»   » ಸುದೀಪ್ ರನ್ನು ಭೇಟಿ ಮಾಡಿದ ಸಲ್ಮಾನ್ ಖಾನ್ ಸಹೋದರ ಸೋಹೆಲ್

ಸುದೀಪ್ ರನ್ನು ಭೇಟಿ ಮಾಡಿದ ಸಲ್ಮಾನ್ ಖಾನ್ ಸಹೋದರ ಸೋಹೆಲ್

Posted By:
Subscribe to Filmibeat Kannada

ನಟ ಸುದೀಪ್ ಈಗ ಚುನಾವಣಾ ಪ್ರಚಾರದಲ್ಲಿ ಬ್ಯುಸಿ ಇದ್ದಾರೆ. ಈ ನಡುವೆ ಸುದೀಪ್ ಅವರನ್ನು ಬಾಲಿವುಡ್ ನಟ ಸಲ್ಮಾನ್ ಖಾನ್ ಸಹೋದರ ಸೋಹೆಲ್ ಖಾನ್ ಭೇಟಿ ಮಾಡಿದ್ದಾರೆ. ಇದೊಂದು ಸಾಮಾನ್ಯ ಭೇಟಿ ಆಗಿದ್ದು, ಇತ್ತೀಚಿಗಷ್ಟೆ ಬೆಂಗಳೂರಿಗೆ ಬಂದಿದ್ದ ಸೋಹೆಲ್ ಖಾನ್ ಸುದೀಪ್ ಅವರನ್ನು ಮೀಟ್ ಮಾಡಿದ್ದಾರೆ.

ಬಾಲಿವುಡ್ ನಟರಾದ ಸೋಹೆಲ್ ಖಾನ್ ಸೋನು ಸೂದ್, ಮತ್ತು ಅರ್ಬಾಜ್ ಖಾನ್ ಎಂ ಇ ಪಿ ಪಕ್ಷದ ಚುನಾವಣಾ ಪ್ರಚಾರಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದರು ಇದೇ ವೇಳೆ ನಟ ಸುದೀಪ್ ಅವರನ್ನು ಈ ಇಬ್ಬರು ನಟರು ಭೇಟಿ ಮಾಡಿದ್ದಾರೆ. ಈ ಹಿಂದೆ ಸಿ ಸಿ ಎಲ್ ಪಂದ್ಯದ ಸಮಯದಿಂದಲು ಸುದೀಪ್ ಜೊತೆಗೆ ಸೋಹೆಲ್ ಖಾನ್ ಒಳ್ಳೆಯ ಗೆಳೆತನ ಹೊಂದಿದ್ದಾರೆ.

sohil khan met kannada actor sudeep

ಸೋಹೆಲ್ ಖಾನ್, ಸೋನು ಸೂದ್, ಮತ್ತು ಅರ್ಬಾಜ್ ಖಾನ್ ಜೊತೆಗೆ ಸುದೀಪ್ ಈ ವೇಳೆ ಫೋಟೋ ತೆಗೆದುಕೊಂಡು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತನ್ನ ಸಹೋದರರಾದ ಸೋಹೆಲ್ ಖಾನ್ ಮತ್ತು ಅರ್ಬಾಜ್ ಖಾನ್ ಜೊತೆಗೆ ಕೆಲ ಕಾಲ ಕಳೆದೆ ಎಂದು ತಿಳಿಸಿದ್ದಾರೆ. ಈ ಸಮಯದಲ್ಲಿ ನಿರ್ದೇಶಕ ಕೃಷ್ಣ, ಜೀ ಕನ್ನಡ ವಾಹಿನಿಯ ಬಿಜಿನೆಸ್ ಹೆಡ್ ರಾಘವೇಂದ್ರ ಹುಣಸೂರು ಸೇರಿದಂತೆ ಕೆಲ ಗೆಳೆಯರು ಜೊತೆಗಿದ್ದರು.

sohil khan met kannada actor sudeep

ಅಂದಹಾಗೆ, ಈ ಹಿಂದೆ ಸಲ್ಮಾನ್ ಖಾನ್ ಅವರ 'ಟೈಗರ್ ಜಿಂದಾ ಹೈ' ಸಿನಿಮಾದಲ್ಲಿ ಸುದೀಪ್ ನಟಿಸುತ್ತಾರೆ ಎನ್ನುವ ಸುದ್ದಿ ಇತ್ತು. ಆದರೆ ಚಿತ್ರದಲ್ಲಿ ಸುದೀಪ್ ನಟಿಸಲು ಸಾಧ್ಯ ಆಗಿರಲಿಲ್ಲ.

English summary
Bollywood actor Sohil Khan met kannada actor Sudeep.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X