For Quick Alerts
  ALLOW NOTIFICATIONS  
  For Daily Alerts

  ಸಿಂಪಲ್ಲಾಗಿ ಯುವಕರ ತಲೆಕೆಡಿಸಿರುವ ಚಿತ್ರ

  By Rajendra
  |

  ಲವ್ ಸ್ಟೋರಿಯನ್ನು ಇಷ್ಟೆಲ್ಲಾ ಸಿಂಪಲ್ಲಾಗ್ ಹೇಳ್ತಾರೆ ಅಂದ್ರೆ ಯಾರು ನಂಬ್ತಾರೆ. ಲವ್ ಸ್ಟೋರಿ ಅಂದ್ರೆ ಸುಮ್ಮನೇನಾ. ಜಗಳ, ಕಿತ್ತಾಟ, ರಂಪಾಟ ಏನೂ ಇರಲ್ವಾ? ಕಥೆ ಅಷ್ಟೊಂದು ಸಿಂಪಲ್ ಆಗಿ ನಡೆದು ಹೋಗುತ್ತಾ? ಹೌದು ಅಂತಿದ್ದಾರೆ ಸುನಿ.

  ಚಿತ್ರವೊಂದಕ್ಕೆ ಕೇವಲ ಪ್ರಚಾರ ಕೊಟ್ಟರಷ್ಟೇ ಸಾಲದು. ಮನ ಮುಟ್ಟುವಂತೆ, ಯುವಕರನ್ನು ಸೆಳೆಯುವಂತೆ, ಅವರ ಮನಸ್ಸಿಗೆ ನಾಟುವಂತೆ ವಿಭಿನ್ನವಾಗಿಯೂ ಮಾಡಬೇಕಾಗುತ್ತದೆ. ಆ ರೀತಿ ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡಿದ ಚಿತ್ರ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ.

  ಶೀರ್ಷಿಕೆ ನೋಡಿದರೆ ಸಿಕ್ಕಪಾಟ್ಟೆ ಲೆಂತಿ ಅನ್ನಿಸುತ್ತದೆ. ಆದರೆ ಟ್ರೇಲರ್ ನೋಡಿದರೆ ಒಂದ್ ಕಿತ ಈ ಸಿನಿಮಾನ ಯಾಕ್ ನೋಡಬಾರದು ಅಂತಲೂ ಅನ್ನಿಸುತ್ತದೆ. ಸಾಲದಕ್ಕೆ ಚಿತ್ರದ ಹಾಡುಗಳು ಈಗಾಗಲೆ ಯುವಕರ ರಿಂಗ್ ಟೋನ್, ಕಾಲರ್ ಟ್ಯೂನ್ ಗಳಾಗಿ ಬದಲಾಗಿವೆ. ಬಿ.ಜೆ.ಭರತ್ ಅವರ ಸಂಗೀತ ಯುವ ಜನರ ಕಿವಿಗೆ ಹತ್ತಿರವಾಗಿದೆ.

  ಇನ್ನು ಚಿತ್ರದ ನಿರ್ದೇಶಕ ಸುನಿ ಅಲಿಯಾಸ್ ಸುನಿಲ್ ಅವರ ಚೊಚ್ಚಲ ಪ್ರಯತ್ನವಿದು. ಹೇಮಂತ್ ನಿರ್ಮಿಸಿರುವ ಚಿತ್ರಕ್ಕೆ ಮನೋಹರ್ ಜೋಷಿ ಛಾಯಾಗ್ರಹಣವಿದೆ. ಚಿತ್ರದ ಟ್ರೇಲರ್ ಗಳು ಆರಂಭದಿಂದಲೂ ಕುತೂಹಲ ಕೆರಳಿಸುತ್ತಾ ಬಂದಿವೆ. ತುಘ್ಲಕ್ ಖ್ಯಾತಿಯ ರಕ್ಷಿತ್ ಶೆಟ್ಟಿ ಹಾಗೂ ಶ್ವೇತಾ ಶ್ರೀವಾತ್ಸವ್ ಚಿತ್ರದ ನಾಯಕ ನಾಯಕಿ.

  ಇಷ್ಟಕ್ಕೂ ಈ ಚಿತ್ರ ಕುತೂಹಲ ಕೆರಳಿಸಿರುವುದು ನಾನಾ ಕಾರಣಗಳಿಗಾಗಿ. ಚಿತ್ರದಲ್ಲಿರುವುದು ಡಬಲ್ ಮೀನಿಂಗ್ ಡೈಲಾಗ್ ಗಳೋ ಅಥವಾ ವಿಭಿನ್ನ ಡೈಲಾಗ್ ಗಳೋ ಎಂಬುದು ಒಂದು ಕಾರಣವಾಗಿದೆ. ಇದೊಂದು ಸರಳ ಪ್ರೇಮ ಕಥೆಯಾಗಿದ್ದು ಅದನ್ನೇ ನಿರ್ದೇಶಕರು ಡಿಫರೆಂಟ್ ಆಗಿ ಹೇಳಿದ್ದಾರೆ. ಅದೇನು ಎಂಬುದು ಗೊತ್ತಾಗಬೇಕಾದರೆ ಚಿತ್ರ ನೋಡಲೇಬೇಕು.

  ಮಾರ್ಚ್ 8ಕ್ಕೆ ಚಿತ್ರದ ಹಣೆಬರಹ

  ಮಾರ್ಚ್ 8ಕ್ಕೆ ಚಿತ್ರದ ಹಣೆಬರಹ

  ಚಿತ್ರದ ಒಂದು ಹಾಡನ್ನು ಸೆಕೆಂಡಿಗೆ120 ಪ್ರೇಮ್‌ಗಳು ಚಲಿಸುವ ಕ್ಯಾಮೆರಾದಲ್ಲಿ ಸೆರೆಹಿಡಿದಿರುವುದು ವಿಶೇಷ. ಚಿತ್ರದ ಟ್ರೇಲರ್ 8 ನಿಮಿಷದಷ್ಟು ಸುದೀರ್ಘವಾಗಿರುವುದು ಇನ್ನೊಂದು ಝಲಕ್. ಇಷ್ಟೆಲ್ಲಾ ಕ್ರೇಜ್ ಹುಟ್ಟಿಸಿರುವ ಈ ಚಿತ್ರ ಹಣೆಬರಹ ಮಾರ್ಚ್ 8ರಂದು ಗೊತ್ತಾಗಲಿದೆ.

  ಒನ್ಇಂಡಿಯಾ ಕನ್ನಡದಲ್ಲಿ ವಿಮರ್ಶೆ ನಿರೀಕ್ಷಿಸಿ

  ಒನ್ಇಂಡಿಯಾ ಕನ್ನಡದಲ್ಲಿ ವಿಮರ್ಶೆ ನಿರೀಕ್ಷಿಸಿ

  ನಿಮ್ಮ ಅಚ್ಚುಮೆಚ್ಚಿನ ಒನ್ಇಂಡಿಯಾ ಕನ್ನಡ ತಾಣದಲ್ಲಿ ಚಿತ್ರದ ವಿಮರ್ಶೆಯನ್ನು ನಿರೀಕ್ಷಿಸಿ. ಚಿತ್ರದ ನಿರ್ದೇಶಕರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಹೆಣೆದಿದ್ದಾರೆ. ಚಿತ್ರದಲ್ಲಿನ ಕೆಲವೊಂದು ಡೈಲಾಗ್ ಗಳು ಇಲ್ಲಿವೆ ಓದಿ. ಅವು ಡಬಲ್ ಮೀನಿಂಗ್ ಅನ್ನಿಸಿದರೆ ನಾವು ಜವಾಬ್ದಾರರಲ್ಲ.

  ಗಳಿಗೆ ಸಿದ್ಧ ಒಳಗೊಳಗೆ ಮಾಡ್ದಾ ಅಂದಂಗೆ

  ಗಳಿಗೆ ಸಿದ್ಧ ಒಳಗೊಳಗೆ ಮಾಡ್ದಾ ಅಂದಂಗೆ

  ಗಳಿಗೆ ಸಿದ್ಧ ಒಳಗೊಳಗೆ ಮಾಡ್ದಾ ಅಂದಂಗೆ. ಇನ್ನೊಂದು ಡೈಲಾಗ್ ಹಿಂಗಿದೆ...ಕೈ ಬಿಡ್ತೀಯಾ, ನಿನ್ನಲ್ಲೇ ಕೇಳ್ತಾ ಇರೋದು, ಕೈ ಬಿಡ್ತೀಯಾ... ಹಲೋ, ಹಿಡ್ಕೊಂಡಿರೋ ಕೈ ಬಿಡ್ತೀಯಾಂತಾ...

  ಹುಡುಗೀರು ಬ್ಯಾಕಲ್ಲಿ ತುಂಬಾ ಸುಂದರ

  ಹುಡುಗೀರು ಬ್ಯಾಕಲ್ಲಿ ತುಂಬಾ ಸುಂದರ

  ಹುಡುಗೀರು ಬ್ಯಾಕಲ್ಲಿ ತುಂಬಾ ಸುಂದರವಾಗಿ ಕಾಣ್ತಾರೆ.., ಆದ್ರೆ ಪ್ರೆಂಟಲ್ಲಿ ಏನೂ ಇರಲ್ಲ...!

  ಕೂತ್ಕೊಂಡು ರಂಗೋಲ್ಲಿ ಹಾಕೋ ನಿನಗೇ...

  ಕೂತ್ಕೊಂಡು ರಂಗೋಲ್ಲಿ ಹಾಕೋ ನಿನಗೇ...

  ಕೂತ್ಕೊಂಡು ರಂಗೋಲಿ ಹಾಕೋ ನಿನಗೇ ಇಷ್ಟು ಪೊಗರಿರಬೇಕಾದರೆ ನಿಂತ್ಕೊಂಡು ಧಮ್ ಹೊಡೆಯೋ ನನಗೆಷ್ಟಿರ ಬೇಡ...

  English summary
  Kannada film 'Simple aag Ondu Love Story' preview. The film has Rakshit Shetty and Shwetha Srivatsav in lead roles. Directed by Sunil Kumar, the film created waves after the trailer of the film was released on a video-sharing website.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X