»   » ಮ್ಯಾಕ್ಸಿಮ್ ನಲ್ಲಿ ನಟಿ ಶ್ರುತಿ ಸೌಂದರ್ಯ ಅನಾವರಣ

ಮ್ಯಾಕ್ಸಿಮ್ ನಲ್ಲಿ ನಟಿ ಶ್ರುತಿ ಸೌಂದರ್ಯ ಅನಾವರಣ

Posted By:
Subscribe to Filmibeat Kannada

ಮ್ಯಾಕ್ಸಿಮ್ ನಿಯತಕಾಲಿಕೆ ಗೊತ್ತಲ್ಲವೆ? ಕಲಾ ರಸಿಕರ ಪಾಲಿಗೆ ಚಂದಮಾಮ, ಬಾಲಮಿತ್ರವಿದ್ದಂತೆ. ಈಗ ಇದೇ ನಿಯತಕಾಲಿಯ ಮುಖಪುಟವನ್ನು ನಟಿ ಶ್ರುತಿ ಹಾಸನ್ ಅಲಂಕರಿಸಿದ್ದಾರೆ. ಸೌಂದರ್ಯೋಪಾಸಕರಿಗಾಗಿ ತಮ್ಮ ಸೌಂದರ್ಯವನ್ನು ಪುಟಪುಟದಲ್ಲೂ ಅನಾವರಣಗೊಳಿಸಿದ್ದಾರೆ.

ಈ ಮೂಲಕ ತಾನೂ ಗ್ಲಾಮರ್ ಗೊಂಬೆ ಎಂಬುದನ್ನು ಲೋಕಕ್ಕೆ ಸಾರಿದ್ದಾರೆ. ಶ್ರುತಿ ಅವರ ಹಾಟ್ ಫೋಟೋಗಳನ್ನು ಮೇ, 2013ರ ಸಂಚಿಕೆಯಲ್ಲಿ ಕಣ್ತುಂಬಿಕೊಳ್ಳಬಹುದು. ಕಪ್ಪು ದಿರಿಸಿನಲ್ಲಿ ಶ್ರುತಿ ಕಣ್ಣು ಕುಕ್ಕುವ ಶೃಂಗಾರ ಲೀಲೆಗಳನ್ನು ಸಂಚಿಕೆಯಲ್ಲಿ ಕಾಣಬಹುದು.


ಶ್ರುತಿ ಹಾಸನ್ ಸದ್ಯಕ್ಕೆ ಬಾಲಿವುಡ್ ನ ರಾಮಯ್ಯ ವಸ್ತಾವಯ್ಯಾ ಎಂಬ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇದರ ಜೊತೆಗೆ ತೆಲುಗು ಚಿತ್ರರಂಗದಲ್ಲೂ ಬಿಜಿಯಾಗಿದ್ದಾರೆ. ಇನ್ನು ಅಭಿನಯದಲ್ಲೂ ಅಷ್ಟೇ ತಮ್ಮದೇ ಆದ ವರಸೆಗಳನ್ನು ತೊರಿಸುತ್ತಿದ್ದಾರೆ. ಎಷ್ಟೇ ಆಗಲಿ ಅವರ ರಕ್ತದಲ್ಲೇ ಅಭಿನಯ ಬೆರೆತಿದೆ ಅಲ್ಲವೆ?

ಶ್ರುತಿ ಹಾಸನ್ ಅವರು ಕನ್ನಡಕ್ಕೂ ಅಡಿಯಿಡುತ್ತಾರೆ ಎಂಬ ಸುದ್ದಿ ಇತ್ತು. ಒಮ್ಮೆ ಪುನೀತ್ ಚಿತ್ರಕ್ಕೆ ನಾಯಕಿ ಎಂದರೆ, ಇನ್ನೊಮ್ಮೆ ಶಿವಣ್ಣ ಚಿತ್ರಕ್ಕೆ ಹೀರೋಯಿನ್ ಎನ್ನಲಾಗಿತ್ತು. ಕಡೆಗೆ ಅದು ಸುದ್ದಿಯಾಗಿಯೇ ಉಳಿಯಿತೇ ಹೊರತು ನಿಜವಾಗಲಿಲ್ಲ. ಅದ್ಯಾವಾಗ ಕನ್ನಡಕ್ಕೆ ಅಡಿಯಿಡುತ್ತಾರೋ ಏನೋ ಕಾದುನೋಡಬೇಕು. (ಏಜೆನ್ಸೀಸ್)

English summary
Hot sensation Shruthi Hassan poses hot for Maxim magazine cover page for May, 2013 edition.She looks hot in black skin outfit dress.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada