For Quick Alerts
  ALLOW NOTIFICATIONS  
  For Daily Alerts

  ರೈತರ ಹೋರಾಟ ಬೆಂಬಲಿಸಿದ ನಿರ್ದೇಶಕ ಸುನಿ, ವಿನೋದ್ ಪ್ರಭಾಕರ್

  |

  ಕೃಷಿ ಸಂಬಂಧಿತ ಕಾಯ್ದೆಗಳನ್ನು ವಿರೋಧಿಸಿ ರೈತರು, ಕನ್ನಡ ಪರ ಸಂಘಟನೆಗಳು ಇಂದು ಕರ್ನಾಟಕ ಬಂದ್ ಮಾಡಿ ಪ್ರತಿಭಟನೆ ಮಾಡಿವೆ. ರಾಜ್ಯಾದ್ಯಂತ ರಸ್ತೆಗಿಳಿದ ರೈತರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

  ರೈತರ ಹೋರಾಟಕ್ಕೆ ಕನ್ನಡ ಚಲನಚಿತ್ರ ನಿರ್ದೇಶಕ ಸುನಿ ಬೆಂಬಲ ಸೂಚಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಸುನಿ ''ಕೃಷಿ ಮಾಡಿ ರಾಜಕೀಯಕ್ಕೆ ಬಂದವರೆಂದು ಹೇಳುವವರೆ, ದಯವಿಟ್ಟು ಕೃಷಿಯಲ್ಲಿ ರಾಜಕೀಯ ಮಾಡಬೇಡಿ. ರೈತರಿಗಾಗಿ ಮಸೂದೆ, ಅಂದರೆ ಅವರ ಧಿಕ್ಕಾರ ಏತಕ್ಕೆ? ಅವರನ್ನೇ ಕರೆತನ್ನಿ ..ಮಾರ್ಪಾಡಿಸಿ'' ಎಂದು ಮನವಿ ಮಾಡಿದ್ದಾರೆ.

  ರೈತರನ್ನು ಕೆರಳಿಸಿದ ಕೃಷಿ ಮಸೂದೆ ಮತ್ತು ರಾಜ್ಯಗಳ ವಿರೋಧದ ವಿವರ

  ''ಒಬ್ಬ ರೈತನಿಗೆ ಕಾರ್ಪೋರೇಟ್ ಕಂಪನಿ ಒಳಗೆ ನೇರವಾಗಿ ಹೋಗಲು ಸಾಧ್ಯವಿಲ್ಲವಾದರೆ, ಕಾರ್ಪೋರೇಟ್ ರವರಿಗೂ ಕೃಷಿಭೂಮಿಗೆ ಬರಲು ಮಾನದಂಡಗಳು ಬೇಕಲ್ಲವೆ..'' ಎಂದು ಪ್ರಶ್ನಿಸಿದ್ದಾರೆ.

  ಸುನಿ ಅವರ ಈ ಟ್ವೀಟ್ ಕುರಿತು ನೆಟ್ಟಿಗರು ಸಹ ಪರ-ವಿರೋಧ ಚರ್ಚೆ ಮಾಡುತ್ತಿದ್ದಾರೆ. ಇನ್ನು ನಟ ವಿನೋದ್ ಪ್ರಭಾಕರ್ ಸಹ ರೈತರ ಹೋರಾಟಕ್ಕೆ ಕೈ ಜೋಡಿಸಿದ್ದಾರೆ. ''ರೈತರ ಜೊತೆ ನಿಲ್ಲೋಣ, ಅನ್ನದಾತರ ಋಣ ತೀರಿಸೋಣ'' ಎಂದು ಫೇಸ್‌ಬುಕ್‌ನಲ್ಲಿ ಬೆಂಬಲ ಸೂಚಿಸಿದ್ದಾರೆ.

  simple suni and vinod prabhakar Supports farmer protest
  SPB Special : Shree Harsha about the Legend ಅವರ ತರ ಜೀವನ ನಡೆಸೋಕೆ ಯಾರಿಂದಲೂ ಆಗಲ್ಲ | Filmibeat Kannada

  'ಆ ದಿನಗಳು' ಖ್ಯಾತಿಯ ನಟ ಚೇತನ್ ಅವರು ರೈತರು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಬೆಂಬಲ ಸೂಚಿಸಿ, ಅವರ ಜೊತೆ ಹೋರಾಟದಲ್ಲಿ ಸಹ ಭಾಗಿಯಾಗಿದ್ದಾರೆ.

  English summary
  Kannada film director simple suni and actor vinod prabhakar has support farmers protest.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X