»   » ಶ್ರದ್ಧಾ ಶ್ರೀನಾಥ್ ಗೆ ಈ ವಾರ ಡಬಲ್ ಧಮಾಕ

ಶ್ರದ್ಧಾ ಶ್ರೀನಾಥ್ ಗೆ ಈ ವಾರ ಡಬಲ್ ಧಮಾಕ

Posted By:
Subscribe to Filmibeat Kannada

ನಟಿ ಶ್ರದ್ಧಾ ಶ್ರೀನಾಥ್ ಅಭಿನಯದ 'ಆಪರೇಷನ್ ಅಲಮೇಲಮ್ಮ' ಚಿತ್ರದ ಬಿಡುಗಡೆಗೆ ದಿನಗಣನೆ ಶುರುವಾಗಿದ್ದು, ಇದೇ ವಾರ ಜುಲೈ 21 ರಂದು ಸಿನಿಮಾ ಬಿಡುಗಡೆಯಾಗುತ್ತಿದೆ. ಈ ಸಂತಸದಲ್ಲಿರುವ ಶ್ರದ್ಧಾಗೆ ಈ ವಾರ ಡಬಲ್ ಧಮಾಕ ಆಗಿದೆ.

ಹೌದು, ಕನ್ನಡದ 'ಆಪರೇಷನ್ ಅಲಮೇಲಮ್ಮ' ಜೊತೆ ತಮಿಳಿನ 'ವಿಕ್ರಂ ವೇದ' ಚಿತ್ರವೂ ಅದೇ ದಿನ ತೆರೆಕಾಣುತ್ತಿದೆ. ಶ್ರದ್ಧಾ ನಾಯಕಿಯಾಗಿರುವ ಈ ಚಿತ್ರದಲ್ಲಿ ವಿಜಯ್ ಸೇಥುಪತಿ ಮತ್ತು ಮಾಧವನ್ ನಾಯಕರಾಗಿ ಅಭಿನಯಿಸಿದ್ದಾರೆ. ಪುಷ್ಕರ್ ಗಾಯಿತ್ರಿ ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ.

ಮೂಗುತಿ ಸುಂದರಿ ಶ್ರದ್ಧಾ ಶ್ರೀನಾಥ್ ರವರಿಗೆ ಡಿಮ್ಯಾಂಡಪ್ಪೊ ಡಿಮ್ಯಾಂಡು.!

Shraddha Srinath’s 2 films Are Releasing on July 21st

ಈಗಾಗಲೇ ತಮಿಳಿನ 'ಕಾಟ್ರು ವೆಲೆಯಾಡು', 'ಇವನ್ ತಾಂಥೀರನ್' ಚಿತ್ರಗಳಲ್ಲಿ ಅಭಿನಯಿಸಿದ್ದ ಶ್ರದ್ಧಾಗೆ ಇದು ಮೂರನೇ ತಮಿಳು ಸಿನಿಮಾ. ಹೀಗಾಗಿ, ಕುತೂಹಲ ಹೆಚ್ಚಾಗಿದೆ.

ಮತ್ತೊಂದೆಡೆ ಸಿಂಪಲ್ ಸುನಿ ನಿರ್ದೇಶನ 'ಆಪರೇಷನ್ ಅಲಮೇಲಮ್ಮ' ಚಿತ್ರ ಹೆಚ್ಚು ಭರವಸೆ ಮೂಡಿಸಿದೆ. ರಿಷಿ ಹಾಗೂ ಶ್ರದ್ಧಾ ಶ್ರೀನಾಥ್ ಚಿತ್ರದಲ್ಲಿ ನಾಯಕ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ರಾಜೇಶ್ ನಟರಂಗ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇದೊಂದು ಸಸ್ಪೆನ್ಸ್ ಕಾಮಿಡಿ ಥ್ರಿಲ್ಲಿಂಗ್ ಸಿನಿಮಾವಾಗಿದೆ.

Shraddha Srinath’s 2 films Are Releasing on July 21st

ಅನನ್ಯ ಟೀಚರ್ ಪಾಠ ಕೇಳಿದ್ರೆ, 'ಅಲಮೇಲಮ್ಮ'ನ ಆಪರೇಷನ್ ನೋಡಬಹುದು

ಕನ್ನಡ ಪ್ರಿಯರಿಗೆ 'ಆಪರೇಷನ್ ಅಲಮೇಲಮ್ಮ' ಒಳ್ಳೆ ಸಿನಿಮಾ ಆಗಿರಲಿ ಎಂದುಕೊಂಡು ಥಿಯೇಟರ್ ಬಂದ್ರೆ, ನಟಿ ಶ್ರದ್ಧಾ ಮಾತ್ರ ಎರಡು ಚಿತ್ರಗಳ ಪಲಿತಾಂಶದ ಮೇಲೂ ಕಣ್ಣಿಟ್ದಿದ್ದಾರೆ. ಇವೆರೆಡರಲ್ಲಿ ಯಾವ ಚಿತ್ರ ಶ್ರದ್ಧಾಗೆ ಸಿಹಿ ಸುದ್ದಿ ಕೊಡುತ್ತೆ ಎಂಬುದನ್ನ ಕಾದುನೋಡಬೇಕಿದೆ.

English summary
Two of Shraddha Srinath’s films are releasing on the same day. She is eagerly looking forward to Kannada flick Operation Alamelamma and is equally happy about Tamil film, Vikram Vedha starring Madhavan and Vijay Sethupathi

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada