»   » ಗಾನ ಕೋಗಿಲೆ ಕೆ.ಎಸ್.ಚಿತ್ರಾ ಶಂಕರ್ ಗೆ ಹ್ಯಾಪಿ ಬರ್ತ್ ಡೇ ಹೇಳಿ

ಗಾನ ಕೋಗಿಲೆ ಕೆ.ಎಸ್.ಚಿತ್ರಾ ಶಂಕರ್ ಗೆ ಹ್ಯಾಪಿ ಬರ್ತ್ ಡೇ ಹೇಳಿ

Posted By:
Subscribe to Filmibeat Kannada

ಬಹುಭಾಷಾ ಗಾಯಕಿ ಕೆ.ಎಸ್.ಚಿತ್ರಾ ಶಂಕರ್ ಅವರ ಧ್ವನಿ ಯಾರಿಗೆ ಪರಿಚಯ ಇಲ್ಲ. ಮುಖ ಸ್ತುತಿ ಇಲ್ಲಾಂದ್ರೂನು ಸಂಗೀತ ಪ್ರೀಯರಿಗೆ ಸ್ವರ ಪರಿಚಯ ಅಂತೂ ಇದ್ದೇ ಇರುತ್ತೆ. ಇದೀಗ ಅದೇ ಕೋಗಿಲೆ ಕಂಠ ಸಿರಿಯ ಗಾನ ಪ್ರತಿಭೆಗೆ ಇಂದು (ಜುಲೈ 27) ಜನುಮ ದಿನದ ಸಡಗರ.

ಭಾರತದಲ್ಲಿ ಅತೀ ಹೆಚ್ಚು ರಾಷ್ಟ್ರ ಪ್ರಶಸ್ತಿ ಗಳಿಸಿಕೊಂಡ ಏಕೈಕ ಗಾಯಕಿ, ಮಲ್ಲು ಕುಟ್ಟಿ ಕೆ.ಎಸ್.ಚಿತ್ರಾ ಶಂಕರ್, ಇಂದು ತಮ್ಮ ಫ್ಯಾಮಿಲಿ ಹಾಗೂ ಹತ್ತಿರದ ಸಂಬಂಧಿಕರೊಂದಿಗೆ 52 ನೇ ಹುಟ್ಟು ಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡರು.

Singer K.S.Chithra, celebrates her 52nd birthday

ಕೃಷ್ಣನ್ ನಾಯರ್ ಶಾಂತಕುಮಾರಿ ಚಿತ್ರಾ ಅವರ ಹುಟ್ಟೂರು ಕೇರಳದ ತಿರುವನಂತಪುರಂ. ಮನೆಯೇ ಮೊದಲ ಪಾಠ ಶಾಲೆ ಎನ್ನುವಂತೆ ಇವರಿಗೆ ಪ್ರಥಮ ಗುರು ಇವರ ತಂದೆ ಕೃಷ್ಣ ನಾಯರ್ ಆಗಿದ್ದರಂತೆ,

ಮಾತ್ರವಲ್ಲದೇ ಚಿತ್ರಾ ಅವರ ಅಕ್ಕಾ ಕೆ.ಎಸ್ ಬೀನಾ ಕೂಡ ಗಾಯಕಿ ಯಾಗಿದ್ದು ಒಟ್ಟಾರೆ ಹೇಳಬೇಕೆಂದರೆ ಇವರ ಪೂರ್ತಿ ಕುಟುಂಬವೇ ಗಾಯನ ಸಿದ್ದಿ ಪಡೆದುಕೊಂಡಿದೆ ಅಂದರೂ ತಪ್ಪಾಗಲಾರದು.

ಕನ್ನಡ, ಮಲೆಯಾಳಂ, ತೆಲುಗು, ಉರ್ದು, ಹಿಂದಿ, ಅಸ್ಸಾಂ, ಬೆಂಗಾಲಿ, ತುಳು ಸೇರಿದಂತೆ ಅನೇಕ ಬಾಷೆಗಳಲ್ಲಿ ಇವರ ಸ್ವರ ರಿಂಗಣಿಸಿದೆ.

Singer K.S.Chithra, celebrates her 52nd birthday

ಮೊದಲಿಗೆ ಮಲಯಾಳಂನ 'ಅಟ್ಟಹಾಸಂ', 'ಸ್ನೇಹಪೂರ್ವಂ', 'ಮೀರಾ' ಚಿತ್ರದ ಮೂಲಕ ಸಂಗೀತದ ಜರ್ನಿ ಯನ್ನು ಪಾರಂಭಿಸಿದ ಚಿತ್ರಾ ಶಂಕರ್ ಕೆ.ಜೆ.ಯೇಸುದಾಸ್, ಎ.ಆರ್.ರೆಹಮಾನ್, ಹಂಸಲೇಖ, ವಿದ್ಯಾಸಾಗರ್, ಮೋಹನ್ ಸಿತಾರ ಮುಂತಾಧ ಚಿತ್ರರಂಗದ ದಿಗ್ಗಜರ ಜೊತೆ ಕೆಲಸ ಮಾಡಿದ ಅನುಭವ ಇವರಿಗಿದೆ.

ಅಲ್ಲದೆ ಚಿತ್ರಾ ಶಂಕರ್ ಅವರ ಇನ್ನೊಂದು ಸ್ಪೆಷಾಲಿಟಿ ಏನಪ್ಪಾ ಅಂದ್ರೆ ಪ್ರಪ್ರಥಮ ಬಾರಿಗೆ ಸ್ಟುಡಿಯೋ ಅಲ್ಬಂ ಹೊರತಂದ ಕೀರ್ತಿ ಇವರಿಗೆ ಸಲ್ಲುತ್ತದೆ. 1993 ರಲ್ಲಿ 'ರಗ್ಗ ರಾಗಾ' ಎಂಬ ಅಲ್ಬಂ ಹೊರಬಂದಿದ್ದು, 2000 ದಲ್ಲಿ 'ಪಿಯಾ ಬಸಂತಿ' ಹಾಗು 'ಸನ್ ಪಾಯಿಂಟ್' ಎಂಬ ಹಿಂದಿ ಆಲ್ಬಂ ಹೊರತಂದಿದ್ದಾರೆ.

ವಿದೇಶದಲ್ಲೂ ತಮ್ಮ ಸಂಗೀತದ ಸುಧೆಯನ್ನು ಹರಿಸಿರುವ ಸಾಧಕಿ, ಗಾನ ಕೋಗಿಲೆ ಚಿತ್ರಾ ಶಂಕರ್ ಅವರಿಗೆ ನಮ್ಮ ಕಡೆಯಿಂದ ಜನುಮ ದಿನದ ಶುಭಾಶಯಗಳು.

English summary
Singer K.S.Chithra, celebrated her 52nd birthday Today (July 27)with his family and friends.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada