»   » ಮೌಲ್ವಿ ಸವಾಲಿಗೆ ಪ್ರತ್ಯುತ್ತರ ಕೊಟ್ಟ ಸೋನು ನಿಗಮ್

ಮೌಲ್ವಿ ಸವಾಲಿಗೆ ಪ್ರತ್ಯುತ್ತರ ಕೊಟ್ಟ ಸೋನು ನಿಗಮ್

Posted By:
Subscribe to Filmibeat Kannada

'ಆಝಾನ್' ವಿವಾದದ ಹಿನ್ನಲೆ ಗಾಯಕ ಸೋನು ನಿಗಮ್ ತಲೆ ಬೋಳಿಸಿಕೊಂಡು ಎಲ್ಲರಿಗೂ ಆಶ್ಚರ್ಯ ಉಂಟು ಮಾಡಿದ್ದಾರೆ.

ಪಶ್ಚಿಮ ಬಂಗಾಳದ ಮುಸ್ಲಿಂ ಮೌಲ್ವಿಯೊಬ್ಬರು ಸೋನು ನಿಗಮ್ ವಿರುದ್ಧ ಫತ್ವಾ ಘೋಷಣೆ ಮಾಡಿದ್ದರು. ಮತ್ತು ''ಯಾರಾದರೂ ಸೋನು ನಿಗಮ್ ಅವರ ತಲೆ ಬೋಳಿಸಿ, ಚಪ್ಪಲಿ ಹಾರ ಹಾಕಿ ದೇಶದೆಲ್ಲೆಡೆ ಮೆರವಣಿಗೆ ಮಾಡಿಸಿದರೆ ಅಂತಹವರಿಗೆ 10 ಲಕ್ಷ ಬಹುಮಾನ ನೀಡುವುದಾಗಿ'' ಘೋಷಣೆ ಮಾಡಿದ್ದರು'.['ಸೋನು ನಿಗಮ್ ತಲೆ ಬೋಳಿಸಿದವರಿಗೆ 10 ಲಕ್ಷ' ಎಂದಿದ್ದ ಮೌಲ್ವಿಗೆ ಸವಾಲೆಸೆದ ಗಾಯಕ!]

ಈ ಸಂಬಂಧ ಸೋನು ನಿಗಮ್ ಅವರು ಇಂದು ಮಧ್ಯಾಹ್ನ 2 ಗಂಟೆಗೆ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ತಾನು ಮಾಡಿರುವ ಹೇಳಿಕೆಗಳನ್ನ ಸಮರ್ಥಿಸಿಕೊಂಡ ಸೋನು ನಿಗಮ್ ನಂತರ ತಮ್ಮ ತಲೆಯನ್ನ ಬೋಳಿಸಿಕೊಂಡು ಮೌಲ್ವಿಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ. ಬಳಿಕ ಮಾತನಾಡಿದ ಅವರು ತಮ್ಮ ತಲೆಬೋಳಿಸಿಕೊಂಡಿದ್ದಲ್ಲದೆ, ತಮ್ಮ ಮಾತು ಸಾಮಾಜಿಕ ಕಳಕಳಿಯದ್ದಾಗಿತ್ತೇ ವಿನಃ ಧಾರ್ಮಿಕ ದುರುದ್ದೇಶದ್ದಾಗಿರಲಿಲ್ಲ ಎಂದಿದ್ದಾರೆ.

Singer Sonu Shaves His Head

ಘಟನೆಯ ಹಿನ್ನಲೆ:

ಸೋನು ನಿಗಮ್ ಅವರು ಮೊದಲು ಮಾಡಿದ ವಿವಾದಾತ್ಮಕ ಟ್ವೀಟ್ ನಲ್ಲಿ ಏನಿತ್ತು?

''ನಾನು ಮುಸ್ಲಿಮನಲ್ಲ. ಆದರೂ ಬೆಳಗ್ಗೆ ಆಝಾನ್ ನಿಂದಾಗಿ ಏಳುವಂತಾಗಿದೆ. ನಮ್ಮ ದೇಶದಲ್ಲಿ ಈ ಬಲವಂತದ ಧಾರ್ಮಿಕತೆ ಎಂದು ಕೊನೆಯಾಗುತ್ತದೆ. ಇಸ್ಲಾಂ ಸ್ಥಾಪನೆ ಮಾಡುವಾಗ ಮೊಹಮ್ಮದ್ ಬಳಿ ವಿದ್ಯುತ್ ಇರಲಿಲ್ಲ. ಧಾರ್ಮಿಕತೆಯನ್ನೇ ಪಾಲನೆ ಮಾಡದ ಜನರನ್ನು ಎದ್ದೇಳಿಸಲು ವಿದ್ಯುತ್ ಬಳಕೆ ಮಾಡುವ ದೇಗುಲ ಅಥವಾ ಗುರುದ್ವಾರವನ್ನು ನಾನು ನಂಬುವುದಿಲ್ಲ'' ಎಂದು ಬರೆದುಕೊಂಡಿದ್ದರು.[ವಿವಾದ ಹುಟ್ಟುಹಾಕಿದ ಗಾಯಕ ಸೋನು ನಿಗಮ್ ಟ್ವೀಟ್!]

Singer Sonu Shaves His Head

ಸೋನು ನಿಗಮ್ ಅವರು ಆ ಅವರ ಹೇಳಿಕೆಯ ಖಂಡಿಸಿದ್ದ ಪಶ್ಚಿಮ ಬಂಗಾಳದ ಮುಸ್ಲಿಂ ಮೌಲ್ವಿಯೊಬ್ಬರು ''ಯಾರಾದರೂ ಸೋನು ನಿಗಮ್ ಅವರ ತಲೆ ಬೋಳಿಸಿ, ಚಪ್ಪಲಿ ಹಾರ ಹಾಕಿ ದೇಶದೆಲ್ಲೆಡೆ ಮೆರವಣಿಗೆ ಮಾಡಿಸಿದರೆ ಅಂತಹವರಿಗೆ 10 ಲಕ್ಷ ಬಹುಮಾನ ನೀಡುವುದಾಗಿ'' ಘೋಷಣೆ ಮಾಡಿದ್ದರು.

ಇದಕ್ಕೆ ಸಂಬಂಧಪಟ್ಟಂತೆ ಸೋನು ನಿಗಮ್ ಟ್ವೀಟ್ ಮೂಲಕವೇ ಸವಾಲೆಸದಿದ್ದಾರೆ. ''ಇಂದು ಮಧ್ಯಾಹ್ನ 2 ಗಂಟೆಗೆ ಆಲೀಮ್ ನನ್ನ ಜಾಗಕ್ಕೆ ಬರುತ್ತಾನೆ. ನನ್ನ ತಲೆ ಕೂದಲನ್ನ ಬೋಳಿಸುತ್ತಾನೆ. 10 ಲಕ್ಷ ಸಿದ್ದ ಮಾಡ್ಕೊಳ್ಳಿ. ಮಾಧ್ಯಮದವರು ದಯವಿಟ್ಟು ಭಾಗವಹಿಸಿ'' ಎಂದು ಮೌಲ್ವಿಗೆ ಟಾಂಗ್ ಕೊಟ್ಟಿದ್ದರು.

English summary
Singer Sonu Shaves His Head. Sonu Nigam has invited the Press to be present as he has his head shaved after a Muslim cleric announced a Reward of Rs 10 crore to anybody who could tonsure the singer.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada