Don't Miss!
- News
Ejipura Flyover: ಟೆಂಡರ್ ಕರೆಯಲು ಮೀರಿದ ಸಮಯ, ಸ್ಥಳೀಯರ ಆಕ್ರೋಶ
- Technology
PVRನಿಂದ ಭರ್ಜರಿ ಸಿಹಿಸುದ್ದಿ; ಸಿನಿಮಾ ಪ್ರಿಯರ ಕಣ್ಣಿಗೆ ಹಬ್ಬದ ಸಂಭ್ರಮ!
- Sports
Asia Cup 2023: ಪಾಕ್ನಲ್ಲಿ ಭಾರತ ಏಷ್ಯಾಕಪ್ ಆಡದಿದ್ದರೆ, ವಿಶ್ವಕಪ್ ಆಡಲ್ಲ; ಎಚ್ಚರಿಕೆ ನೀಡಿದ ಪಿಸಿಬಿ
- Automobiles
ಸೆಲ್ಟೋಸ್ನ ಗೇರ್ಬಾಕ್ಸ್ನಲ್ಲಿ ದೋಷ ಕಂಡು ಬಂದಾಗ ಉಚಿತವಾಗಿ ಬದಲಾಯಿಸಿ ಕೊಟ್ಟ ಕಿಯಾ
- Lifestyle
ಮಕ್ಕಳನ್ನು 'ಅಮ್ಮ' ದಡಾರದಿಂದ ರಕ್ಷಿಸಲು ಇದೇ ತಿಂಗಳು ತಪ್ಪದೆ ಕೊಡಿಸಿ MR ಲಸಿಕೆ
- Finance
Twitter: ಟ್ವಿಟ್ಟರ್‌ನಲ್ಲಿ ಗೋಲ್ಡ್ ಬ್ಯಾಡ್ಜ್ ಉಳಿಸಿಕೊಳ್ಳಬೇಕಾದರೆ ಇಷ್ಟು ಮೊತ್ತ ಪಾವತಿಸಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸೌದಿ ದೊರೆಗಳ ಭಯದಿಂದ ತಣ್ಣಗಾದರೆ ಸೋನು ನಿಗಂ? ಟ್ವಿಟರ್ ಖಾತೆ ನಾಪತ್ತೆ
ಖ್ಯಾತ ಗಾಯಕ ಸೋನು ನಿಗಂ ಅವರ ಟ್ವಿಟ್ಟರ್ ಖಾತೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದೆ. ಸೌದಿ ದೊರೆಗಳ ಭಯಕ್ಕೆ ಅವರು ಟ್ವಿಟ್ಟರ್ ಖಾತೆ ನಿಷ್ಕ್ರಿಯಗೊಳಿಸಿದ್ದಾರೆ ಎನ್ನಲಾಗುತ್ತಿದೆ.
ಭಾರತದ ರಾಜಕಾರಣಿಗಳ, ಸೆಲೆಬ್ರಿಟಿಗಳ 'ಇಸ್ಲಾಮೋಫೋಬಿಕ್' (ಮುಸ್ಲಿಂ ವಿರೋಧಿ) ಟ್ವೀಟ್‌ಗಳ ಬಗ್ಗೆ ಸೌದಿ ಪ್ರಮುಖರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಸ್ಲಾಂ ಮಹಿಳೆಯರ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಅವರ ಕೆಲ ವರ್ಷಗಳ ಹಿಂದೆ ಮಾಡಿದ್ದ ಕೀಳು ಮಟ್ಟದ ಟ್ವೀಟ್ ವೈರಲ್ ಆದ ಬೆನ್ನಲ್ಲೇ ಸೋನು ನಿಗಮ್ ಈ ಹಿಂದೆ ಮಾಡಿದ್ದ ಆಜಾನ್ ವಿರೋಧಿ ಟ್ವೀಟ್ ಗಳು ಸಹ ಚರ್ಚೆಗೆ ಬಂದಿದೆ.
Recommended Video
ಮೂರು ವರ್ಷದ ಹಿಂದೆ ಗಾಯಕ ಸೋನು ನಿಗಂ ಅವರು ಆಜಾನ್ ಅನ್ನು ವಿರೋಧಿಸಿ ಟ್ವೀಟ್ ಮಾಡಿದ್ದರು. ಆಜಾನ್ ಅನ್ನು ಲೌಡ್‌ಸ್ಪೀಕರ್ ನಲ್ಲಿ ಹಾಕುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಅವರು ಸರಣಿ ಟ್ವೀಟ್‌ಗಳನ್ನು ಮಾಡಿದ್ದರು.

ತೇಜಸ್ವಿ ಸೂರ್ಯ ಟ್ವೀಟ್ ಬಗ್ಗೆಯೂ ಆಕ್ಷೇಪ
ತೇಜಸ್ವಿ ಸೂರ್ಯ ಅವರ ಹಳೆಯ ಟ್ವೀಟ್ ಬಗ್ಗೆ ಸೌದಿ ಅರಸರ ಕುಟುಂಬಕ್ಕೆ ಸಂಬಂಧಿಸಿದವರೇ ಟ್ವಿಟ್ಟರ್‌ನಲ್ಲಿ ಆಕ್ಷೇಪ ಎತ್ತಿದ ಬಳಿಕ, ಸೋನು ನಿಗಂ ಟ್ವೀಟ್‌ಗಳ ಬಗ್ಗೆಯೂ ಸೌದಿಯ ನಾಗರೀಕರು ಆಕ್ಷೇಪ ವ್ಯಕ್ತಪಡಿಸಿದ್ದರು.

ಸೋನು ನಿಗಂ ಈಗ ದುಬೈ ನಲ್ಲೇ ಇದ್ದಾರೆ
ವಿಚಿತ್ರವೆಂದರೆ ಸೋನು ನಿಗಂ ಈಗ ದುಬೈನಲ್ಲೇ ಇದ್ದು, ಕೊರೊನಾ ಲಾಕ್‌ಡೌನ್ ನಿಂದಾಗಿ ತಿಂಗಳಿನಿಂದಲೂ ಅಲ್ಲಿಯೇ ಉಳಿದಿದ್ದಾರೆ. ಈ ಸಮಯದಲ್ಲಿ ಟ್ವಿಟ್ಟರ್‌ನಲ್ಲಿ ತಮ್ಮ ಹಳೆಯ ಇಸ್ಲಾಂ ವಿರೋಧಿ ಟ್ವೀಟ್‌ಗಳು ವೈರಲ್ ಆಗುತ್ತಿದ್ದಂತೆ ಅವರು ತಮ್ಮ ಟ್ವಿಟ್ಟರ್ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದಾರೆ.

'ಸೋನು ನಿಗಂ ಆಜಾನ್ ಕೇಳುವಂತೆ ಮಾಡಿ'
ಸೌದಿ ನಾಗರೀಕರು ಸೋನು ನಿಗಂ ಮೂರು ವರ್ಷಗಳ ಹಿಂದೆ ಮಾಡಿದ್ದ ಟ್ವೀಟ್ ನ ಸ್ಕ್ರೀನ್ ಶಾಟ್‌ಗಳನ್ನು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈತನನ್ನು ಒಂದು ಕೋಣೆಯಲ್ಲಿ ಬಂದ್ ಮಾಡಿ ಆಜಾನ್ ಕೇಳುವಂತೆ ಮಾಡಿ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.
|
ರಾಜಕುಮಾರಿ ಹೆಂದ್ ಅಲ್ ಕಸೀಮಿ ಸರಣಿ ಟ್ವೀಟ್
ಭಾರತೀಯರ 'ಇಸ್ಲಾಮೋಫೋಬಿಕ್' ಟ್ವೀಟ್‌ಗಳು, ಮುಸ್ಲಿಂ ವಿರೋಧಿ ಅತಿರೇಕದ ಹೇಳಿಕೆಗಳನ್ನು ಸೌದಿ ರಾಷ್ಟ್ರ ಗಂಭಿರವಾಗಿ ಪರಿಗಣಿಸಿದಂತಿದೆ. ಸೌದಿಯ ರಾಜಕುಮಾರಿ ಹೆಂದ್ ಅಲ್ ಕಸೀಮಿ ಸರಣಿ ಟ್ವೀಟ್‌ಗಳನ್ನು ಮಾಡಿ ಭಾರತೀಯರ ಕೆಲವರ ಮುಸ್ಲಿಂ ವಿರೋಧಿ ಹೇಳಿಕೆಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅವರು ತಮ್ಮ ಟ್ವೀಟ್‌ಗಳಲ್ಲಿ ಗಾಂಧಿ ನಾಡಲ್ಲಿ ಧರ್ಮಬೇಧ ನಡೆಯುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸೌದಿ ನೆಲದಲ್ಲಿ ಇಸ್ಲಾಂ ವಿರೋಧಿ ಹೇಳಿಕೆಗಳಿಗೆ ಶಿಕ್ಷೆ ಇರುವುದಾಗಿ ಎಚ್ಚರಿಕೆ ಸಹ ನೀಡಿದ್ದಾರೆ.