»   » ಸಿಲ್ಕ್ ಬೋರ್ಡ್ ಟ್ರಾಫಿಕ್ ನಲ್ಲಿ ಆದ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ

ಸಿಲ್ಕ್ ಬೋರ್ಡ್ ಟ್ರಾಫಿಕ್ ನಲ್ಲಿ ಆದ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ

Posted By:
Subscribe to Filmibeat Kannada

ಬೆಂಗಳೂರು ಟ್ರಾಫಿಕ್ ಮಯವಾಗಿದೆ. ಬೆಳ್ಳಗೆ ಎದ್ದು ಎಲ್ಲಿಗಾದರು ಹೋಗಬೇಕು ಅಂದರೆ ಉದ್ದದ ಟ್ರಾಫಿಕ್ ಜಾಮ್ ನೆನಪಾಗುತ್ತದೆ. ಅದರಲ್ಲಿಯೂ ಸಿಲ್ಕ್ ಬೋರ್ಡ್ ಟ್ರಾಫಿಕ್ ಜಾಮ್ ನಲ್ಲಿ ಇಡೀ ಬೆಂಗಳೂರಿಗೆ ಫೇಮಸ್ ಆಗಿದೆ. ಪ್ರತಿದಿನ ಸಿಲ್ಕ್ ಬೋರ್ಡ್ ಸಿಗ್ನಲ್ ದಾಟುವುದು ಅಂದರೆ ಒಂದು ಯುದ್ಧ ಗೆದ್ದಂತೆ.

ಹೀಗಿರುವ ಈ ಸಿಲ್ಕ್ ಬೋರ್ಡ್ ಮೇಲೆ ಎಲ್ಲರಿಗೆ ಕೋಪ ಇರುತ್ತದೆ. ಆದರೆ ಅದೇ ಸಿಲ್ಕ್ ಬೋರ್ಡ್ ಟ್ರಾಫಿಕ್ ಈಗ ಇಬ್ಬರು ಪ್ರೇಮಿಗಳನ್ನು ಒಂದು ಮಾಡಿದೆ. ಕನ್ನಡದಲ್ಲಿ ಇದೀಗ ಒಂದು ಹೊಸ ಕಿರುಚಿತ್ರ ಬಿಡುಗಡೆಯಾಗಿದೆ. 'ಸಿಲ್ಕ್ ಬೋರ್ಡ್' ಎಂಬ ಈ ಶಾರ್ಟ್ ಫಿಲ್ಮ್ ಗೆ ಯೂಟ್ಯೂಬ್ ನಲ್ಲಿ ದೊಡ್ಡ ಪ್ರತಿಕ್ರಿಯೆ ವ್ಯಕ್ತವಾಗಿದೆ. 2 ಲಕ್ಷಕ್ಕೂ ಅಧಿಕ ಜನರು ಇದನ್ನು ನೋಡಿದ್ದಾರೆ.

ನಮ್ಮ ಮೆಟ್ರೋ: ಸಿಲ್ಕ್ ಬೋರ್ಡ್-ಕೆಆರ್ ಪುರ ಮಾರ್ಗಕ್ಕೆ ಶೀಘ್ರ ಟೆಂಡರ್

ಬೆಂಗಳೂರಿನಲ್ಲಿ ಇರುವ ಟ್ರಾಫಿಕ್ ಜಾಮ್ ಎಂತಹುದು ಎಂಬುದನ್ನು ಹಾಸ್ಯಮಯವಾಗಿ ಇದರಲ್ಲಿ ತೋರಿಸಿದ್ದಾರೆ.ಸಿಲ್ಕ್ ಬೋರ್ಡ್ ಟ್ರಾಫಿಕ್ ನಲ್ಲಿ ಆಕಸ್ಮಿಕವಾಗಿ ಬೇಟಿಯಾಗುವ ಒಬ್ಬ ಹುಡುಗ ಹುಡುಗಿ ಟ್ರಾಫಿಕ್ ನಲ್ಲಿಯೇ ಪ್ರೇಮಿಗಳಾಗಿ ಮದುವೆ ಕೂಡ ಮಾಡಿಕೊಳ್ಳುತ್ತಾರೆ.

Silkboard a traffic love story short film released.

ಅಂದಹಾಗೆ, ಸಂತೋಷ್ ಜಿ ಈ ಕಿರುಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ರಾಕೇಶ್ ಮತ್ತು ಸುವಿನ್ ಟ್ರಾಫಿಕ್ ಪ್ರೇಮಿಗಳಾಗಿ ಕಾಣಿಸಿಕೊಂಡಿದ್ದಾರೆ. ಗುರುಪ್ರಸಾದ್ ಸ್ವಾಮಿ ಕ್ಯಾಮರಾ ಹಿಡಿದಿದ್ದಾರೆ. 11 ನಿಮಿಷದ ಈ ಕಿರುಚಿತ್ರ ತುಂಬ ತಮಾಷೆಯಾಗಿದೆ.

English summary
SILK BOARD is a unique love story of two people who meet at the infamous Bangalore SILK BOARD traffic signal and how the most annoying of all traffic jams helps them bond and begin the journey of a lifetime together.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X