»   » ಈ ವಾರ 'ಸಿಲ್ಕ್ ಸಖತ್ ಹಾಟ್' ಅಮೋಘ ಪ್ರಾರಂಭ

ಈ ವಾರ 'ಸಿಲ್ಕ್ ಸಖತ್ ಹಾಟ್' ಅಮೋಘ ಪ್ರಾರಂಭ

Posted By:
Subscribe to Filmibeat Kannada

ಕನ್ನಡ ಚಿತ್ರರಂಗದಲ್ಲಿ ಬಹಳಷ್ಟು ವಾದ ವಿವಾದಕ್ಕೆ ಹಾಗೂ ಚರ್ಚೆಗೆ ಕಾರಣವಾದ ಚಿತ್ರ 'ಸಿಲ್ಕ್, ಸಖತ್ ಹಾಟ್'. ಅಕ್ಷಯ ಪ್ರೊಡಕ್ಷನ್ ನಿರ್ಮಾಪಕ ಆರ್ ವೆಂಕಟಪ್ಪ ಅವರು ಅಪಾರ ವೆಚ್ಚದಲ್ಲಿ ತಯಾರಿಸಿದ ಚಿತ್ರ ಈ ವಾರ (ಆ.2) ದರ್ಶನ ಭಾಗ್ಯ ಕಾಣುತ್ತಿದೆ. ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವವರು ನಿರ್ದೇಶಕ ತ್ರಿಶೂಲ್.

ಪಾಕಿಸ್ತಾನದ ನಟಿ ವೀಣಾ ಮಲ್ಲಿಕ್ ಅವರ ಮುಖ್ಯ ಆಕರ್ಷಣೆಯ ಈ ಚಿತ್ರವು ಆರಂಭದಿಂದಲೂ ಕುತೂಹಲ ಉಂಟುಮಾಡಿಕೊಳ್ಳುತ್ತಾ ಬರುತ್ತಲೇ ಇದೆ. 'ಸಿಲ್ಕ್ ಸಖತ್ ಹಾಟ್' ಚಿತ್ರಕ್ಕೆ ನಿರ್ದೇಶಕ ತ್ರಿಶೂಲ್ ಮನರಂಜನೆ ಜೊತೆಗೆ ಮನಕಲುಕುವ ಸನ್ನಿವೇಶಗಳನ್ನು ಅವರು ಸಿದ್ಧಪಡಿಸಿಕೊಂಡಿದ್ದಾರೆ.

ಈ ಹಿಂದೆ ಅವರು 'ಬಾಬಾ' ಎಂಬ ಕನ್ನಡ ಸಿನಿಮಾ ನಿರ್ದೇಶಿಸಿದವರು. ನಿರ್ಮಾಪಕ ಆರ್ ವೆಂಕಟಪ್ಪ ಅವರು 'ಗಂಗಾ ಕಾವೇರಿ' ಎಂಬ ಚಿತ್ರ ಅಲ್ಲದೆ 'ವಾರಸ್ದಾರ' ಚಿತ್ರಗಳ ನಿರ್ಮಾಪಕರಾದವರು.

ಅಕ್ಷಯ್ ಹಾಗೂ ವೀಣಾ ಮಲ್ಲಿಕ್ ಮುಖ್ಯ ಪಾತ್ರದಲ್ಲಿ ಇದ್ದಾರೆ. ಸನಾ, ಶಶಿ, ಅವಿನಾಷ್, ಶ್ರೀನಿವಾಸಮೂರ್ತಿ, ಅಚ್ಯುತ್ ಕುಮಾರ್, ಸಾಧು ಕೋಕಿಲ, ನಯನಾ ಕೃಷ್ಣ, ಅನಿತಾ ಭಟ್ ಹಾಗೂ ಇನ್ನಿತರರು ತಾರಾಗಣದಲ್ಲಿ ಇದ್ದಾರೆ.

ಜೆಸ್ಸಿ ಗಿಫ್ಟ್ ಸಂಗೀತ, ಜೈ ಆನಂದ್ ಛಾಯಾಗ್ರಹಣ

ಜೆಸ್ಸಿ ಗಿಫ್ಟ್ ಅವರ ಸಂಗೀತ, ಜೈ ಆನಂದ್ ಅವರ ಛಾಯಾಗ್ರಹಣ, ನಾಗೇಂದ್ರ ಅರಸ್ ಅವರ ಸಂಕಲನ, ಥ್ರಿಲ್ಲರ್ ಮಂಜು ಹಾಗೂ ಕೌರವ ವೆಂಕಟೇಶ್ ಅವರ ಸಾಹಸ, ಹರ್ಷ, ಮದನ್-ಹರಿಣಿ, ಚಾಮರಾಜ್, ಧನು ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕೆ ಒದಗಿಸಿದ್ದಾರೆ.

ಡರ್ಟಿ ಪಿಕ್ಚರ್ ಈಗ ಸಿಲ್ಕ್ ಸಖತ್ ಹಾಟ್

ಈ ಚಿತ್ರಕ್ಕೆ ಮೊದಲು ಡರ್ಟಿ ಪಿಕ್ಚರ್: ಸಿಲ್ಕ್ ಸಖತ್ ಹಾಟ್ ಮಗ ಎಂದಿಡಲಾಗಿತ್ತು. ಏಕಾಏಕಿ ತಮ್ಮ ಡರ್ಟಿ ಪಿಕ್ಚರ್ ಚಿತ್ರದ ಹೆಸರನ್ನಿಟ್ಟರೆ ಬಾಲಿವುಡ್ ನಿರ್ಮಾಪಕಿ ಏಕ್ತಾ ಕಪೂರ್ ಸುಮ್ಮನಿರ್ತಾರಾ. ಆಕೆ ಕೋರ್ಟ್ ನಲ್ಲಿ ದಾವಾ ಹೂಡಿ ಗೆದ್ದರು. ಬಳಿಕ ಚಿತ್ರದ ಶೀರ್ಷಿಕೆ ಸಿಲ್ಕ್ ಸಖತ್ ಹಾಟ್ ಎಂದು ಬದಲಾಯಿತು.

ಈ ಚಿತ್ರಕ್ಕೆ ಸಿಲ್ಕ್ ಸ್ಮಿತಾನೇ ಸ್ಫೂರ್ತಿಯಂತೆ

ಒಂದು ಕಾಲದಲ್ಲಿ ರೇಶ್ಮೆಯಂತಹ ತಮ್ಮ ಮೈಸಿರಿಯಿಂದಲೇ ಪ್ರೇಕ್ಷಕರನ್ನು ಬೆಚ್ಚಗೆ ಮಾಡಿದ್ದ ಸಿಲ್ಕ್ ಸ್ಮಿತಾ ಅವರೇ ಈ ಚಿತ್ರಕ್ಕೆ ಸ್ಫೂರ್ತಿ ಎನ್ನಲಾಗಿದೆ. ಆದರೆ ಹಿಂದಿಯ 'ಡರ್ಟಿ ಪಿಕ್ಚರ್' ಚಿತ್ರಕ್ಕೂ ಇದಕ್ಕೂ ಯಾವುದೇ ಸಂಬಂಧವಿರಲ್ಲ ಎನ್ನುತ್ತಿದ್ದಾರೆ ಚಿತ್ರದ ನಿರ್ದೇಶಕರು.

ಶೃಂಗಾರಭರಿತ ಸನ್ನಿವೇಶಗಳಿಗೆ ಹೆಚ್ಚು ಒತ್ತು

ಶೃಂಗಾರಭರಿತ ಸನ್ನಿವೇಶಗಳಿಗೆ ಹೆಚ್ಚು ಒತ್ತು? ಈ ಚಿತ್ರದ ತಾಜಾ ಸ್ಟಿಲ್ಸ್ ನೋಡುತ್ತಿದ್ದರೆ ಕಥೆಗಿಂತಲೂ ಹೆಚ್ಚಾಗಿ ವೀಣಾ ಅವರ ಶೃಂಗಾರಭರಿತ ಸನ್ನಿವೇಶಗಳಿಗೆ ಹೆಚ್ಚು ಒತ್ತು ನೀಡಲಾಗಿರುವುದು ಸ್ಪಷ್ಟವಾಗುತ್ತದೆ.

ಅಯ್ಯೋ ನಾನು ಹಿಂದಿಯ ಡರ್ಟಿ ಪಿಕ್ಚರ್ ನೋಡಿಲ್ಲ

ತಮ್ಮ ಪಾತ್ರ ನಿಮ್ಮನ್ನು ಆವರಿಸಿಕೊಳ್ಳುತ್ತದೆ ಸಿಲ್ಕ್ ಸಖತ್ ಹಾಟ್ ಚಿತ್ರದ ಬಗ್ಗೆ ಮಾತನಾಡಿರುವ ವೀಣಾ, "ಚಿತ್ರವನ್ನು ನೀವು ನೋಡಿ. ತಮ್ಮ ಪಾತ್ರ ನಿಮ್ಮನ್ನು ಆವರಿಸಿಕೊಳ್ಳದೆ ಬಿಡದು. ಅಷ್ಟೊಂದು ಪರಿಣಾಮಕಾರಿಗಿರುತ್ತದೆ" ಎಂದಿದ್ದಾರೆ. ಆದರೆ ತಾವು ಹಿಂದಿಯ 'ಡರ್ಟಿ ಪಿಕ್ಚರ್' ನೋಡಿಲ್ಲ ಎಂದಿದ್ದಾರೆ.

ತಮ್ಮ ಅಭಿನಯ ಸೊಗಸಾಗಿರುತ್ತದೆ

ವಿದ್ಯಾ ಬಾಲನ್ ಅಭಿನಯಕ್ಕಿಂತಲೂ ಸೂಪರ್ ಆದರೆ ವಿದ್ಯಾ ಬಾಲನ್ ಅವರ ಅಭಿನಯ ಹೇಗೋ ಏನೋ ತಮಗೆ ಗೊತ್ತಿಲ್ಲ. ಚಿತ್ರದಲ್ಲಿ ತಮ್ಮ ಅಭಿನಯವಂತೂ ಸೊಗಸಾಗಿರುತ್ತದೆ ಎಂದಿದ್ದಾರೆ.

ಸಿಲ್ಕ್ ಸ್ಮಿತಾ ಒಬ್ಬ ಅದ್ಭುತ ಕಲಾವಿದೆ

ಸಿಲ್ಕ್ ಸ್ಮಿತಾ ಅದ್ಭುತ ಕಲಾವಿದೆ; ವೀಣಾ ಸಿಲ್ಕ್ ಸ್ಮಿತಾ ಅವರ ಜೀವನ ಬಗ್ಗೆ ಓದಿ ತಿಳಿದುಕೊಂಡಿದ್ದೇನೆ. ಆಕೆ ಒಬ್ಬ ಅದ್ಭುತ ಕಲಾವಿದೆ ಎಂದಿದ್ದಾರೆ ವೀಣಾ ಮಲಿಕ್.

ಎ ಗ್ರೇಡ್ ಚಿತ್ರವೋ ಇದು ಬಿ ಗ್ರೇಡ್ ಚಿತ್ರವೋ

ಇದೇನು ಬಿ ಗ್ರೇಡ್ ಚಿತ್ರವೇ? ಇಷ್ಟೊತ್ತು ನೀವು ವೀಣಾ ಎಲ್ಲಾ ಫೋಟೋಗಳನ್ನು ನೋಡಿದ್ದೀರಿ. ಆಕೆಯ ಶೃಂಗಾರಭರಿತ ಫೋಟೋಗಳನ್ನು ನೋಡಿದ ಮೇಲೆ ಕಡೆಗೂ ಒಂದು ಪ್ರಶ್ನೆಗೆ ಕಾಡುತ್ತದೆ. ಇದೇನು ಬಿ ಗ್ರೇಡ್ ಸಿನಿಮಾನಾ ಎಂದು.

ಸೆನ್ಸಾರ್ ನಲ್ಲಿ ಎ ಸರ್ಟಿಫಿಕೇಟ್ ಪಡೆದ ಚಿತ್ರ

ಎ ಗ್ರೇಡ್ ಚಿತ್ರವಂತೂ ಹೌದು ಇದು ಬಿ ಗ್ರೇಡ್ ಚಿತ್ರವೋ ಏನೋ ಗೊತ್ತಿಲ್ಲ. ಆದರೆ 'ಎ' (ವಯಸ್ಕರ ಚಿತ್ರ) ಗ್ರೇಡ್ ಚಿತ್ರವಂತೂ ಹೌದು ಎಂಬ ಡೌಟು ಬರುತ್ತದೆ. ಸೆನ್ಸಾರ್ ಮಂಡಳಿ ಚಿತ್ರಕ್ಕೆ ಎ ಸರ್ಟಿಫಿಕೇಟ್ ನೀಡಿದೆ.

English summary
Pakistani actress Veena Malik's debut Kannada film 'Silk', tagline 'Sakkat Hot' slated for release on 2nd August. The film has written and directed by Trishul. The film is produced by Venkatappa. The supporting cast consists of Akshay, Sana and Srinivasa Murthy.
Please Wait while comments are loading...