»   » ವೀಣಾ ಮಲಿಕ್ 'ಸಿಲ್ಕ್' ಸಖತ್ ಆಟಕ್ಕೆ ನೂರು ದಿನ

ವೀಣಾ ಮಲಿಕ್ 'ಸಿಲ್ಕ್' ಸಖತ್ ಆಟಕ್ಕೆ ನೂರು ದಿನ

Posted By:
Subscribe to Filmibeat Kannada

ಯಾವ ಚಿತ್ರ ಶತಕ ಬಾರಿಸುತ್ತದೆ, ಇನ್ಯಾವ ಚಿತ್ರ ಮಕಾಡೆ ಮಲಗುತ್ತದೆ ಎಂಬುದನ್ನು ಹೇಳುವುದು ಕಷ್ಟ. ತೋಪಾಗುತ್ತದೆ ಎಂದು ಭಾವಿಸಿದ ಅದೆಷ್ಟೋ ಚಿತ್ರಗಳು ಟಾಪ್ ಗೇರುತ್ತವೆ. ಸೂಪರ್ ಡೂಪರ್ ಹಿಟ್ ಆಗುತ್ತದೆ ಎಂದ ಚಿತ್ರಗಳು ಫ್ಲಾಪ್ ಆಗುತ್ತವೆ. ಪ್ರೇಕ್ಷಕರ ಮರ್ಮ ಯಾವೋನಿಗ್ ಗೊತ್ತು!

'ಸಿಲ್ಕ್' ಸಖತ್ ಹಾಟ್ ಎಂಬ ಚಿತ್ರ ಶತದಿನೋತ್ಸವ ಪೂರೈಸುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಈ ಚಿತ್ರವನ್ನು ವಿಮರ್ಶಕರೂ ಹಾಡಿಹೊಗಳಲಿಲ್ಲ. ಹೋಗಲಿ ಹೇಳಿಕೊಳ್ಳುವಂತಹ ಸ್ಟಾರ್ ಗಳೂ ಇಲ್ಲ. ಇಲ್ಲಿ ಮೊದಲ ಸೀನ್ ನಿಂದ ಕೊನೆಯ ಸೀನ್ ತನಕ ವೀಣಾ ಮಲಿಕ್ ಮಯ.

Veena Malik Silk sakkat hot

ಚಿತ್ರದಲ್ಲಿ ಕಥೆ, ಸಂಭಾಷಣೆ ಇಲ್ಲದಿದ್ದರೆ ಏನಂತೆ ಪಡ್ಡೆಗಳಿಗೆ ಬೇಕಾದ ಸರಕುಗಳು ಬೇಜಾನ್ ಇವೆ. ಇದೇ ಚಿತ್ರದ ಯಶಸ್ಸಿಗೆ ಕಾರಣ ಎನ್ನುತ್ತಾರೆ ಸಿನಿಮಾದ ಯಶಸ್ವಿ ತಂತ್ರಗಳನ್ನು ಬಲ್ಲವರು. ಬೆಂಗಳೂರಿನ ಕೈಲಾಶ್ ಚಿತ್ರಮಂದಿರಲ್ಲಿ ಚಳಿಗಾಲ ಬರುತ್ತಿದ್ದರೂ 'ಸಿಲ್ಕ್' ಇನ್ನೂ ಹಾಟ್ ಆಗಿಯೇ ಇದ್ದಾಳೆ.

ಒಂದಷ್ಟು ಮನರಂಜನೆ, ಇನ್ನೊಂದಿಷ್ಟು ಮನಕಲುಕುವ ಸನ್ನಿವೇಶಗಳನ್ನು ಬೆರೆಸಿ ನಿರ್ದೇಶಕ ತ್ರಿಶೂಲ್ ಅವರು ತೆರೆಗೆ ತಂದಿದ್ದರು. ಆರ್ ವಿ ವೆಂಕಟಪ್ಪ ಚಿತ್ರಕ್ಕೆ ಭರ್ಜರಿ ಖರ್ಚು ಮಾಡಿ ತಮ್ಮ ಪುತ್ರ ಅಕ್ಷಯ್ ಅವರನ್ನು ಹೀರೋ ಮಾಡಿದ್ದರು. [ಸಿಲ್ಕ್ ಸಖತ್ ಹಾಟ್ ಚಿತ್ರ ವಿಮರ್ಶೆ]

ಪಾತ್ರವರ್ಗದಲ್ಲಿ ಸನಾ, ಶಶಿ, ಅವಿನಾಷ್, ಶ್ರೀನಿವಾಸಮೂರ್ತಿ, ಅಚ್ಯುತ್ ಕುಮಾರ್, ಸಾಧು ಕೋಕಿಲ, ನಯನಾ ಕೃಷ್ಣ, ಅನಿತಾ ಭಟ್ ಹಾಗೂ ಇನ್ನಿತರರು ತಾರಾಗಣದಲ್ಲಿ ಇದ್ದಾರೆ. ಜೆಸ್ಸಿ ಗಿಫ್ಟ್ ಅವರ ಸಂಗೀತ, ಜೈ ಆನಂದ್ ಅವರ ಛಾಯಾಗ್ರಹಣ, ನಾಗೇಂದ್ರ ಅರಸ್ ಅವರ ಸಂಕಲನ, ಥ್ರಿಲ್ಲರ್ ಮಂಜು ಹಾಗೂ ಕೌರವ ವೆಂಕಟೇಶ್ ಅವರ ಸಾಹಸ, ಹರ್ಷ, ಮದನ್-ಹರಿಣಿ, ಚಾಮರಾಜ್, ಧನು ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕೆ ಒದಗಿಸಿದ್ದಾರೆ. (ಒನ್ಇಂಡಿಯಾ ಕನ್ನಡ)

English summary
Actress Veena Malik lead Kannada film Silk Sakkat Hot successfully completes 100 days run in Bangalore's Kailash theatre. The film opened to a good response at the box office also.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada