»   » ಗಾಯಕ ರಾಜೇಶ್ ಕೃಷ್ಣನ್ ದಾಂಪತ್ಯದಲ್ಲಿ ಬಿರುಕು

ಗಾಯಕ ರಾಜೇಶ್ ಕೃಷ್ಣನ್ ದಾಂಪತ್ಯದಲ್ಲಿ ಬಿರುಕು

Posted By:
Subscribe to Filmibeat Kannada

ಇನ್ನೂ ಚಿಗುರು ಮೀಸೆ ಹುಡುಗನಂತೆ ಕಾಣುವ ಕನ್ನಡದ ಜನಪ್ರಿಯ ಹಿನ್ನೆಲೆ ಗಾಯಕ, ನಟ, ಸಂಗೀತ ನಿರ್ದೇಶಕ ರಾಜೇಶ್ ಕೃಷ್ಣನ್ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಕಾಣಿಸಿಕೊಂಡಿದೆ. ಅವರ ಬಾಳಸಂಗಾತಿ ರಮ್ಯಾ ವಸಿಷ್ಠ್ ಅವರು ವಿವಾಹ ರದ್ದು (ವಿಚ್ಛೇದನ ಅಲ್ಲ) ಕೋರಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಹಿಂದೂ ವಿವಾಹ ಕಾಯಿದೆ ಸೆಕ್ಷನ್ 12 (1) ಎ ಅಡಿ ಅವರು ರಾಜೇಶ್ ಕೃಷ್ಣನ್ ಅವರೊಂದಿಗೆ ವಿವಾಹ ರದ್ದು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಫೆ.5ರಂದೇ ಅವರು ಅರ್ಜಿ ಸಲ್ಲಿಸಿದ್ದರು. ಒಂದು ವರ್ಷದ ಹಿಂದಷ್ಟೇ ರಾಜೇಶ್ ಅವರು ರಮ್ಯಾ ಅವರನ್ನು ಕೊಲ್ಲೂರು ಮೂಕಾಂಬಿಕಾ ದೇವಿ ಸನ್ನಿಧಿಯಲ್ಲಿ ವರಿಸಿದ್ದರು.

Rajesh Krishnan, Ramya

ತುಂಬಾ ಸರಳವಾಗಿ ನಡೆದ ಈ ಮದುವೆ ಸಮಾರಂಭಕ್ಕೆ ಕೇವಲ ಆತ್ಮೀಯರು ಹಾಗೂ ಬಂಧುಬಳಗವಷ್ಟೇ ಸಾಕ್ಷಿಯಾಗಿತ್ತು. ರಾಜೇಶ್ ಕೃಷ್ಣನ್ ಅವರಿಗೆ ಇದು ಮೂರನೇ ಮದುವೆ. ಈ ಹಿಂದೆ ಅವರಿಗೆ ಎರಡು ಬಾರಿ ಮದುವೆಯಾಗಿದ್ದು ವಿಚ್ಛೇದನವೂ ಪಡೆದಿದ್ದಾರೆ.

ರಮ್ಯಾ ವಸಿಷ್ಠ್ ಅವರೊಂದಿಗೆ ರಾಜೇಶ್ ದಾಂಪತ್ಯ ಜೀವನ ಸುಖವಾಗಿರುತ್ತದೆ ಎಂದು ಅವರನ್ನು ಹತ್ತಿರದಿಂದ ಬಲ್ಲವರು ಭಾವಿಸಿದ್ದರು. ಆದರೆ ವರ್ಷ ಕಳೆಯುವಷ್ಟರಲ್ಲಿ ಎಲ್ಲವೂ ಹುಸಿಯಾಗಿದೆ. ರಾಜೇಶ್ ಕೃಷ್ಣನ್ ದಾಂಪತ್ಯ ಜೀವನ ಮತ್ತೊಮ್ಮೆ ಹಳಿ ತಪ್ಪಿದೆ. (ರಾಜೇಶ್ ವಿವಾಹ ಮುರಿದು ಬೀಳಲು ಕಾರಣಗಳು)

ಈ ಹಿಂದೆ ರಾಜೇಶ್ ಅವರಿಗೆ ಸೌಮ್ಯಾ ರಾವ್ (ಬಿಕೆ ಸುಮಿತ್ರಾ ಅವರ ಪುತ್ರಿ) ವಿವಾಹವಾಗಿ ವಿಚ್ಛೇದನವಾಗಿದೆ. ಈಗ ರಮ್ಯಾ ಅವರು ವಿವಾಹ ರದ್ದು ಕೋರಲು ಬಲವಾದ ಕಾರಣವನ್ನೂ ನೀಡಿದ್ದಾರೆ. ಅದೇನೆಂದರೆ ಅವರಿಗೆ ಲೈಂಗಿಕಕ್ರಿಯೆ (ಪುರುಷತ್ವ ಇಲ್ಲ) ನಡೆಸುವ ಸಾಮರ್ಥ್ಯ ಇಲ್ಲ ಎಂಬುದು. ಹಾಗೇ ತಾವಿನ್ನೂ ಕನ್ಯೆ ಎಂದೂ ತಿಳಿಸಿದ್ದಾರೆ ಎನ್ನಲಾಗಿದೆ. ಏ.4ರಂದು ಕೋರ್ಟ್ ಗೆ ಹಾಜರಾಗುವಂತೆ ರಾಜೇಶ್ ಅವರಿಗೆ ಕೋರ್ಟ್ ಆದೇಶಿಸಿದೆ. [ಜೋಕ್ : ಗಂಡಸ್ತನ ಪ್ರಶ್ನಿಸಿದ ಹೆಂಡತಿಗೆ ಗಂಡನ ಉತ್ತರ] (ಏಜೆನ್ಸೀಸ್)

English summary
amya Vasishta has filed for a divorce against Singer turned actor Rajesh Krishnan at the Family Court in Bangalore. Rajesh married Ramya Vasishta last year in Kukke Subramanya last year.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada