For Quick Alerts
  ALLOW NOTIFICATIONS  
  For Daily Alerts

  ಯಾದಗಿರಿಯ ಬಡ ದಂಪತಿ ಮೊಬೈಲ್‌ಗೆ ಸೋನು ಸೂದ್ ಸಂದೇಶ!

  |

  ಕೊರೊನಾ ಸಂಕಷ್ಟ ಕಾಲದಲ್ಲಿ ಕಾರ್ಮಿಕರ ನೆರವಿಗೆ ನಿಂತು, ಸರ್ಕಾರವೊಂದು ಮಾಡಬೇಕಾದ ಕೆಲಸವನ್ನು ಹೆಗಲ ಮೇಲೆ ಹೊತ್ತು ಮಾಡಿದ ಸೋನು ಸೂದ್ ತಮ್ಮ ಸೇವೆಯನ್ನು ಮುಂದುವರೆಸಿದ್ದಾರೆ.

  ಮಹಾರಾಷ್ಟ್ರದಲ್ಲಿ ಸಿಲುಕಿದ್ದ ಕರ್ನಾಟಕದ ಕಾರ್ಮಿಕರನ್ನು ವಿಶೇಷ ಬಸ್ಸಿನ ಮೂಲಕ ರಾಜ್ಯಕ್ಕೆ ವಾಪಸ್ ಕಳಿಸಿದ್ದ ಸೋನು ಸೂದ್. ಈಗ ಯಾದಗಿರಿ ಜಿಲ್ಲೆಯ ಬಡ ಕುಟುಂಬವೊಂದಕ್ಕೆ ಆರ್ಥಿಕ ನೆರವು ನೀಡಿದ್ದಾರೆ.

  ಒಂದೇ ಬಾರಿಗೆ ಮೂರು ಮಕ್ಕಳನ್ನು ಹೆತ್ತ ತಾಯಿಗೆ ಹಾಗೂ ಆಕೆಯ ಕುಟುಂಬಕ್ಕೆ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದ್ದಾರೆ ನಟ ಸೋನು ಸೂದ್.

  ವಾರಿಯರ್ ಅಜ್ಜಿಗೆ ಸೋನು ಸೂದ್ ಸಹಾಯ: ಮಾರ್ಷಲ್ ಆರ್ಟ್ಸ್ ತರಬೇತಿ ಶಾಲೆ ನಿರ್ಮಿಸಿದ ನಟ

  ಯಾದಗಿರಿ ಜಿಲ್ಲೆಯ ರಾಮಸಮುದ್ರ ಗ್ರಾಮದ ಪದ್ಮ ಎಂಬುವರಿಗೆ ಮೂರು ದಿನಗಳ ಹಿಂದೆ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿದ್ದು, ಒಂದೇ ಬಾರಿಗೆ ಮೂರು ಮಕ್ಕಳಿಗೆ ಜನ್ಮ ನೀಡಿದ್ದಾರೆ ತಾಯಿ. ಪ್ರಸ್ತುತ ತಾಯಿ ಮತ್ತು ಮಕ್ಕಳು ಆರೋಗ್ಯದಿಂದಿವೆ.

  ಮೂವರು ಮಕ್ಕಳನ್ನು ಸಾಕುವ ಚಿಂತೆಯಲ್ಲಿದ್ದ ಕುಟುಂಬ

  ಮೂವರು ಮಕ್ಕಳನ್ನು ಸಾಕುವ ಚಿಂತೆಯಲ್ಲಿದ್ದ ಕುಟುಂಬ

  ಆದರೆ ಬಡ ಕುಟುಂಬದವರಾದ ಪದ್ಮ ಮತ್ತು ಪತಿ ನಾಗರಾಜ್, ಮೂವರು ಮಕ್ಕಳನ್ನು ಒಮ್ಮೆಲೆ ಸಾಕುವುದು ಹೇಗೆಂದು ಚಿಂತೆಗೀಡಾಗಿದ್ದರು. ಇದನ್ನು ಗಮನಿಸಿದ ಪತ್ರಕರ್ತ ಮಲ್ಲು ಹತ್ತೋಣಿ ಎಂಬುವರು ವಿಚಾರವನ್ನು ಸೋನು ಸೂದ್‌ಗೆ ಸಾಮಾಜಿಕ ಜಾಲತಾಣ ಮೂಲಕ ತಲುಪಿಸಿದ್ದಾರೆ.

  ನಾಗರಾಜ್ ಕಷ್ಟಕ್ಕೆ ಸೋನು ಸೂದ್ ಸ್ಪಂದನೆ

  ನಾಗರಾಜ್ ಕಷ್ಟಕ್ಕೆ ಸೋನು ಸೂದ್ ಸ್ಪಂದನೆ

  ಕೂಡಲೇ ಸ್ಪಂದಿಸಿದ ನಟ ಸೋನು ಸೂದ್, ನಾಗರಾಜ್, ಪದ್ಮ ಕುಟುಂಬಕ್ಕೆ ಎರಡು ತಿಂಗಳಿಗೆ ಆಗವಷ್ಟು ಆಹಾರ ಸಾಮಾಗ್ರಿಗಳನ್ನ ಕೋರಿಯರ್ ಮೂಲಕ ಕಳುಹಿಸಿಕೊಡಲಾಗುವುದು ಎಂದು ಸ್ವತಃ ನಾಗರಾಜ್ ವಾಟ್ಸಪ್‌ಗೆ ಸಂದೇಶ ಕಳಿಸಿದ್ದಾರೆ. ಜೊತೆಗೆ ಮಕ್ಕಳ ಚಿಕಿತ್ಸೆಗೆ ಬೇಕಾಗುವ ಆರ್ಥಿಕ ಸಹಾಯ ಮತ್ತು ಕುಟುಂಬ ನಿರ್ವಹಣೆಗೆ ಸಹಾಯ ಮಾಡುವುದಾಗಿ ಸೋನು ಸೂದ್ ಭರವಸೆ ನೀಡಿದ್ದಾರೆ.

  ಪ್ರವಾಹದಿಂದ ಹಾನಿಗೊಳಗಾದ ಕುಟುಂಬಕ್ಕೆ ಎಮ್ಮೆ ಖರೀದಿಸಿ ಸೋನು ಸೂದ್ ಹೇಳಿದ್ದೇನು?

  ನಿರಾಳವಾಗಿರುವ ನಾಗರಾಜ್-ಪದ್ಮಾ

  ನಿರಾಳವಾಗಿರುವ ನಾಗರಾಜ್-ಪದ್ಮಾ

  ಮೂರು ಮಕ್ಕಳನ್ನು ಸಾಕುವುದು ಹೇಗೆ? ಎಂದು ಚಿಂತಿತರಾಗಿದ್ದ ನಾಗರಾಜ್ ಮತ್ತು ಪದ್ಮ ದಂಪತಿ, ಸೋನು ಸೋದ್ ಭರವಸೆಯಿಂದಾಗಿ ನಿರಾಳಗೊಂಡಿದ್ದಾರೆ. ನಾಗರಾಜ್ ಮತ್ತು ಪದ್ಮಾ ಹೊಸ ಹುರುಪಿನೊಂದಿಗೆ ಮಕ್ಕಳ ಆರೈಕೆಯಲ್ಲಿ ತೊಡಗಿದ್ದಾರೆ.

  ಕೊರೊನಾ ಸಮಯದಲ್ಲಿ ಸೋನು ಸೂದ್ ಸೇವೆ

  ಕೊರೊನಾ ಸಮಯದಲ್ಲಿ ಸೋನು ಸೂದ್ ಸೇವೆ

  ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಸಾವಿರಾರು ಮಂದಿಗೆ ಸ್ವಂತ ಹಣದಲ್ಲಿ ಸೋನು ಸೂದ್ ಸಹಾಯ ಮಾಡಿದ್ದಾರೆ. ಲಾಕ್‌ಡೌನ್‌ನಿಂದಾಗಿ ಮನೆಗೆ ತೆರಳಲಾಗದೆ ಸಿಲುಕಿಕೊಂಡಿದ್ದ ಕಾರ್ಮಿಕರನ್ನು ಸ್ವಂತ ಖರ್ಚಿನಲ್ಲಿ ಬಸ್ಸು, ರೈಲು, ವಿಮಾನಗಳಲ್ಲಿ ಸ್ವಂತ ಊರಿಗೆ ತೆರಳುವಂತೆ ಮಾಡಿದ್ದಾರೆ ಸೋನು ಸೂದ್. ತಮ್ಮ ಸಮಾಜ ಸೇವೆಯನ್ನು ಇನ್ನೂ ಮುಂದುವರೆಸಿದ್ದಾರೆ ಸೋನು ಸೋದ್.

  ಕಾಮಿಡಿ ಶೋನಲ್ಲಿ ಕಣ್ಣೀರಿಟ್ಟ 'ನಿಜ ಹೀರೋ' ನಟ ಸೋನು ಸೂದ್

  English summary
  Actor Sonu Sood extended his help to Yadagiri district's poor family which has three new born babies.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X