»   » 'ನನ್ನೊಂದಿಗೆ ಬಾಳ್ವೆ ನಡೆಸಲು ಚಂದ್ರಚೂಡಗೆ ಹೇಳಿ'

'ನನ್ನೊಂದಿಗೆ ಬಾಳ್ವೆ ನಡೆಸಲು ಚಂದ್ರಚೂಡಗೆ ಹೇಳಿ'

Posted By:
Subscribe to Filmibeat Kannada
Kannada Journalist Chandrachud wife Manjula pleads court to allow him to live with her
ಬೆಂಗಳೂರು, ಜುಲೈ27: ಹಿರಿಯ ನಟಿ ಶ್ರುತಿ ಜತೆಗಿನ ಮದುವೆಯನ್ನು ಅನೂರ್ಜಿತಗೊಳಿಸುವಂತೆ ಚಂದ್ರಚೂಡ ಚಕ್ರವರ್ತಿ ಅವರು ನ್ಯಾಯಾಲಯಕ್ಕೆ ಮೊರೆಹೋಗಿದ್ದಾರೆ.
ಹಾಗಾಗಿ ತಮ್ಮ ಮತ್ತು ಚಂದ್ರಚೂಡ್ ನಡುವಿನ ವೈವಾಹಿಕ ಹಕ್ಕಿನ ಮರುಸ್ಥಾಪನೆಗೆ ಅನುವು ಮಾಡಿಕೊಡಬೇಕು ಎಂದು ನಗರದ ಕೌಟುಂಬಿಕ ನ್ಯಾಯಾಲಯದಲ್ಲಿ ಚಂದ್ರಚೂಡರ ಪತ್ನಿ ಮಂಜುಳ ಶುಕ್ರವಾರ ಹೊಸ ಅರ್ಜಿ ಸಲ್ಲಿಸಿದ್ದಾರೆ.

ವೈವಾಹಿಕ ಹಕ್ಕು ಮರುಸ್ಥಾಪನೆಗೆ ಅರ್ಜಿ:
ಈ ಹಿನ್ನೆಲೆಯಲ್ಲಿ ಮತ್ತೆ ನನ್ನೊಂದಿಗೆ ಕೌಟುಂಬಿಕ ಬಾಂಧವ್ಯ ಮುಂದುವರಿಸುವಂತೆ ನನ್ನ ಪತಿ ಚಂದ್ರಚೂಡಗೆ ಸೂಚಿಸಬೇಕು ಎಂದು ಮಂಜುಳ ಕೋರ್ಟಿಗೆ ಅಲವತ್ತುಕೊಂಡಿದ್ದಾರೆ.

ಜತೆಗೆ, ತಮ್ಮ ಅರ್ಜಿ ಇತ್ಯರ್ಥವಾಗುವರೆಗೂ ತಮ್ಮ ಮತ್ತು ತಮ್ಮ ಮಗಳ ಜೀವನ ನಿರ್ವಹಣೆಗಾಗಿ ಪ್ರತಿ ತಿಂಗಳೂ 35 ಸಾವಿರ ರೂಪಾಯಿ ತಾತ್ಕಾಲಿಕ ಜೀವನಾಂಶ ನೀಡುವಂತೆ ತಮ್ಮ ಪತಿ ಚಂದ್ರಚೂಡಗೆ ಕೋರ್ಟ್ ನಿರ್ದೇಶನ ನೀಡಬೇಕು ಎಂದೂ ಮಂಜುಳ ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಮಂಜುಳರ ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯ ಚಂದ್ರಚೂಡಗೆ ನೋಟಿಸ್ ಜಾರಿ ಮಾಡುವಂತೆ ಆದೇಶಿಸಿದೆ ಎಂದು ಮಂಜುಳರ ಪರ ವಕೀಲ ಧರ್ಮಪಾಲ್ ಅವರು ವಾದ ಮಂಡಿಸಿದ್ದಾರೆ. 

ಆದರೆ ಮದುವೆ ರದ್ದು ಕೋರಿ ಕೋರ್ಟಿಗೆ ಮೊರೆ ಹೋದ ದಿನ ಮಾಧ್ಯಮಗಳ ಜತೆ ಮಾತನಾಡಿದ ಚಂದ್ರಚೂಡ್ ತಮ್ಮ ಮೊದಲ ಪತ್ನಿ ಮಂಜುಳ ಜತೆ ವೈವಾಹಿಕ ಸಂಬಂಧ ಮುಂದುವರಿಸುವ ಇಚ್ಛೆ ಇಲ್ಲವೆಂದು ಸ್ಪಷ್ಟಪಡಿಸಿದ್ದಾರೆ. 

English summary
Kannada Journalist Chandrachud has petitioned in the Bangalore family court to declare his marriage with Kannada actor Shruti as null and void. In the mean while Manjula, wife of Chandrachud, the journalist who married Kannada actress Shruthi, has filed a petition in the same court seeking to upheld her marriage with Chandrachud. The court has admitted her petition. 
Please Wait while comments are loading...