For Quick Alerts
  ALLOW NOTIFICATIONS  
  For Daily Alerts

  ಕೊರೊನಾ ಕ್ವಾರಂಟೈನ್ ವದಂತಿ: ಗರಂ ಆದ ನಟಿ ಶ್ರದ್ಧ ಶ್ರೀನಾಥ್

  |

  ಸ್ಯಾಂಡಲ್ ವುಡ್ ನ ನಟಿ ಶ್ರದ್ಧ ಶ್ರೀನಾಥ್ ಸದ್ಯ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಶ್ರದ್ಧಾ ಬಗ್ಗೆ ಕೊರೊನಾ ಕ್ವಾರಂಟೈನ್ ಬಗ್ಗೆ ವದಂತಿಯೊಂದು ಹರಿದಾಡುತ್ತಿದೆ. ವಿಶ್ವದಾದ್ಯಂತ ಕೊರೊನಾ ವೈರಸ್ ಅಟ್ಟಹಾಸ ಮೆರೆಯುತ್ತಿದೆ. ಕಿಲ್ಲರ್ ಕೊರೊನಾದಿಂದ ತಪ್ಪಸಿಕೊಳ್ಳಲು ಮನೆಯಲ್ಲಿಯೆ ಇರುವಂತ ಸ್ಥಿತಿ ನಿರ್ಮಾಣವಾಗಿದೆ.

  ಅದರಲ್ಲೂ ವಿದೇಶಿ ಪಯಣ, ಊರಿಂದ ಬೇರೆ ಊರಿಗೆ ಪಯಣ ಬೆಳೆಸಿದವರನ್ನು 14 ದಿನಗಳ ಕಾಲ ಕ್ವಾರಂಟೈನ್ ಮಾಡಲಾಗುತ್ತಿದೆ. ಅಲ್ಲದೆ ಕೊರೊನಾ ಪೀಡಿತರ ಜೊತೆ ಪಯಣ ಬೆಳೆಸಿದ ಸಹ ಪ್ರಯಾಣಿಕರನ್ನು ಹುಡುಕಿ ಕ್ವಾರಂಟೈನ್ ಮಾಡಲಾಗುತ್ತಿದೆ. ನಟಿ ಶ್ರದ್ಧಾ ಶ್ರೀನಾಥ್ ಆಗಾಗ ಹೈದರಬಾದ್, ಚೆನ್ನೈ ಅಂತ ಫ್ಲೈಟ್ ನಲ್ಲಿ ಓಡಾಡುತ್ತಿರುತ್ತಾರೆ. ಶ್ರದ್ಧಾ ಓಡಾಡಿದ ಫ್ಲೈಟ್ ನಲ್ಲಿ ಕೊರೊನಾ ಸೋಂಕಿತರು ಇದ್ದರು, ಹಾಗಾಗಿ ಅವರನ್ನು ಕ್ವಾರಂಟೈನ್ ಮಾಡಲಾಗಿದೆ ಎನ್ನುವ ಸುದ್ದಿ ವೈರಲ್ ಆಗಿದೆ. ಮುಂದೆ ಓದಿ..

  ಕಿಚ್ಚ ಸುದೀಪ್ 'ಫ್ಯಾಂಟಮ್'ಗೆ ನಾಯಕಿಯಾದ ಕನ್ನಡದ ಖ್ಯಾತ ನಟಿ?

  ನಟಿ ಶ್ರದ್ಧಾ ಶ್ರೀನಾಥ್ ಕ್ವಾರಂಟೈನ್ ವದಂತಿ

  ನಟಿ ಶ್ರದ್ಧಾ ಶ್ರೀನಾಥ್ ಕ್ವಾರಂಟೈನ್ ವದಂತಿ

  ನಟಿ ಶ್ರದ್ಧಾ ಶ್ರೀನಾಥ್ ಕನ್ನಡ ಮಾತ್ರವಲ್ಲದೆ ತಮಿಳು ಮತ್ತು ತೆಲುಗು ಸಿನಿಮಾರಂಗದಲ್ಲಿಯೂ ಬ್ಯುಸಿಯಾಗಿದ್ದಾರೆ. ಹಾಗಾಗಿ ಚೆನ್ನೈ, ಹೈದರಾಬಾದ್ ಅಂತ ಓಡಾಡುತ್ತಿರುತ್ತಾರೆ. ಇದನ್ನ ಗಮನದಲ್ಲಿಟ್ಟುಕೊಂಡು ಶ್ರದ್ಧಾ ಕೊರೊನಾ ಪೀಡಿತರು ಇರುವ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದಾರೆ. ಹಾಗಾಗಿ ಅವರ ಮನೆಗೆ ಅಧಿಕಾರಿಗಳು ಭೇಟಿ 14 ದಿನಗಳು ಕ್ವಾರಂಟೈನ್ ಮಾಡಿದ್ದಾರೆ ಎನ್ನುವ ಸುದ್ದಿ ಹಬ್ಬಿಸಿದ್ದರು.

  ಗರಂ ಆದ ನಟಿ ಶ್ರದ್ಧಾ ಶ್ರೀನಾಥ್

  "ನಿಮಗೀಗ ಸಿನಿಮಾರಂಗದ ವರದಿ ಮಾಡಲು ಏನು ಸಿಗುತ್ತಿಲ್ಲ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಆದರೆ ದಯವಿಟ್ಟು ತಪ್ಪಾದ ಮಾಹಿಯನ್ನು ಬರೆಯಬೇಡಿ. ಓದುಗರು ನಿಮ್ಮನ್ನು ನಿಜವಾದ ಮಾಹಿತಿ ಮೂಲವಾಗಿ ನೋಡುತ್ತಿರುತ್ತಾರೆ" ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

  5 ವರ್ಷದ ಹಿಂದಿನ ಫೋಟೋದ ಕುತೂಹಲಕರ ವಿಷಯ ಬಿಚ್ಚಿಟ್ಟ ಶ್ರದ್ಧಾ

  ಕ್ವಾರಂಟೈನ್ ಬಗ್ಗೆ ಶ್ರದ್ಧಾ ಸ್ಪಷ್ಟನೆ

  ಕ್ವಾರಂಟೈನ್ ಬಗ್ಗೆ ಶ್ರದ್ಧಾ ಸ್ಪಷ್ಟನೆ

  "ನಾನು ಕ್ವಾರಂಟೈನ್ ನಲ್ಲಿ ಇದ್ದೆ. ಮಾರ್ಚ್ 29ಕ್ಕೆ ಕ್ವಾರಂಟೈನ್ ಮುಗಿದಿದೆ. ನಾನೀಗ ನನ್ನ ಅಮ್ಮನಿಗೆ ಅಡುಗೆಯಲ್ಲಿ ಸಹಾಯ ಮಾಡುತ್ತಿದ್ದೇನೆ. ನಿಮ್ಮೊಂದಿಗೆ ಅಮೇಲೆ ಮಾತನಾಡುತ್ತೇನೆ. ಯಾವುದೇ ತಪ್ಪು ಮಾಹಿತಿಯನ್ನು ಹರಡಿಸಬೇಡಿ. ವೈರಸ್ ಮತ್ತು ತಪ್ಪು ಮಾಹಿತಿ ಎರಡು ಅಪಾಯಕಾರಿ" ಎಂದು ಟ್ವೀಟ್ ಮಾಡಿದ್ದಾರೆ.

  ವೈದ್ಯರ ಸಲಹೆ ಮೇರೆಗೆ ಸ್ವಯಂ ದಿಗ್ಬಂಧನದಲ್ಲಿದ್ದೆ

  "ಮುನ್ನೆಚ್ಚರಿಕೆ ಕ್ರಮವಾಗಿ ನಾನು ನನ್ನ ಸೋದರ ಸಂಬಂಧಿ ವೈದ್ಯರ ಸಲಹೆ ಮೇರೆಗೆ 14 ದಿನಗಳ ಕಾಲ ಸ್ವಯಂ ದಿಗ್ಬಂಧನದಲ್ಲಿದ್ದೆ. ಪ್ರತಿಯೊಬ್ಬ ಜವಾಬ್ದಾರಿಯುತ ಮತ್ತು ಜಾಗೃತಿ ಇರುವ ಪ್ರತಿಯೊಬ್ಬ ಪ್ರಜೆಯು ವಿದೇಶಿ ಪಯಣ ಮಾಡಿದ ನಂತರ ಮಾಡಬೇಕು. ನಾನು ಕ್ವಾರಂಟೈನ್ ನಲ್ಲಿ ಇದ್ದೆ" ಎಂದಿದ್ದಾರೆ..

  ''ನನಗೆ ಮಕ್ಕಳೆ ಬೇಡ'': ಶ್ರದ್ಧಾ ದಿಟ್ಟ ನಿರ್ಧಾರಕ್ಕೆ ಕಾರಣವೇನು?

  ನಮ್ಮನೆಗೆ ಯಾವುದೆ ಅಧಿಕಾರಿಗಳು ಬಂದಿಲ್ಲ

  "ನಾನು ಮಾರ್ಚ್ 12 ರಿಂದ 15ರ ವರೆಗೆ ಹೈದರಾಬಾದ್ ಮತ್ತು ಚೆನ್ನೈಗೆ ಪ್ರಯಾಣ ಬೆಳೆಸಿದ್ದೆ. ಆದರೆ ನಾನು ಪ್ರಯಾಣಿಸಿದ ವಿಮಾನದಲ್ಲಿ ಯಾವುದು ಸೋಂಕಿತರು ಇರಲಿಲ್ಲ. ಇನ್ನು ಕರ್ನಾಟಕದ ಯಾವುದೆ ವೈದ್ಯಕೀಯ ಅಧಿಕಾರಿಗಳು ನನ್ನ ಮನೆಗೆ ಬಂದು ಸ್ವಯಂ ಕ್ವೈರಂಟೈನ್ ನಲ್ಲಿ ಇರುವಂತೆ ಹೇಳಿಲ್ಲ. ಈ ಬಗ್ಗೆ ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ಮಾತನಾಡುವುದಿಲ್ಲ" ಎಂದು ಬ್ಯಾಕ್ ಟು ಬ್ಯಾಕ್ ಟ್ವೀಟ್ ಮಾಡಿದ್ದಾರೆ.

  English summary
  Kannada Actress Shraddha Srinath Clarifies about corona isolation rumors.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X