»   » ತಮಿಳು ಲೂಸಿಯಾ ಚಿತ್ರಕ್ಕೆ ಸಿದ್ಧಾರ್ಥ್ ನಾಯಕ

ತಮಿಳು ಲೂಸಿಯಾ ಚಿತ್ರಕ್ಕೆ ಸಿದ್ಧಾರ್ಥ್ ನಾಯಕ

Posted By:
Subscribe to Filmibeat Kannada

ಕನ್ನಡ ಚಿತ್ರೋದ್ಯಮದಲ್ಲಿ ಹೊಸತನಕ್ಕೆ ನಾಂದಿ ಹಾಡಿದ ಚಿತ್ರ ಲೂಸಿಯಾ. ತನ್ನ ಮೇಕಿಂಗ್ ಮೂಲಕ ಈ ಚಿತ್ರ ಹಲವಾರು ಚಿತ್ರೋದ್ಯಮಗಳ ಗಮನವನ್ನೂ ಸೆಳೆಯಿತು. ಕನ್ನಡ ಚಿತ್ರರಂಗಕ್ಕಿಂತಲೂ ಹೊಸತನದಲ್ಲಿ ಒಂದೆರೆಡು ಹೆಜ್ಜೆ ಮುಂದಿರುವ ತಮಿಳು ಚಿತ್ರೋದ್ಯಮದ ಗಮನವನ್ನೂ ಸೆಳೆದಿದೆ.

ಈಗ ಲೂಸಿಯಾ ತಮಿಳಿಗೆ ರೀಮೇಕ್ ಆಗುತ್ತಿದೆ. ಸತೀಶ್ ನೀನಾಸಂ ಪೋಷಿಸಿದ್ದ ಪಾತ್ರವನ್ನು ತಮಿಳಿನಲ್ಲಿ ಸಿದ್ಧಾರ್ಥ್ ಪೋಷಿಸಲಿಸಲಿದ್ದಾರೆ. ತಮಿಳಿನ ಖ್ಯಾತ ನಿರ್ಮಾಪಕ ಸಿವಿ ಕುಮಾರ್ ಈ ಚಿತ್ರವನ್ನು ಅಚ್ಚುಕಟ್ಟಾಗಿ ತಮಿಳಿಗೆ ತರುತ್ತಿದ್ದಾರೆ. ಆಕ್ಷನ್ ಕಟ್ ಹೇಳುತ್ತಿರುವವರು ಹೊಸಬ ಪ್ರಸಾದ್ ರಮರ್. [ಲೂಸಿಯಾ ಚಿತ್ರ ವಿಮರ್ಶೆ]


ಸಂತೋಷ್ ನಾರಾಯಣ್ ಅವರ ಸಂಗೀತ ಚಿತ್ರಕ್ಕಿದ್ದು ಜನವರಿ 2014ರಲ್ಲಿ ಸೆಟ್ಟೇರಲಿದೆ. ಕ್ರೌಡ್ ಫಂಡಿಂಗ್ ಮೂಲಕ ನಿರ್ಮಿಸಿದ ಲೂಸಿಯಾ ಚಿತ್ರಕ್ಕೆ ಕನ್ನಡದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಚಿತ್ರವನ್ನು ಆನ್ ಲೈನ್ ನಲ್ಲೂ ಬಿಡುಗಡೆ ಮಾಡಲಾಗಿದೆ.

ಪವನ್ ಕುಮಾರ್ ರಚನೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಸಿದ್ಧಾರ್ಥ್ ನುನಿ ಅವರ ಛಾಯಾಗ್ರಹಣವಿದೆ. ನಿದ್ರಾಹೀನತೆಯಿಂದ ಬಳಲುವ ನಿಕ್ಕಿ (ಸತೀಶ್ ನೀನಾಸಂ) ಸುತ್ತ ಸುತ್ತುವ ಮನೋವೈಜ್ಞಾನಿಕ ಕಥಾ ಹಂದರವನ್ನು ಚಿತ್ರ ಒಳಗೊಂಡಿದೆ. ಹಿಂದಿಗೂ ತಾವೇ ರೀಮೇಕ್ ಮಾಡುವುದಾಗಿ ಪವನ್ ತಿಳಿಸಿದ್ದರು. (ಏಜೆನ್ಸೀಸ್)

English summary
The critically acclaimed Kannada film Lucia is being remade in Tamil by noted producer C V Kumar. Actor Siddharth to play the lead in the film. 
Please Wait while comments are loading...