For Quick Alerts
  ALLOW NOTIFICATIONS  
  For Daily Alerts

  ಅಚ್ಚರಿ ಗೂಡಾದ 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ'

  |

  ನವನಿರ್ದೇಶಕ ಸುನಿಲ್ ನಿರ್ಮಾಣ ಹಾಗೂ ನಿರ್ದೇಶನದ 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಚಿತ್ರದ ಚಿತ್ರೀಕರಣವು ಭರದಿಂದ ಸಾಗುತ್ತಿದೆ. ಈ ಚಿತ್ರವು ಮಳೆಗಾಲ, ಚಳಿಗಾಲ ಹಾಗೂ ಬೇಸಿಗೆಕಾಲ ಹೀಗೆ ಮೂರು ಕಾಲಗಳ ಆಧಾರ ಮೇಲೆ ರಚಿಸಲಾದ ಕಥೆ ಹೊಂದಿದ್ದು, ಇದೀಗ ಚಳಿಗಾಲಕ್ಕೆ ಸಂಬಂಧಪಟ್ಟ ಭಾಗದ ಚಿತ್ರೀಕರಣವು ನಡೆಯುತ್ತಿದೆ. ಸಾಂಗ್ ಹಾಗೂ ಟಾಕಿ ಪೋರ್ಶನ್, ಬನ್ನೇರುಘಟ್ಟ ಹಾಗು ನಂದಿನಿ ಲೇಔಟ್ ನಲ್ಲಿ ಚಿತ್ರೀಕರಣಗೊಂಡಿದೆ.

  ಈ ಚಿತ್ರಕ್ಕೆ ಸಂಬಂಧಿಸಿದಂತೆ, ಮಳೆಗಾಲದ ಚಿತ್ರೀಕರಣ ಈಗಾಗಲೇ ಈಗಾಗಲೇ ಪೂರ್ಣಗೊಂಡಿದೆ. ಚಳಿಗಾಲದ ಚಿತ್ರೀಕರಣವನ್ನು ನಡೆಸುತ್ತಿರುವ ಚಿತ್ರತಂಡ, ಅದು ಮುಗಿದ ಮೇಲೆ ಬೇಸಿಗೆ ಕಾಲದ ಚಿತ್ರೀಕರಣದಲ್ಲಿ ಭಾಗಿಯಾಗಲಿದೆ. ಈ ಚಿತ್ರವು ಕೃತಕ ಕಾಲಗಳ ಸೃಷ್ಟಿಗೆ ಹೋಗದೇ ನೈಜ ಚಿತ್ರಣದ ಮೂಲಕವೇ ಚಿತ್ರೀಕರಣ ಮಾಡುವುದರ ಚಿತ್ರತಂಡವು ಮೂಲಕ ಇಡೀ ಚಿತ್ರರಂಗದ ಗಮನಸೆಳೆಯುತ್ತಿದೆ.

  ಕಳೆದ ಜುಲೈ ತಿಂಗಳಲ್ಲಿ ಮುಹೂರ್ತ ಆಚರಿಸಿಕೊಂಡ ಚಿತ್ರತಂಡ, ಅಂದಿನಿಂದಲೂ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲ ಮೂಡಿಸಿ ಅದನ್ನು ಹಾಗೇ ಮುಂದುವರಿಸಿಕೊಂಡು ಬಂದಿದೆ. ಸುನಿಲ್ ನಿರ್ದೇಶನದ ಈ ಚಿತ್ರಕ್ಕೆ 'ನಮ್ ಏರಿಯಾದಲ್ ಒಂದಿನ' ಹಾಗೂ 'ತುಗ್ಲಕ್' ಚಿತ್ರದಲ್ಲಿ ನಟಿಸಿದ್ದ ರಕ್ಷಿತ್ ಶೆಟ್ಟಿ ನಾಯಕರು ಹಾಗೂ 'ಸೈಬರ್ ಯುಗದೋಳ್...' ಚಿತ್ರದ ನಾಯಕಿ ಶ್ವೇತಾ ಶ್ರೀವಾಸ್ತವ್ ನಾಯಕಿ.

  ಚಿತ್ರಕ್ಕೆ ನವ ಸಂಗೀತ ನಿರ್ದೇಶಕ ಹಾಗೂ ಗಾಯಕ ಬಿಜೆ ಭರತ್ ಸಂಗೀತ ನಿರ್ದೇಶನವಿದೆ. ಮನೋಹರ್ ಜೋಶಿ ಛಾಯಾಗ್ರಹಣ ನೀಡುತ್ತಿದ್ದು ಸಚಿನ್ ಸಂಕಲನಕಾರರು. ಈ ಚಿತ್ರದ ಕಥೆ ವಿಭಿನ್ನವಾಗಿದೆ ಎಂಬ ಮಾತು ಗಾಂಧಿನಗರದ ತುಂಬಾ ಕೇಳಿಬರುತ್ತಿದ್ದು ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಮೂಡಿಬರಲು ಕಾರಣವಾಗಿದೆ. ಆದರೆ ಕಾಲಕ್ಕೆ ತಕ್ಕಂತೆ ಚಿತ್ರೀಕರಣ ನಡೆಯುತ್ತಿರುವುದರಿಂದ ಚಿತ್ರವು ತೆರೆಗೆ ಬರುವುದು ಸ್ವಲ್ಪ ತಡವಾಗಬಹುದು. (ಒನ್ ಇಂಡಿಯಾ ಕನ್ನಡ)

  English summary
  Simple Aagi Ond Love Story movie Shooting is in Progress. Sunil Debut Production and Direction this movie is shoot its talkie and song portion at Banneraghatta and Nandini Layout. The story, screenplay, dialogues all are by the Director and Producer Sunil himself for this movie.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X