»   » ಹತ್ತು ರಸಗಳ ಚಿತ್ರ 'ಸಿಲ್ಕ್', ತ್ರಿಶೂಲ್ ಸಂದರ್ಶನ

ಹತ್ತು ರಸಗಳ ಚಿತ್ರ 'ಸಿಲ್ಕ್', ತ್ರಿಶೂಲ್ ಸಂದರ್ಶನ

By Rajendra
Subscribe to Filmibeat Kannada
For Quick Alerts
ALLOW NOTIFICATIONS
For Daily Alerts
  <ul id="pagination-digg"><li class="next"><a href="/news/story-not-relating-to-silk-smitha-trishul-interview-076208.html">Next »</a></li></ul>

  ಕನ್ನಡ ಚಿತ್ರರಂಗದಲ್ಲಿ ತಯಾರಾಗಿರುವ ಅದ್ದೂರಿ ಚಿತ್ರಗಳ ಸಾಲಿಗೆ 'ಸಿಲ್ಕ್, ಸಖತ್ ಹಾಟ್' ಚಿತ್ರವೂ ಸೇರ್ಪಡೆಯಾಗಿದೆ. ಇದೇ ಆಗಸ್ಟ್ 2ಕ್ಕೆ ಕಪಾಲಿ ಚಿತ್ರಮಂದಿರ ಸೇರಿದಂತೆ ಸರಿಸುಮಾರು 140 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಇದೇ ಮೊದಲ ಬಾರಿಗೆ ಈ ಚಿತ್ರದಲ್ಲಿ ಹಾಟ್ ತಾರೆ ವೀಣಾ ಮಲಿಕ್ ಅಭಿನಯಿಸಿದ್ದು ಭಾರಿ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ನಿರ್ದೇಶಕ ತ್ರಿಶೂಲ್ ಅವರೊಂದಿಗೆ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

  1. ಸಿಲ್ಕ್ ಸಖತ್ ಹಾಟ್ ಸಿನಿಮಾ ಯಾಕೆ ನೋಡಬೇಕು?
  ಈ ಸಿನಿಮಾನ ಎಲ್ಲರೂ ಹಾಟ್ ಎಂದೇ ಭಾವಿಸಿದ್ದಾರೆ. ಹೌದು ಈ ಚಿತ್ರದಲ್ಲಿ ಹಂಡ್ರಡ್ ಪರ್ಸೆಂಟ್ ಹಾಟ್ ಇದೆ. ಅದು ಕೇವಲ ಹಾಡುಗಳಲ್ಲಷ್ಟೇ ಇದೆ. ಒಂದು ಹೆಣ್ಣಿನ ಜೀವನದಲ್ಲಿ ಏನೆಲ್ಲಾ ನಡೆಯುತ್ತದೆ ಎಂಬುದನ್ನು ಹೇಳಲು ಹೊರಟಿದ್ದೇನೆ. ಒಂಭತ್ತು ನವರಸಗಳ ಬಗ್ಗೆ ಗೊತ್ತು. ಆದರೆ ತಮ್ಮ ಚಿತ್ರದಲ್ಲಿ ಹತ್ತು ರಸಗಳನ್ನು ತೋರಿಸಲು ಹೋಗುತ್ತಿದ್ದೇವೆ.

  ಸಂತೋಷ, ದುಃಖ, ಕಾಮಿಡಿ, ಸಸ್ಪೆನ್ಸ್, ಲವ್, ಆಕ್ಷನ್, ರೊಮ್ಯಾನ್ಸ್ ಇದೆಲ್ಲವನ್ನೂ ಸಿನಿಮಾ ನೋಡಿದರೆ ನಿಮಗೇ ಗೊತ್ತಾಗುತ್ತದೆ. ಏಡ್ಸ್ ಬಗ್ಗೆ ಹೇಳಿದ್ದೇನೆ, ನೇತ್ರದಾನ, ದೇಹದಾನ ಮಹತ್ವದ ಬಗ್ಗೆ ಇದೆ. ಸಿಕ್ಕಾಪಟ್ಟೆ ಮೆಸೇಜ್ ಗಳನ್ನು ಕೊಟ್ಟಿದ್ದೇನೆ.


  ಒಬ್ಬ ಮನುಷ್ಯನ ದೇಹದಲ್ಲಿ 72 ಸಾವಿರ ನರಗಳಿರುತ್ತವೆ. ಒಂದು ನರ ತುಂಡಾದರೆ ಏನೆಲ್ಲಾ ತೊಂದರೆಯಾಗುತ್ತದೆ. ಇದೆಲ್ಲವನ್ನೂ ಪಂಚಿಂಗ್ ಡೈಲಾಗ್ಸ್ ನಲ್ಲಿ ಹೇಳಿದ್ದೇವೆ. ಆಗಸ್ಟ್ 2ರಂದು ಸಿನಿಮಾ ನೋಡಿದ ಮೇಲೆ ನಿಮಗೇ ಗೊತ್ತಾಗುತ್ತದೆ. ಚೆನ್ನಾಗಿದೆ ಅಂದ್ರೆ ಇನ್ನೊಂದು ಸಿನಿಮಾ ಮಾಡೋದಕ್ಕೆ ಹೋಗ್ತೀನಿ. ಚೆನ್ನಾಗಿಲ್ಲ ಅಂದ್ರೆ ತಿದ್ಕೋತೀನಿ. ರಿಸಲ್ಟ್ ಗಾಗಿ ಕಾಯುತ್ತಿದ್ದೇನೆ.

  2. ತಮ್ಮ ಚಿತ್ರಕ್ಕೆ ವೀಣಾ ಮಲಿಕ್ ಅವರನ್ನೇ ಯಾಕೆ ಆಯ್ಕೆ ಮಾಡಿದಿರಿ?
  ಹೇಳಿದರೆ ಆಶ್ಚರ್ಯವಾಗುತ್ತದೆ. ವೀಣಾ ಮಲಿಕ್ ಎಂದರೆ ಅವರ ಹೆಸರಲ್ಲೇ ಸರಸ್ವತಿ ಇದ್ದಾರೆ. ಅವರು ನನ್ನ ಸಿನಿಮಾದಲ್ಲಿ ಮಾಡಿದ್ದಾರೆ ಎಂಬ ಕಾರಣಕ್ಕೆ ಈ ಮಾತು ಹೇಳುತ್ತಿಲ್ಲ. ಆ ರೀತಿಯ ಪಾತ್ರ ಮಾಡುವವರು ನಮ್ಮಲ್ಲಿಲ್ಲ. ಸಿನಿಮಾ ನೋಡಿದರೆ ನಿಮಗೇ ಇದು ಮನದಟ್ಟಾಗುತ್ತದೆ. ಈ ಚಿತ್ರಕ್ಕೆ ವೀಣಾ ಮಲಿಕ್ ಅವರೇ ಕರೆಕ್ಟ್ ಅಂತೀರಾ.

  3. ಶ್ರೀರಾಮಸೇನೆಯಂತಹ ಸಂಘಟನೆಗಳಿಂದ ವಿರೋಧ ವ್ಯಕ್ತವಾಗುತ್ತಿದೆಯೇ?
  ಈಗ ತಮಗೂ ಆ ಸುದ್ದಿಗಳೂ ಬರುತ್ತಿವೆ. ಈ ಸಿನಿಮಾ ರಿಲೀಸ್ ಆಗಬಾರದು ಎಂದು ಎಲ್ಲಾ ಥಿಯೇಟರ್ ಗಳಿಗೂ ಮೆಸೇಜ್ ಬರುತ್ತಿದೆ ಎಂದು ತಮಗೂ ಹೇಳುತ್ತಿದ್ದಾರೆ. ಅದು ಎಷ್ಟರಮಟ್ಟಿಗೆ ನಿಜ ಎಂಬುದು ತಮಗೆ ಇನ್ನೂ ಪಕ್ಕಾ ಆಗಿಲ್ಲ.

  ಈ ರೀತಿಯ ಸಂಘಟನೆಗಳು ನಮ್ಮ ದೇಶ ಬಗ್ಗೆ ಹೋರಾಡುತ್ತಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ. ಈ ಬಗ್ಗೆ ನಾನೂ ಹ್ಯಾಟ್ಸಾಫ್ ಹೇಳುತ್ತೇನೆ. ಆದರೆ ಕಲೆ ಮತ್ತು ಕ್ರೀಡೆಗೆ ವಿಚಾರಕ್ಕೆ ಬಂದಾಗ ಇದು ಅನ್ವಯಿಸುವುದಿಲ್ಲ. ಪಾಕಿಸ್ತಾನದವರು ಬಂದು ಇಲ್ಲಿ ಮ್ಯಾಚ್ ಆಡ್ತಾರೆ, ನಮ್ಮವರು ಅಲ್ಲಿ ಹೋಗಿ ಆಡಿಬರುತ್ತಾರೆ. ಇಲ್ಲಿನ ಚಿತ್ರಗಳು ಅಲ್ಲಿ ಪ್ರದರ್ಶನ ಕಾಣುತ್ತವೆ. ಕಲೆ, ಕ್ರೀಡೆಗಳು ಇಬ್ಬರ ನಡುವಿನ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುತ್ತವೆ. ಆ ಒಂದು ದೃಷ್ಟಿಕೋನದಲ್ಲಿ ನೋಡಿದಾಗ ಶ್ರೀರಾಮಸೇನೆಯವರು ಕಲೆ ಮತ್ತು ಕ್ರೀಡೆ ವಿಚಾರದಲ್ಲಿ ಮೂಗು ತೂರಿಸ ಬಾರದು ಎಂಬುದು ನನ್ನ ಒಂದು ಅನಿಸಿಕೆ.

  <ul id="pagination-digg"><li class="next"><a href="/news/story-not-relating-to-silk-smitha-trishul-interview-076208.html">Next »</a></li></ul>

  English summary
  An interview with 'Silk Sakkat Hot' director Trishul. The director shares his thoughts, shooting experience with actress Veena Malik. The film is produced by Venkatappa and stars Veena Malik, making her debut in South India, in the lead role. The supporting cast consists of Akshay, Sana and Srinivasa Murthy.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more