka shetty

ಸುಮಾರು 60 ಕೋಟಿ ರೂಪಾಯಿ ಬಜೆಟ್ ನಲ್ಲಿ ತಯಾರಾಗುತ್ತಿರುವ ಚಿತ್ರಕ್ಕೆ ಇಳೆಯರಾಜ ಅವರು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ನೀತಾ ಲುಲ್ಲ ಚಿತ್ರದ ಪಾತ್ರಧಾರಿಗಳಿಗೆ ವಿಶೇಷ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರೆ.

ಇನ್ನುಳಿದಂತೆ ನಿತ್ಯಾ ಮೆನನ್, ಕೃಷ್ಣಮ್ ರಾಜು, ಪ್ರಕಾಶ್ ರಾಜು, ಆದಿತ್ಯ ಮೆನನ್, ಬಾಬಾ ಸೆಹಾಗಲ್, ಕ್ಯಾಥರಿನ್ ಟ್ರೀಸಾ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ.

ಒಟ್ನಲ್ಲಿ 'ಅರುಂಧತಿ' ಮೆಚ್ಚಿದ ಅಭಿಮಾನಿಗಳು ಅನುಷ್ಕಾ ಅವರ ರಾಣಿ 'ರುದ್ರಮ್ಮದೇವಿ' ಅವತಾರವನ್ನು ಮೆಚ್ಚಬಹುದು ಅನ್ನೋದು ನಮ್ಮ ಅನಿಸಿಕೆ. ಅಂತೂ ಬಹಳ ನಿರೀಕ್ಷೆ ಹುಟ್ಟಿಸಿರುವ ಚಿತ್ರ ತೆರೆ ಕಾಣಲು ಇನ್ನೂ ಕೊಂಚ ಟೈಮ್ ಇರುವುದರಿಂದ ಪ್ರೇಕ್ಷಕರು ಸೆಪ್ಟೆಂಬರ್ 17 ಬರುವ ತನಕ ಕಾಯಲೇ ಬೇಕು.

English summary
Director Gunasekhar's dream project, 'Rudhramadevi' is said to be facing release hiccups yet again. The film has already had number of postponements in the past and is likely to have one more. 'Rudhramadevi' features Telugu Actress Anushka Shetty, Telugu Actress Nithya Menon, Telugu Actor Allu Arjun, Telugu Actor Rana Daggubati in the lead role.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada