»   » ವೀಣಾ ಮಲಿಕ್ ಕನ್ನಡ ಚಿತ್ರಕ್ಕೆ ವಯಸ್ಕರ ಸರ್ಟಿಫಿಕೇಟ್

ವೀಣಾ ಮಲಿಕ್ ಕನ್ನಡ ಚಿತ್ರಕ್ಕೆ ವಯಸ್ಕರ ಸರ್ಟಿಫಿಕೇಟ್

Posted By:
Subscribe to Filmibeat Kannada

ಪಾಕಿಸ್ತಾನದ ಹಾಟ್ ಚೆಲುವೆ ವೀಣಾ ಮಲಿಕ್ ಅಭಿನಯದ ಕನ್ನಡ ಚಿತ್ರ 'ಸಿಲ್ಕ್ ಸಖತ್ ಹಾಟ್' ಚಿತ್ರ ಸೆನ್ಸಾರ್ ನಲ್ಲಿ ಪಾಸಾಗಿದೆ. ಈ ಚಿತ್ರಕ್ಕೆ ಪ್ರಾದೇಶಿಕ ಸೆನ್ಸಾರ್ ಮಂಡಳಿ ವಯಸ್ಕರ ಸರ್ಟಿಫಿಕೇಟ್ ನೀಡಿದೆ. ಅಂದರೆ ಎ ಸರ್ಟಿಫಿಕೇಟ್ ನೀಡಿದೆ.

ಇದು ವೀಣಾ ಮಲಿಕ್ ಅಭಿನಯದ ಚೊಚ್ಚಲ ಕನ್ನಡ ಚಿತ್ರ. ಈ ಚಿತ್ರದ ಮೂಲಕ ಅಕ್ಷಯ್ ನಾಯಕ ನಟರಾಗಿ ಕನ್ನಡಕ್ಕೆ ಪರಿಚಯವಾಗುತ್ತಿದ್ದಾರೆ. ಸಾಕಷ್ಟು ಬಂಡವಾಳ ಸುರಿದು ವೀಣಾರನ್ನು ಕನ್ನಡಕ್ಕೆ ಕರೆತಂದ ಸಾಹಸವನ್ನು ನಿರ್ಮಾಪಕ ವೆಂಕಟಪ್ಪ ಮಾಡಿದ್ದರು.

ಶೀಘ್ರದಲ್ಲೇ ಮಾರುಕಟ್ಟೆಗೆ ಆಡಿಯೋ

ಶೀಘ್ರದಲ್ಲೇ ಈ ಚಿತ್ರದ ಆಡಿಯೋ ಮಾರುಕಟ್ಟೆಗೆ ದಾಂಗುಡಿ ಇಡಲಿದೆ. ಈ ಚಿತ್ರಕ್ಕೆ ಮೊದಲು ಡರ್ಟಿ ಪಿಕ್ಚರ್: ಸಿಲ್ಕ್ ಸಖತ್ ಹಾಟ್ ಮಗ ಎಂದಿಡಲಾಗಿತ್ತು. ಏಕಾಏಕಿ ತಮ್ಮ ಡರ್ಟಿ ಪಿಕ್ಚರ್ ಚಿತ್ರದ ಹೆಸರನ್ನಿಟ್ಟರೆ ಬಾಲಿವುಡ್ ನಿರ್ಮಾಪಕಿ ಏಕ್ತಾ ಕಪೂರ್ ಸುಮ್ಮನಿರ್ತಾರಾ. ಆಕೆ ಕೋರ್ಟ್ ನಲ್ಲಿ ದಾವಾ ಹೂಡಿ ಗೆದ್ದರು. ಬಳಿಕ ಚಿತ್ರದ ಶೀರ್ಷಿಕೆ ಸಿಲ್ಕ್ ಸಖತ್ ಹಾಟ್ ಎಂದು ಬದಲಾಯಿತು.

ಫೋಟೋಗಳು ಒಂದಕ್ಕಿಂತ ಒಂದು ಸೂಪರ್

ಫೋಟೋಗಳು ಒಂದಕ್ಕಿಂತ ಒಂದು ಹಾಟ್ ಆಗಿದ್ದು, ಪಡ್ಡೆಗಳು ಪಲ್ಟಿ ಹೊಡೆಯುವುದು ಗ್ಯಾರಂಟಿ ಎಂಬಂತಿವೆ. ಮುಂದಿವೆ ನೋಡಿ ವೀಣಾ ಮೈನವಿರೇಳಿಸುವ ಚಿತ್ರಗಳು.

ವೀಣಾ ಜೊತೆ ಅಕ್ಷಯ್ ರೊಮ್ಯಾನ್ಸ್

ವೀಣಾ ಮಲಿಕ್ ಜೊತೆ ಅಕ್ಷಯ್ ರೋಮ್ಯಾನ್ಸ್ ತ್ರಿಶೂಲ್ ನಿರ್ದೇಶಿಸುತ್ತಿರುವ ಈ ಚಿತ್ರವನ್ನು ಅಕ್ಷಯ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ವೆಂಕಟಪ್ಪ ನಿರ್ಮಿಸುತ್ತಿದ್ದಾರೆ. ವೀಣಾ ಮಲಿಕ್ ಜೊತೆ ರೋಮ್ಯಾನ್ಸ್ ಮಾಡುತ್ತಿರುವವರು ನಟ ಅಕ್ಷಯ್. ಸನಾ ಖಾನ್, ಶ್ರೀನಿವಾಸಮೂರ್ತಿ ಚಿತ್ರದಲ್ಲಿದ್ದಾರೆ.

ಕಥೆಗೆ ಸಿಲ್ಕ್ ಸ್ಮಿತಾ ಅವರೇ ಸ್ಫೂರ್ತಿ

ಕಥೆಗೆ ಸಿಲ್ಕ್ ಸ್ಮಿತಾ ಅವರೇ ಸ್ಫೂರ್ತಿಯಂತೆ ಒಂದು ಕಾಲದಲ್ಲಿ ರೇಶ್ಮೆಯಂತಹ ತಮ್ಮ ಮೈಸಿರಿಯಿಂದಲೇ ಪ್ರೇಕ್ಷಕರನ್ನು ಬೆಚ್ಚಗೆ ಮಾಡಿದ್ದ ಸಿಲ್ಕ್ ಸ್ಮಿತಾ ಅವರೇ ಈ ಚಿತ್ರಕ್ಕೆ ಸ್ಫೂರ್ತಿ ಎನ್ನಲಾಗಿದೆ. ಆದರೆ ಹಿಂದಿಯ 'ಡರ್ಟಿ ಪಿಕ್ಚರ್' ಚಿತ್ರಕ್ಕೂ ಇದಕ್ಕೂ ಯಾವುದೇ ಸಂಬಂಧವಿರಲ್ಲ ಎನ್ನುತ್ತಿದ್ದಾರೆ ಚಿತ್ರದ ನಿರ್ದೇಶಕರು.

ಶೃಂಗಾರಭರಿತ ಸನ್ನಿವೇಶಗಳಿಗೆ ಹೆಚ್ಚು ಒತ್ತು

ಶೃಂಗಾರಭರಿತ ಸನ್ನಿವೇಶಗಳಿಗೆ ಹೆಚ್ಚು ಒತ್ತು? ಈ ಚಿತ್ರದ ತಾಜಾ ಸ್ಟಿಲ್ಸ್ ನೋಡುತ್ತಿದ್ದರೆ ಕಥೆಗಿಂತಲೂ ಹೆಚ್ಚಾಗಿ ವೀಣಾ ಅವರ ಶೃಂಗಾರಭರಿತ ಸನ್ನಿವೇಶಗಳಿಗೆ ಹೆಚ್ಚು ಒತ್ತು ನೀಡಲಾಗಿರುವುದು ಸ್ಪಷ್ಟವಾಗುತ್ತದೆ.

ಹಮಾರಾ ಸಾಮ್ನೆ ವಿದ್ಯಾ ಕುಚ್ ನಹಿ

ವಿದ್ಯಾ ಬಾಲನ್ ಅಭಿನಯಕ್ಕಿಂತಲೂ ಸೂಪರ್ ಆದರೆ ವಿದ್ಯಾ ಬಾಲನ್ ಅವರ ಅಭಿನಯ ಹೇಗೋ ಏನೋ ತಮಗೆ ಗೊತ್ತಿಲ್ಲ. ಚಿತ್ರದಲ್ಲಿ ತಮ್ಮ ಅಭಿನಯವಂತೂ ಸೊಗಸಾಗಿರುತ್ತದೆ ಎಂದಿದ್ದಾರೆ.


ಸೆನ್ಸಾರ್ ನಿಂದ ಈ ಚಿತ್ರ ಪಾಸಾಗುತ್ತದೋ ಇಲ್ಲವೋ ಎಂದು ವೆಂಕಟಪ್ಪ ಕಂಗಾಲಾಗಿದ್ದರು. ಈಗ ತಮ್ಮ ಚಿತ್ರಕ್ಕೆ 'ಎ' ಸರ್ಟಿಫಿಕೇಟ್ ಸಿಕ್ಕಿದ್ದು ಅವರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಜುಲೈನಲ್ಲಿ ಚಿತ್ರವನ್ನು ತೆರೆಗೆ ತರಲು ಸಿದ್ಧತೆಗಳು ನಡೆಯುತ್ತಿವೆ. ಸಿಲ್ಕ್ ಸಖತ್ ಹಾಟ್ ಗ್ಯಾಲರಿ.

ಈ ಚಿತ್ರದ ಹಾಟ್ ಪೋಸ್ಟರ್ ಗಳನ್ನು, ವೀಣಾ ಮಲಿಕ್ ಅವರ ಮತ್ತೇರಿಸುವ ಭಂಗಿಗಳನ್ನು ನೋಡಿದವರು ಖಂಡಿತ 'ಎ' ಸರ್ಟಿಫಿಕೇಟ್ ಚಿತ್ರ ಎಂದುಕೊಂಡಿದ್ದರು. ಅವರ ನಿರೀಕ್ಷೆ ಸುಳ್ಳಾಗಿಲ್ಲ. ಈ ಚಿತ್ರ ಹಿಂದಿಯ ಡರ್ಟಿ ಪಿಕ್ಚರ್ ರೀಮೇ ಅಲ್ಲ. ಆದರೆ ಆ ಚಿತ್ರದಿಂದ ಸ್ಫೂರ್ತಿ ಪಡೆದು ತೆರೆಗೆ ತರಲಾಗಿದೆ.

English summary
Veena Malik's Silk Sakkath Hot Maga, which was earlier called as Dirty Picture Silk Sakkath Hot, as expected, has bagged 'A' certificate. The film was viewed by the Censor Board members recently.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada